Asianet Suvarna News Asianet Suvarna News

ಅಯೋಧ್ಯೆ ತಲುಪಿದ ರಾಜಸ್ಥಾನದ ಶಿಲ್ಪಿ ಕೆತ್ತಿದ ಶ್ರೀರಾಮ ಮೂರ್ತಿ, ಅರುಣ್‌ ಯೋಗಿರಾಜ್‌ ಶಿಲ್ಪವೇ ಫೈನಲ್‌ ಎಂದ ಕಲಾವಿದ!

ಶಿಲ್ಪಿ ಚಂದ್ರೇಶ್ ಪಾಂಡೆ ಕೆತ್ತಿರುವ ಭಗವಾನ್ ರಾಮಲಲ್ಲಾ ಅವರ ಪ್ರತಿಮೆಯನ್ನು ಅಯೋಧ್ಯೆಗೆ ಶಿಫ್ಟ್‌ ಮಾಡಲಾಗಿದೆ. ಇದರ ನಡುವೆ ಕನ್ನಡಿಗ ಅರುಣ್‌ ಯೋಗಿರಾಜ್‌ ಕೆತ್ತಿರುವ ಮೂರ್ತಿಯೇ ಫೈನಲ್‌ ಆಗಿದೆ ಎಂದು ಅವರು ತಿಳಿಸಿದ್ದಾರೆ.
 

idol of Lord Ram Lalla made by Jaipur based sculptor reaches Ayodhya san
Author
First Published Jan 5, 2024, 8:15 PM IST

ನವದೆಹಲಿ (ಜ.5): ಜೈಪುರ ಮೂಲದ ಶಿಲ್ಪಿ ಕೆತ್ತಿರುವ 51 ಇಂಚು ಎತ್ತರದ ರಾಮಲಲ್ಲಾ ವಿಗ್ರಹ ಗುರುವಾರ ಉತ್ತರ ಪ್ರದೇಶದ ಅಯೋಧ್ಯೆಗೆ ತಲುಪಿದೆ. ಅಯೋಧ್ಯೆಯ ಶ್ರೀರಾಮ ಮಂದಿರ ಗರ್ಭಗುಡಿಯಲ್ಲಿ ಇಡಲಾಗುವ 51 ಇಂಚು ಎತ್ತರದ ಬಾಲರಾಮನ ಮೂರ್ತಿ ಕೆತ್ತಲು ಒಟ್ಟು ಮೂವರು ಶಿಲ್ಪಿಗಳನ್ನು ಫೈನಲ್‌ ಮಾಡಲಾಗಿತ್ತು. ಇದರಲ್ಲಿ ಕರ್ನಾಟಕದ ಇಬ್ಬರಿದ್ದರೆ,  ರಾಜಸ್ಥಾನ ಮೂಲದ ಚಂದೇಶ್‌ ಪಾಂಡೆ ಕೂಡ ಒಬ್ಬರಾಗಿದ್ದರು. ಈ ಮೂರು ಮೂರ್ತಿಗಳ ಪೈಕಿ ಒಂದು ಮೂರ್ತಿಯನ್ನು ಜನವರಿ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಫೈನಲ್‌ ಮಾಡುವುದಾಗಿ ಮೊದಲು ಘೋಷಣೆ ಮಾಡಲಾಗಿತ್ತು. ಆದರೆ, ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುವ ಮುನ್ನವೇ ತಮ್ಮ ಮೂರ್ತಿ ರೇಸ್‌ನಿಂದ ಹೊರಬಿದ್ದಿದೆ ಎಂದು ಸ್ವತಃ ಚಂದ್ರೇಶ್‌ ಪಾಂಡೆ ತಿಳಿಸಿದ್ದಲ್ಲದೆ, ಕರ್ನಾಟಕದ ಅರುಣ್‌ ಯೋಗಿರಾಜ್‌ ಅವರ ಮೂರ್ತಿ ಗರ್ಭಗುಡಿಗೆ ಫೈನಲ್‌ ಆಗಿದೆ ಎಂದೂ ತಿಳಿಸಿದ್ದಾರೆ.

