ಐಎಸ್‌ಎಸ್ ಅಧಿಕಾರಿ ಟೀನಾ ಡಾಬಿಯ ತಾಯಿ ಕೂಡ ಐಇಎಸ್, ಕಾಲೇಜ್ ಟಾಪರ್ ಆಗಿದ್ರು ಹಿಮಾಲಿ ಡಾಬಿ!
ತನ್ನ ಮದುವೆ ವಿಚಾರದಿಂದಾಗಿಯೇ ಸಾಕಷ್ಟು ಸುದ್ದಿಯಲ್ಲಿದ್ದ ಐಎಎಸ್ ಅಧಿಕಾರಿ, ಟೀನಾ ಡಾಬಿ ಅವರ ತಾಯಿ ಹಿಮಾಲಿ ಡಾಬಿ ಕೂಡ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು. ಇಂಡಿಯನ್ ಇಂಜಿನಿಯರಿಂಗ್ ಸರ್ವೀಸ್‌ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು,
ನವದೆಹಲಿ (ಮಾ.14): 2016ರ ಯುಪಿಎಸ್‌ಸಿ ಪರೀಕ್ಷೆಯ ಟಾಪರ್ ಟೀನಾ ಡಾಬಿ ಯಾರಿಗೆ ಗೊತ್ತಿಲ್ಲ ಹೇಳಿ. ಆಕೆ ಟಾಪರ್ ಆದ ದಿನದಿಂದಲೂ ಇಲ್ಲಿಯವರೆಗೂ ಒಂದಲ್ಲಾ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ನಿಸ್ಸಂಶಯವಾಗಿ ಅವರು ಭಾರತದಲ್ಲಿನ ಅತ್ಯಂತ ಪ್ರಖ್ಯಾತ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ ನಂತರ ಟೀನಾ ಡಾಬಿ ದೊಡ್ಡ ಮಟ್ಟದ ಮನ್ನಣೆಯನ್ನು ಗಳಿಸಿದರು ಮತ್ತು ಅವರು ಈಗ ದೇಶಾದ್ಯಂತ ಲಕ್ಷಾಂತರ ಐಎಎಸ್ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಟೀನಾ ಡಾಬಿ ಅವರು ಪ್ರಸ್ತುತ ರಾಜಸ್ಥಾನ ಜಿಲ್ಲೆಯ ಜೈಸಲ್ಮೇರ್‌ನ ಜಿಲ್ಲಾಧಿಕಾರಿ ಹಾಗೂ ಮ್ಯಾಜಿಸ್ಟ್ರೇಟ್ ಆಗಿ ಪೋಸ್ಟಿಂಗ್‌ನಲ್ಲಿದ್ದಾರೆ. ಕಳೆದ ವರ್ಷ ಟೀನಾ ಡಾಬಿ, ವೃತ್ತಿಯಲ್ಲಿ ವೈದ್ಯರಾಗಿದ್ದ ಬಳಿಕ ಐಎಎಸ್ ಅಧಿಕಾರಿಯಾದ ಪ್ರದೀಪ್ ಗಾವಂಡೆಯನ್ನು ವಿವಾಹವಾಗಿದ್ದರು. ಟೀನಾ ಡಾಬಿ ಅವರ ಬಗ್ಗೆ ಎಷ್ಟು ಮಾಹಿತಿ ತಿಳಿದಿದೆಯೋ, ಅವರ ಪೋಷಕರ ಬಗ್ಗೆ ಅಷ್ಟೇ ಕಡಿಮೆ ಮಾಹಿತಿ ಇದೆ.
ಟೀನಾ ಡಾಬಿ ಅವರ ತಾಯಿಯ ಹೆಸರು ಹಿಮಾಲಿ ಕಾಂಬ್ಳೆ ಅಥವಾ ಹಿಮಾಲಿ ಡಾಬಿ. ಹಿಮಾನಿ ತಮ್ಮ ಇಬ್ಬರೂ ಮಕ್ಕಳು ಐಎಎಸ್ ಅಧಿಕಾರಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಮಾಡಿದ ತ್ಯಾಗಗಳದ್ದೇ ಒಂದು ಕಥೆ. ಟೀನಾ ಡಾಬಿ ಮಾತ್ರವಲ್ಲ ಹಿಮಾಲಿ ಅವರ ಇನ್ನೊಬ್ಬ ಪುತ್ರಿ ರಿಯಾ ಡಾಬಿ ಕೂಡ ಐಎಎಸ್ ಅಧಿಕಾರಿಯಾಗಿದ್ದಾರೆ. ಇವರು ಅಲ್ವಾರ್‌ನ ಸಹಾಯಕ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಕಣ್ಸನ್ನೆ ಪ್ರಿಯಾಗೆ ನಾನೇನು ಕಡಿಮೆ, ಟೀನಾ ಮದರಂಗಿ ಮಾಯೆ!
ಟೀನಾ ಡಾಬಿ ಅವರ ತಾಯಿ ಹಿಮಾಲಿ ಡಾಬಿ ಕೂಡ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡಿದ್ದರು. ಬಳಿಕ ಇಂಡಿಯನ್ ಇಂಜಿನಿಯರಿಂಗ್ ಸರ್ವೀಸಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಆದರೆ, ತಮ್ಮ ಮಕ್ಕಳಿಬ್ಬರೂ ಐಎಎಸ್ ಅಧಿಕಾರಿಯಾಗಿ ಅವರ ಗುರಿಗಳನ್ನು ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ ಹಿಮಾಲಿ ಡಾಬಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. 'ಈ ಪರೀಕ್ಷೆಗೆ ತಯಾರಿ ಮಾಡುವುದು ಸುಲಭವಲ್ಲ. ಇದು ತುಂಬಾ ಕಠಿಣವಾಗಿದೆ' ಎಂದು ಟೀನಾ ಡಾಬಿ ಅವರ ತಾಯಿ ಹಿಮಾಲಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು.
Tina Dabi -Pradeep Gawande: ಐಎಎಸ್ ಅಧಿಕಾರಿ ಟೀನಾ ದಾಬಿ- ಪ್ರದೀಪ್ ಗವಾಂಡೆ ಲವ್ ಸ್ಟೋರಿ
ಟೀನಾ ದಾಬಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು ಐಎಎಸ್ ಅಧಿಕಾರಿಯಾಗುವ ಮೂಲಕ ತಾಯಿ ಇಟ್ಟ ನಂಬಿಕೆಯನ್ನು ಪೂರೈಸಿದ್ದರು. ಟೀನಾ ದಾಬಿಯವರ ತಾಯಿ ಮೌಲಾನಾ ಆಜಾದ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಭೋಪಾಲ್‌ನ ಟಾಪರ್ ಕೂಡ ಆಗಿದ್ದರು.