ನವದೆಹ;ಇ[ಮಾ.18]: ಕೊರೋನಾ ವೈರಸ್ ಸದ್ಯ ಇಡೀ ದೇಶವನ್ನೇ ಆತಂಕಕ್ಕೀಡು ಮಾಡಿದೆ. ಭಾರತದಲ್ಲೂ ತನ್ನ ರುದ್ರ ನರ್ತನ ಆರಂಭಿಸಿರುವ ಈ ಡೆಡ್ಲಿ ವೈರಸ್ ಮೂರು ಮಂದಿಯನ್ನು ಬಲಿ ಪಡೆದಿದೆ. ಒಟ್ಟು 147 ಪ್ರಕರಟಣಗಳು ದೇಶದಲ್ಲಿ ವರದಿಯಾಗಿದ್ದು, ಇವರಲ್ಲಿ 122 ಮಂದಿ ಭಾರತೀಯ ನಾಗರಿಕರಾಗಿದ್ದಾರೆ. ಹೀಗಿರುವಾಗ ಕೊರೋನಾದಿಂದ ದೂರವಿರುವುದು ಹೇಗೆ? ಎಂಬ ಕುರಿತಾಗಿ ಹಲವಾರು ವಿಡಿಯೋಗಳು ಹರಿದಾಡುತ್ತಿದ್ದು, ಸದ್ಯ IAS ಆಫೀಸರ್ ನೀಡಿರುವ ೖಡಿಯಾ ಫುಲ್ ಕ್ಲಿಕ್ ಆಗಿದೆ.

ಹೌದು IAS ದೇವ್ ಚೌಧರಿ ಟ್ವಿಟರ್ ಖಾತೆಯಲ್ಲಿ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಸ್ಟೋರ್ ಒಂದರ ಒಳಗೆ ನೆಲದ ಮೇಲೆ ಸ್ಟಿಕ್ಕರ್ ಅಂಟಿಸಲಾಗಿದ್ದು, ಪ್ರತಿ ಸ್ಟಿಕರ್ ಮೇಲೆ ಒಬ್ಬೊಬ್ಬರು ನಿಂತಿರುವುದು ಕಾಣಬಹುದಾಗಿದೆ. ಪ್ರತಿ ಸ್ಟಿಕರ್ ಗಳ ನಡುವೆ ಗ್ಯಾಪ್ ಇರುವುದನ್ನೂ ಗಮನಿಸಬಹುದಾಗಿದೆ. 

ಇನ್ನು ಫೋಟೋ ಶೇರ್ ಮಾಡಿಕೊಂಡಿರುವ ಅಧಿಕಾರಿ 'ಕೊರೋನಾವನ್ನು ದೂರವಿಡಲು ಅಂತರ ಕಾಪಾಡಿಕೊಳ್ಳಿ' ಎಂದು ಬರೆದಿದ್ದಾರೆ.

ಸದ್ಯ ಈ ಫೋಟೋ ಭಾರೀ ವೈರಲ್ ಆಗಿದ್ದು, IAS ಆಫೀಸರ್ ದೇವ್ ಚೌಧರಿ ಐಡಿಯಾಗೆ ನೆಟ್ಟಿಗರು ಫಿದಾ ಆಗಿದ್ದಾರೆ.