ನನ್ನ ಮೂರ್ತಿಯನ್ನು ಮಾಡಿರುವುದು ಜೈಪುರದಲ್ಲಿ. ಆದರೆ, ಮೂರ್ತಿ ಮಾಡುವ ವೇಳೆ ಒಂದು ಷರತ್ತನ್ನು ವಿಧಿಸಲಾಗಿತ್ತು. ಅಯೋಧ್ಯೆಯ ಒಳಗಡೆಯಲ್ಲಿಯೇ ಮಾಡಲಾಗುವ ಮೂರ್ತಿಯನ್ನು ಮಾತ್ರವೇ ಗರ್ಭಗುಡಿಯ ಒಳಗಡೆಗೆ ಆಯ್ಕೆ ಮಾಡಲು ಪರಿಗಣಿಸಲಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಆದರೆ, ಮೂರ್ತಿ ನಿರ್ಮಾಣದ ವೇಳೆ ನನ್ನ ಪತ್ನಿ ಬಿದ್ದುಬಿಟ್ಟಿದ್ದಳು. ಅದಕ್ಕಾಗಿ ನಾನು ಇಡೀ ಮೂರ್ತಿಯನ್ನು ಜೈಪುರದಲ್ಲಿ ಸಿದ್ಧ ಮಾಡಿದ್ದೇನೆ. ಭಗವಾನ್‌ ರಾಮ ಹಾಗೂ ಭಗವಾನ್‌ ವಿಷ್ಣು ಇಬ್ಬರನ್ನೂ ಬಾಲ ರೂಪದಲ್ಲಿ ನನ್ನ ಮೂರ್ತಿಯಲ್ಲಿ ಚಿತ್ರಿಸಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ, ಈ ವಿನ್ಯಾಸದ ಮೂರ್ತಿ ಈಗಾಗಲೇ ಗರ್ಭಗುಡಿಯ ರೇಸ್‌ನಿಂದ ಹೊರಬಿದ್ದಿದೆ. ಆದರೆ, ರಾಮ ಜನ್ಮಭೂಮಿ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರೈ ನನ್ನ ಮೂರ್ತಿಯನ್ನು ಇಷ್ಟಪಟ್ಟಿದ್ದಾರೆ' ಎಂದು ತಿಳಿಸಿದ್ದಾರೆ. ಮೇಲಿನ ಷರತ್ತುಗಳ ಕಾರಣದಿಂದಾಗಿ ಈ ಪ್ರತಿಮೆಯನ್ನು ಗರ್ಭಗುಡಿಯಲ್ಲಿ ಸ್ಥಾಪಿಸಲು ಯೋಗ್ಯವಾಗಿಲ್ಲ ಏಕೆಂದರೆ ಟ್ರಸ್ಟ್ ಈಗಾಗಲೇ ವಿನ್ಯಾಸವನ್ನು ಅಂತಿಮಗೊಳಿಸಿದೆ ಎಂದು ಅವರು ಹೇಳಿದರು.

ಕರ್ನಾಟಕದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ 'ರಾಮ ಲಲ್ಲಾ' ವಿಗ್ರಹವನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪನೆ ಮಾಡಲಾಗುತ್ತದೆ. ವಿನ್ಯಾಸವನ್ನು ಅಂತಿಮಗೊಳಿಸಿದ ಕೆಲವೇ ದಿನಗಳ ನಂತರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು 'ಹನುಮಂತನ ಭೂಮಿ' ಯ ಪ್ರಸಿದ್ಧ ವಿಗ್ರಹ ತಯಾರಕರ ಕೆತ್ತಿರುವ ರಾಮನ ವಿಗ್ರಹ ಜನವರಿ 22 ರಂದು ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ ಎಂದಿದ್ದರು.

ಅರುಣ್ ಯೋಗಿರಾಜ್ ಊರಲ್ಲಿ ಈಗಲೇ ರಾಮೋತ್ಸವ! ರಾಮಲಲ್ಲಾ ವಿಗ್ರಹ ಕೆತ್ತನೆಗೆ ಎದುರಾಗಿದ್ದ ಸವಾಲುಗಳೇನೇನು.?

ಕರ್ನಾಟಕವು ಭವ್ಯವಾದ ಹನುಮಾನ್ ದೇವಾಲಯವನ್ನು ಹೊಂದಿದ್ದು ಮತ್ತು ದೇವತೆಯ ಜನ್ಮಸ್ಥಳವೆಂದು ನಂಬಲಾಗಿದೆ, ಪ್ರಲ್ಹಾದ್‌ ಜೋಶಿ ಅವರು ರಾಮಮಂದಿರಕ್ಕಾಗಿ ರಾಜ್ಯದ ಶಿಲ್ಪಿಯೊಬ್ಬರು ರೂಪಿಸಿದ ವಿಗ್ರಹವನ್ನು "ರಾಮ-ಹನುಮಂತನ ಅವಿನಾಭಾವ ಸಂಬಂಧದ ಉದಾಹರಣೆ" ಎಂದು ಕರೆದಿದ್ದರು.

ಎಂಬಿಎ ಓದಿ ಕುಲ ಕಸುಬಿಗೆ ಮರಳಿದ ಅರುಣ್ ಯೋಗಿರಾಜ್ ಬದುಕು ಸಾರ್ಥಕ, ಕಲೆ ಇವರಿಗೆ ಕರಾತಲಮಲಕ

Latest Videos
Follow Us:
Download App:
  • android
  • ios