ಫಸ್ಟ್ ಡೇಟ್‌ನಲ್ಲೇ ಅಪರಿಚಿತನ ಜೊತೆ ಹುಡುಗಿ ರೂಂಗೆ ತೆರಳಲ್ಲ, ಬಲಾತ್ಕಾರ ಆರೋಪ ಖುಲಾಸೆಗೊಳಿಸಿದ ಕೋರ್ಟ್!
ಅಪರಿಚಿತನ ಜೊತೆಗಿನ ಮೊದಲ ಡೇಟಿಂಗ್‌ನಲ್ಲೇ ಹುಡುಗಿ ಹೊಟೆಲ್ ರೂಂಗೆ ತೆರಳುವುದಿಲ್ಲ ಎಂದು ಹೈಕೋರ್ಟ್ ಮಹತ್ವ ಅಂಶ ಉಲ್ಲೇಖಿಸಿ,, ಆರೋಪಿ ಮೇಲಿನ ಬಲಾತ್ಕಾರ ಆರೋಪವನ್ನು ಖುಲಾಸೆಗೊಳಿಸಿದೆ. ಏನಿದು ಪ್ರಕರಣ.
ಮುಂಬೈ(ಸೆ.16) ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಆರೋಪಿ ಹೈಕೋರ್ಟ್ ಮೆಟ್ಟಿಲೇರಿ ಕೇಸ್ ಖುಲಾಸೆಗೊಳಿಸಿದ ವಿಶೇಷ ಘಟನೆ ನಡೆದಿದೆ. ಮುಂಬೈ ಹೈಕೋರ್ಟ್‌ನ ನಾಗ್ಪುರ ಪೀಠ ನೀಡಿದ ಆದೇಶ ಹಾಗೂ ಉಲ್ಲೇಖಿಸಿದ ಮಹತ್ವದ ಅಂಶ ಇಡೀ ಪ್ರಕರಣದ ಹೈಲೈಟ್ಸ್. ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಅಪರಿಚಿತ ವ್ಯಕ್ತಿ ಜೊತೆ ಮೊದಲ ಡೇಟಿಂಗ್‌ನಲ್ಲಿ ವಿವೇಚನೆಯುಳ್ಳ ಹುಡುಗಿ ನೇರವಾಗಿ ಹೊಟೆಲ್ ರೂಂಗೆ ತೆರಳುವುದಿಲ್ಲ ಎಂದು ಪೀಠ ಹೇಳಿದೆ. ಇಷ್ಟೇ ಅಲ್ಲ ಆರೋಪಿ ಮೇಲೆ ಬಲಾತ್ಕಾರ ಆರೋಪವನ್ನೇ ಖುಲಾಸೆಗೊಳಿಸಿದೆ.
ಸಂತ್ರಸ್ತೆ ಹುಡುಗಿ ದೂರಿನಲ್ಲಿ ಉಲ್ಲೇಖಿಸಿರುವಂತೆ ಅಪರಿಚಿತ ವ್ಯಕ್ತಿ ನೇರವಾಗಿ ಹೊಟೆಲ್ ರೂಂಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಉಲ್ಲೇಖಿಸಿದ್ದಾರೆ. ಇನ್ನು ಸೆಷನ್ ಕೋರ್ಟ್‌ನ ವಿಚಾರಣೆಯಲ್ಲೂ ಇದೇ ವಾದವನ್ನು ಮುಂದಿಟ್ಟಿದ್ದಾರೆ. ಆದರೆ ಒಬ್ಬ ಹುಡುಗಿ, ಅಪರಿಚಿತನ ಜೊತೆಗಿನ ಮೊದಲ ಬೇಟಿಯಲ್ಲಿ ರೂಂಗೆ ಹೋಗುವುದಿಲ್ಲ. ಯುವಕನ ಬೇಡಿಕೆಯನ್ನು ಹುಡುಗಿ ಒಪ್ಪಿಕೊಂಡಿದ್ದಾಳೆ ಅನ್ನೋದು ಸ್ಪಷ್ಟ. ಸಮ್ಮತದಲ್ಲಿ ನಡೆದಿರುವ ಲೈಂಗಿಕತೆಯನ್ನು ಬಳಿಕ ಬಲಾತ್ಕಾರ ಆರೋಪವಾಗಿ ಹೊರಿಸಲು ಸಾಧ್ಯವಿಲ್ಲ ಎಂದು ಬಾಂಬೈ ಹೈಕೋರ್ಟ್ ಹೇಳಿದೆ. ಈ ಮೂಲಕ ಆರೋಪಿ ಮೇಲಿದ್ದ ಪೋಕ್ಸೋ ಕೇಸ್ ಖುಲಾಸೆಗೊಳಿಸಿದೆ.
