Asianet Suvarna News Asianet Suvarna News

ಪ್ರಧಾನಿ ಮೋದಿ ಭಾರತ್ ಶಕ್ತಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ IAF ತೇಜಸ್ ಏರ್‌ಕ್ರಾಫ್ಟ್ ಪತನ!

ಪ್ರಧಾನಿ ಮೋದಿ ಪೋಖ್ರಾನ್‌ನಲ್ಲಿ ಭಾರತ್ ಶಕ್ತಿ ಶಸ್ತ್ರಾಸ್ತ್ರ ಪ್ರದರ್ಶನ ಹಾಗೂ ಸಮರಾಭ್ಯಾಸ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದ ಭಾರತದ ಮೊದಲ IAF ತೇಜಸ್ ಫೈಟರ್ ಏರ್‌ಕ್ರಾಫ್ಟ್ ಪತನಗೊಂಡಿದೆ.

IAF Tejas Fighter Aircraft en route to Bharat Shakti Pokhran crashes in Jaisalmer ckm
Author
First Published Mar 12, 2024, 4:02 PM IST

ಪೋಖ್ರಾನ್(ಮಾ.12) ಪ್ರಧಾನಿ ನರೇಂದ್ರ ಮೋದಿ ಭಾರತದ ರಕ್ಷಣಾ ಪರಾಕ್ರಮ ಪ್ರದರ್ಶನ ಭಾರತ್ ಶಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇಶದ ರಕ್ಷಣಾ ಕ್ಷೇತ್ರದ ಶಸ್ತಿ ಸಾಮರ್ಥ್ಯ ವೀಕ್ಷಿಸಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ತೆರಳಿದ ಭಾರತದ ಮೊದಲ IAF ತೇಜಸ್ ಫೈಟರ್ ಏರ್‌ಕ್ರಾಫ್ಟ್ ಪತನಗೊಂಡಿದೆ.  ರಕ್ಷಣಾ ಕ್ಷೇತ್ರದ  ಶಸ್ತ್ರಾಸ್ತ್ರ , ಫೈರಿಂಗ್ ರೇಜ್ ಪ್ರದರ್ಶನ ಹಾಗೂ ಸಮರಾಭ್ಯಾಸ ಪರಾಕ್ರಮಗಳ ಕಾರ್ಯಕ್ರಮಕ್ಕೆ ಭಾರತದ ಮೊದಲ ಇಂಡಿಜೀನಿಯಸ್ ಏರ್‌ಕ್ರಾಫ್ಟ್ ತೇಜಸ್ ಮಾರ್ಗಮಧ್ಯ ಪತನಗೊಂಡಿದೆ. ಏರ್‌ಕ್ರಾಫ್ಟ್ ಪತನಗೊಳ್ಳುತ್ತಿದ್ದಂತೆ ಪೈಲೆಟ್ ಸುರಕ್ಷಿತವಾಗಿ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.

ಜೈಸಲ್ಮೇರ್ ಬಳಿ ತೇಜಸ್ ಹೆಲಿಕಾಪ್ಟರ್ ಪತನಗೊಂಡಿದೆ. 2001ರಲ್ಲಿ ಬೆಂಗಳೂರಿನ ಹೆಚ್ಎಎಲ್ ಕೇಂದ್ರ ಈ ಫೈಟರ್ ಏರ್‌ಕ್ರಾಫ್ಟ್ ಅಭಿವೃದ್ಧಿಪಡಿಸಿತ್ತು. ಕಳೆದ 23 ವರ್ಷಗಳಲ್ಲಿ ತೇಜಸ್ ಪತನವಾದ ಮೊದಲ ಘಟನೆ ಇದಾಗಿದೆ.  ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈ  IAF ತೇಜಸ್ ಭಾರತದ ಮೊದಲ ಇಂಡಿಜಿನಿಯಸ್ ಏರ್‌ಕ್ರಾಫ್ಟ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಇದೀಗ ಏರ್‌ಕ್ರಾಫ್ಟ್ ಪತನಗೊಂಡಿದೆ.

84,560 ಕೋಟಿ ರೂಪಾಯಿ ಮಿಲಿಟರಿ ಉಪಕರಣ, ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ ನೀಡಿದ ರಕ್ಷಣಾ ಇಲಾಖೆ!

