Asianet Suvarna News Asianet Suvarna News

ಸದ್ಗುರು ಮಣ್ಣು ಉಳಿಸಿ ಅಭಿಯಾನಕ್ಕೆ ದುಬೈ ಬೆಂಬಲ, ಬೆಳಕಿನಲ್ಲಿ ಕಂಗೊಳಿಸಿದ ಬುರ್ಜ್ ಖಲೀಫ!

  • ಮಣ್ಣು ಉಳಿಸಿ ಅಭಿಯಾನದಲ್ಲಿ ವಿಶ್ವದ ಅತೀ ಎತ್ತರದ ಕಟ್ಟಡ
  • ಸೇವ್ ಸಾಯಿಲ್ ಲೈಟಿಂಗ್ಸ್‌ನಲ್ಲಿ ಕಂಗೊಳಿಸಿದ ದುಬೈನ ಬುರ್ಜ್ ಖಲೀಫಾ
  • ವಿಶ್ವಾದ್ಯಂತ ಅಭೂತಪೂರ್ವ ಬೆಂಬಲ, ಮಣ್ಣಿನ ಮಹತ್ವದ ಸಾರಿದ ಸದ್ಗರು
Iconic Burj Khalifa dubai Lights Up In Support Of sadhguru Save Soil Movement ckm
Author
Bengaluru, First Published Jul 7, 2022, 4:37 PM IST

ದುಬೈ(ಜು.07): ಸದ್ಗುರು ಜಗ್ಗಿ ವಾಸುದೇವ್ ಅವರ ಮಣ್ಣು ಉಳಿಸಿ ಅಭಿಯಾನಕ್ಕೆ ವಿಶ್ವಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಮುಂದಿನ ಪೀಳಿಗೆಗೆ ಮಣ್ಣನ್ನು ಉಳಿಸುವ ಹಾಗೂ ಸಂರಕ್ಷಿಸುವ ವಿಶೇಷ ಅಭಿಯಾನ ಇದೀಗ ದುಬೈನಲ್ಲಿರುವ ವಿಶ್ವದ ಅತೀ ಎತ್ತರದ ಕಟ್ಟದ ಬುರ್ಜ್ ಖಲೀಫಾದಲ್ಲಿ ಸದ್ದು ಮಾಡಿದೆ. ಮಣ್ಣು ಉಳಿಸಿ ಅನ್ನೋ ಸಂದೇಶ ಹಾಗೂ ಮಣ್ಣಿನ ಲೈಟಿಂಗ್ಸ್ ಮೂಲಕ ಬುರ್ಜ್ ಖಲೀಫಾ ಅಭೂತಪೂರ್ವ ಬೆಂಬಲ ಸೂಚಿಸಿದೆ.

ಸಂಪೂರ್ಣ ಕಟ್ಟ ಸೇವ್ ಸಾಯಿಲ್ ಅಭಿಯಾನ ಸಂದೇಶದೊಂದಿಗೆ ಕಂಗೊಳಿಸಿತು. ಈ ಮೂಲಕ  ವಿಶ್ವದ 50ಕ್ಕೂ ಹೆಚ್ಚು ಜನಪ್ರಿಯ ಹಾಗೂ ಐತಿಹಾಸಿಕ ಸ್ಥಳಗಳಲ್ಲಿ ಸದ್ಗುರು ಮಣ್ಣು ಉಳಿಸಿ ಅಭಿಯಾನಕ್ಕೆ ಬೆಂಬಲ ಸಿಕ್ಕಿದೆ. ಇದಕ್ಕೂ ಮೊದಲು ಅಮೆರಿಕದ ನಯಾಗರಾ ಫಾಲ್ಸ್, ಜಿನಿವಾದ ಜೆಟ್ ಡಿಯು, ದಿ ಮಾಂಟ್ರಿಯಲ್ ಒಲಿಂಪಿಕ್ ಸ್ಟೇಡಿಯಂ, ಟೊರೆಂಟೋ ಟಿವಿ ಟವರ್, ಸಿಯೆನ್ನಾದ ಪಿಯಾಝಾ ಡೆಲ್ ಕ್ಯಾಂಪೋ ಸೇರಿದಂತೆ ಹಲವು ವಿಶ್ವಪ್ರಸಿದ್ಧ ತಾಣಗಳಲ್ಲಿ ಮಣ್ಣು ಉಳಿಸಿ ಅಭಿಯಾನಕ್ಕೆ ಬೆಂಬಲ ಸೂಚಿಸಿ ಲೈಟಿಂಗ್ಸ್ ಮೂಲಕ ಕಂಗೊಳಿಸಿತ್ತು.

ಶಿವಣ್ಣ ಜೊತೆಗಿನ ಮಾತುಕತೆಯಲ್ಲಿ ಪುನೀತ್ ರಾಜ್‌ಕುಮಾರ್ ಸವಿ ನೆನಪು ಬಿಚ್ಚಿಟ್ಟ ಸದ್ಗುರು!