ಕಳಪೆ ಸಾಸ್ ನೀಡಿದ ರೈಲು ವೆಂಡರ್‌ಗೆ ದಶಕದ ಬಳಿಕ ಶಿಕ್ಷೆ ಪ್ರಕಟ, ಕೋರ್ಟ್ ವಿಧಿಸಿದ ದಂಡವೆಷ್ಟು?
2017ರಲ್ಲಿ ಜಲಗಾಂವ್ ನಿವಾಸಿ ರಾಹುಲ್ ಲಹಾಸೆ ಫೇಸ್‌ಬುಕ್ ಮೂಲಕ ಪಿಯುಸಿ ವಿದ್ಯಾರ್ಥಿನಿ ಪರಿಚಯವಾಗಿತ್ತು. ಚಾಟಿಂಗ್‌ನಲ್ಲಿ ಆತ್ಮೀಯವಾಗಿದ್ದಾರೆ. ಬಳಿಕ ಬೇಟಿಯಾಗಿದ್ದಾರೆ. ರಾಹುಲ್ ಬೇಡಿಕೆಯಂತೆ ಬಳಿಕ ಹೊಟೆಲ್ ರೂಂಗೆ ತೆರಳಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಬಳಿಕ ಸಂಬಂಧ ಹಳಸಿದೆ. ರಾಹುಲ್ ಆಕೆಯ ಜೊತೆಗಿನ ಫೋಟೋಗಳನ್ನು ಯುವತಿ ಪೋಷಕರಿಗೆ ಸೇರಿದಂತೆ ಹಲವರಿಗೆ ಕಳುಹಿಸಿದ್ದಾನೆ. ಹೀಗಾಗಿ ಪ್ರಕರಣ ದಾಖಲಾಗಿದೆ.
2021ರಲ್ಲಿ ಅಮರಾವತಿ ಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ್ದ ರಾಹುಲ್‌ಗೆ ಇದೀಗ ಗೆಲುವಾಗಿದೆ. ಆದರೆ ಯುವತಿ ವಾದದಲ್ಲಿ, ಆನ್‌ಲೈನ್ ಮೂಲಕ ಪರಿಚಯವಾದ ರಾಹುಲ್, ಭೇಟಿಗಾಗಿ ಹೊಟೆಲ್ ರೂಂ ಬುಕ್ ಮಾಡಿದ್ದ. ಹೊಟೆಲ್‌ಗೆ ಬರಲು ಹೇಳಿ ಬಲಾತ್ಕಾರ ಎಸಗಿದ್ದಾನೆ ಎಂದಿದ್ದಾಳೆ. ಇದು ಹೈಕೋರ್ಟ್ ಪೀಠಕ್ಕೆ ಅನುಮಾನ ತರಿಸಿದೆ. ದಾಖಲೆ, ವಾದ ಪ್ರತಿವಾದಗಳ ಬಳಿಕ ಪೀಠ, ಯುವಕ ಮೇಲಿದ್ದ ಪೋಕ್ಸ್ ಕೇಸ್ ರದ್ದುಪಡಿಸಿ ಆರೋಪದಿಂದ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಜೈಲಿಂದ ಬಿಡುಗಡೆಯಾದರೂ ಕೇಜ್ರಿವಾಲ್‌ಗೆ ತಪ್ಪಿಲ್ಲ ಸಂಕಷ್ಟ, ಹೊಸ ಕೇಸ್ ದಾಖಲು!