ರಕ್ಷಣಾ ಕ್ಷೇತ್ರದ ಪರಾಕ್ರಮ ಪ್ರದರ್ಶನದ ಭಾರತ್ ಶಕ್ತಿ ಕಾರ್ಯಕ್ರಮಕ್ಕ ಪೂರ್ವ ಅಭ್ಯಾಸವನ್ನು ಯಶಸ್ವಿಯಾಗಿ ಮಾಡಿದ್ದ ಏರ್‌ಕ್ರಾಫ್ಟ್ ಬಳಿಕ ಪೋಖ್ರಾನ್‌ನತ್ತ ಪ್ರಯಾಣ ಬೆಳೆಸಿತ್ತು. ಈ ವೇಳೆ ಏರ್‌ಕ್ರಾಫ್ಟ್ ಪನತಗೊಂಡಿದೆ.  ಏರ್‌ಕ್ರಾಫ್ಟ್ ಪತನ ಮಾಹಿತಿ ಖಚಿತಪಡಿಸಿರುವ ಭಾರತೀಯ ವಾಯುಸೇನೆ, ಘಟನೆ ಕುರತ ತನಿಖೆಗೆ ಆದೇಶಿಸಿದೆ.  

IAF ತೇಜಸ್ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಇದು ಸಿಂಗಲ್ ಸೀಟರ್ ಫೈಟರ್ ಏರ್‌ಕ್ರಾಫ್ಟ್ ಆಗಿದೆ. ಈ ವಿಭಾಗದಲ್ಲಿ ಟ್ವಿನ್ ಸೀಟರ್(ತರಬೇತಿ)ವೇರಿಯೆಂಟ್ ಕೂಡ ಭಾರತೀಯ ವಾಯುಸೇನೆ ನಿರ್ವಹಣೆ ಮಾಡುತ್ತಿದೆ. ಭಾರತೀಯ ನೌಕಾಸೇನೆ ಟ್ವಿನ್ ಸೀಟರ್ ಫೈಟರ್ ಏರ್‌ಕ್ರಾಪ್ಟ್ ಬಳಕೆ ಮಾಡುತ್ತಿದೆ. 

ಲಘು ಯುದ್ಧ ವಿಮಾನ ತೇಜಸ್ 4.5 ಜನರೇಶನ್ ವಿಮಾನವಾಗಿದೆ. ಭೂ ಕಾರ್ಯಾಚರಣೆಗೆ ಪ್ರಮುಖವಾಗಿ ತೇಜಸ್ ಏರ್‌ಕ್ರಾಫ್ಟ್ ಬಳಸಲಾಗುತ್ತದೆ. ಆಕ್ರಮಣಕಾರಿ ವಾಯು ಬೆಂಬಲದ ಜೊತೆ ಭೂ ಕಾರ್ಯಾಚರಣೆಯಲ್ಲಿ ಈ ಏರ್‌ಕ್ರಾಫ್ಟ್ ಯಶಸ್ವಿಯಾಗಿದೆ.  

 

ಕಾರ್ಗಿಲ್‌ನಲ್ಲಿ ರಾತ್ರಿ ಹೊತ್ತಲ್ಲಿ ಇದೇ ಮೊದಲ ಬಾರಿಗೆ ಯುದ್ಧ ವಿಮಾನ ಇಳಿಸಿದ ಭಾರತ

ರಾಜಸ್ಥಾನದ ಪೋಖ್ರಾನ್‌ನಲ್ಲಿ ರಕ್ಷಣಾ ಕ್ಷೇತ್ರದ ಮೂರು ವಿಭಾಗದ ಸ್ವದೇಶಿ ರಕ್ಷಣಾ ಶಸ್ತ್ರಾಸ್ತ್ರ, ಸಲಕರಣೆ ಪ್ರದರ್ಶನ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು ದೇಶದ ಸ್ವದೇಶಿ ನಿರ್ಮಿತ ರಕ್ಷಣಾ ಸಾಮರ್ಥ್ಯವನ್ನು ವೀಕ್ಷಿಸಿದ್ದಾರೆ. ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಭಾರತ ಅಬಿವೃದ್ಧಿಪಡಿಸಿ ರಕ್ಷಣಾ ಸಾಮರ್ಥ್ಯವನ್ನು ಮೋದಿ ವೀಕ್ಷಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ತೇಜಸ್ ಯುದ್ಧವಿಮಾನ ತೆರಳುವ ವೇಳೆ ಅವಘಡ ಸಂಭವಿಸಿದೆ.
 

Follow Us:
Download App:
  • android
  • ios