ಭಾರತದಲ್ಲಿ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಕಟ್ಟಡ, ಚೆನ್ನೈ ಮತ್ತು ಹುಬ್ಬಳ್ಳಿಯ ರೈಲು ನಿಲ್ದಾಣ, ಗೋವಾದಲ್ಲಿನ ಅಟಲ್ ಸೇತುವೆ, ಕೋಲ್ಕತಾದ ಹೌರಾ ಸೇತುವೆ, ದರ್ಗಮ್ ಚೆರುವು ಸೇತುವೆ, ಹೈದರಾಬಾದ್‌ನಲ್ಲಿರುವ ಬುದ್ಧನ ಪ್ರತಿಮೆ ಹಿಂದೆ ಸೇರಿದಂತೆ ಹಲವು ಸ್ಥಳಗಳಲ್ಲಿ ಬೆಳಿಕನಲ್ಲಿ ಮಣ್ಣು ಉಳಿಸಿ ಅಭಿಯಾನಕ್ಕೆ ವಿಶೇಷ ಬೆಂಬಲ ಸೂಚಿಸಿತ್ತು. 

ಮಣ್ಣು ಉಳಿಸಿ ಅಭಿಯಾನದ ಭಾಗವಾಗಿ ಸದ್ಗುರು 100 ದಿನಕ್ಕೂ ಹೆಚ್ಚು ಬೈಕ್ ಯಾತ್ರೆ ಕೈಗೊಂಡಿದ್ದರು ಮಾರ್ಚ್ ಅಂತ್ಯದಲ್ಲಿ ಯೂರೋಪ್‌ನಿಂದ ಬೈಕ್‌ ಯಾತ್ರೆ ಆರಂಭಗೊಂಡಿತ್ತು.  ಯುರೋಪ್‌, ಮಧ್ಯಏಷ್ಯಾದ 27 ದೇಶಗಳು, ಕರ್ನಾಟಕ ಸೇರಿದಂತೆ ಭಾರತದ ರಾಜ್ಯಗಳಲ್ಲಿ  ಸಂಚರಿಸಿತ್ತು. 

 

 

ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳ ಸದ್ಗುರು ಜೊತೆ ಮಣ್ಣು ಉಳಿಸುವ ಅಭಿಯಾನಕ್ಕೆ ಕೈಜೋಡಿಸಿ ಒಪ್ಪಂದ ಮಾಡಿಕೊಂಡಿದೆ. ಈ ವೇಳೆ ಮಣ್ಣಿನ ಹಾನಿಯನ್ನು ತಡೆದು ಮುಂದಿನ ತಲೆ ಮಾರಿಗೆ ನೀಡಬೇಕಾಗಿರುವ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸದ್ಯ ಮಣ್ಣಿನ ರಕ್ಷಣೆಯ ತುರ್ತು ಸಂದರ್ಭದಲ್ಲಿ ನಾವೆಲ್ಲಾ ಇದ್ದೇವೆ. ಮುಂದಿನ 10 ರಿಂದ 15 ವರ್ಷಗಳಲ್ಲಿ ಮಣ್ಣಿನ ಸಂರಕ್ಷಣೆ ಸಾಧ್ಯವಾಗದಿದ್ದರೆ ಮತ್ತೆಂದೂ ಸಾಧ್ಯವಾಗುವುದಿಲ್ಲ. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಮಣ್ಣಿನ ಸಂರಕ್ಷಣೆ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳನ್ನು ಸಾರ್ವಜನಿಕರು ಒತ್ತಾಯಿಸಬೇಕು ಎಂದು ಸದ್ಗುರು ಕರೆಕೊಟ್ಟಿದ್ದರು.

ಸದ್ಗುರು ‘ಮಣ್ಣು ಉಳಿಸಿ’ ಅಭಿಯಾನಕ್ಕೆ 100 ದಿನ

ಮಣ್ಣಿನ ಅವನತಿಯಿಂದ ಪ್ರಕೃತಿಯೇ ಅವನತಿಯಾಗುತ್ತದೆ. ತುರ್ತು ಕಾರ್ಯನೀತಿ ಸುಧಾರಣೆಗಳ ಮೂಲಕ ಕೃಷಿ ಮಣ್ಣಿನಲ್ಲಿ ಕನಿಷ್ಠ ಶೇ.3-6 ಜೈವಿಕ ಅಂಶವನ್ನು ಕಡ್ಡಾಯಗೊಳಿಸುವಂತೆ ಪ್ರಪಂಚದ ಎಲ್ಲ ರಾಷ್ಟ್ರಗಳನ್ನು ಒತ್ತಾಯಿಸುವುದು ಮಣ್ಣು ಉಳಿಸಿ ಅಭಿಯಾನದ ಪ್ರಾಥಮಿಕ ಉದ್ದೇಶವಾಗಿದೆ. ಮಣ್ಣು ಉಳಿಸುವ ನಿಟ್ಟಿನಲ್ಲಿ ದೇಶದ ನಾಗರೀಕರು ಸಹಕಾರ ನಿಡಬೇಕು. ಸರ್ಕಾರವು ಪ್ರಮುಖ ಕ್ರಮಗಳನ್ನು ಜಾರಿಗೊಳಿಸಬೇಕು’ ಎಂದು ಸದ್ಗುರು ಮನವಿ ಮಾಡಿದ್ದರು. 
 

Follow Us:
Download App:
  • android
  • ios