ಗಡಿ ಬಿಕ್ಕಟ್ಟಿನ ಬೆನ್ನಲ್ಲೇ ಸೇನೆ ಸೇರಿಕೊಳ್ಳುತ್ತಿದೆ 6 ರಾಫೆಲ್ ಯುದ್ಧವಿಮಾನ ಹಾಗೂ ಮಿಸೈಲ್!
ಭಾರತ ಹಾಗೂ ಚೀನಾ ಗಡಿ ಬಿಕ್ಕಟ್ಟು ತಿಳಿಗೊಂಡಿಲ್ಲ. ಶಾಂತಿ ಮಾತುಕತೆ ಬೆನ್ನಲ್ಲೇ ಚೀನಾ ಗಡಿಯಲ್ಲಿ ಹೆಚ್ಚುವರಿ ಸೇನೆ ಹಾಗೂ ಶಸ್ತ್ರಾಸ್ತ್ರ ಪೂರೈಸಿ ಶಕ್ತಿ ಪ್ರದರ್ಶಿಸುತ್ತಿದೆ. ಈ ಆತಂಕದ ಬೆನ್ನಲ್ಲೇ ಭಾರತೀಯ ಸೇನೆಗೆ 6 ರಾಫೆಲ್ ಯುದ್ದವಿಮಾನ ಹಾಗೂ ಮಿಸೈಲ್ ಸೇರಿಕೊಳ್ಳುತ್ತಿದೆ. ಇದು ಚೀನಾ ಅತಂಕ ಹೆಚ್ಚಿಸಿದೆ.
ನವದೆಹಲಿ(ಜೂ.29): ಲಡಾಖ್ ಗಡಿ ಪ್ರಾಂತ್ಯದಲ್ಲಿ ಚೀನಾ ಸೇನೆ ಆಕ್ರಮಣ ಹೆಚ್ಚಾಗುತ್ತಿದೆ. ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಮೇಲೆರಗಿದ ಚೀನಾ ಸೇನೆಗೆ ಭಾರತ ತಕ್ಕ ಉತ್ತರ ನೀಡಿದೆ. ಇಷ್ಟೇ ಅಲ್ಲ 1962ರ ಭಾರತವಲ್ಲ, ಇದು ಬಲಿಷ್ಠ ಭಾರತ ಅನ್ನೋ ಸಂದೇಶವನ್ನು ರವಾನಿಸಿದೆ. ಗಡಿ ಬಿಕ್ಕಟ್ಟ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತೀಯ ಸೇನೆಗೆ ಇದೀಗ 6 ರಾಫೆಲ್ ಯುದ್ದ ವಿಮಾನ ಹಾಗೂ ಮಿಸೈಲ್ ಜುಲೈ ಅಂತ್ಯದಲ್ಲಿ ಸೇರಿಕೊಳ್ಳಲಿದೆ.
ಗಡಿಯಲ್ಲಿ ಚೀನಾದ ಮಾರ್ಷಲ್ ಆರ್ಟ್ಸ್ ಫೈಟರ್ಸ್: ತಿರುಗೇಟಿಗೆ ಭಾರತದ ಘಾತಕ್ ಕಮಾಂಡೋ ಸಜ್ಜು!
ಒಪ್ಪಂದದ ಪ್ರಕಾರ ಫ್ರಾನ್ಸ್ ಜುಲೈ ಅಂತ್ಯದಲ್ಲಿ ಭಾರತಕ್ಕೆ ರಾಫೆಲ್ ಯುದ್ದ ವಿಮಾನ ನೀಡಲಿದೆ. ಮೊದಲ ಹಂತದಲ್ಲಿ 6 ರಾಫೆಲ್ ಯುದ್ಧ ವಿಮಾನ ಭಾರತೀಯ ಸೇನೆ ಸೇರಿಕೊಳ್ಳಲಿದೆ. ಕೊರೋನಾ ವೈರಸ್ ಕಾರಣ ಫ್ರಾನ್ಸ್ ಯುದ್ಧ ವಿಮಾನ ಭಾರತಕ್ಕೆ ನೀಡಲು ವಿಳಂಬವಾಗಲಿದೆ ಎಂದಿತ್ತು. ಚೀನಾ ಆತಿಕ್ರಮಣದ ಬಳಿಕ ಕೇಂದ್ರ ಸರ್ಕಾರ ತ್ವರಿತಗತಿಯಲ್ಲಿ ರಾಫೆಲ್ ಯುದ್ಧ ವಿಮಾನ ಪೂರೈಸುವಂತೆ ಫ್ರಾನ್ಸ್‌ಗೆ ಮನವಿ ಮಾಡಿತ್ತು.
ಶೀಘ್ರವೇ S-400 ಮಿಸೈಲ್ ಪೂರೈಸಲು ರಷ್ಯಾ ಒತ್ತಾಯಿಸಿದ ರಾಜನಾಥ್ ಸಿಂಗ್
ಭಾರತದ ಮನವಿ ಪುರಸ್ಕರಿಸಿದ ಫ್ರಾನ್ಸ್, ಆರಂಭಿಕ ಹಂತದಲ್ಲಿ 4ರ ಬದಲು 6 ಯುದ್ಧ ವಿಮಾನಗಳನ್ನು ಭಾರತಕ್ಕೆ ನೀಡುತ್ತಿದೆ. ಈಗಾಗಲೇ ಭಾರತೀಯ ವಾಯುಪಡೆ ರಾಫೆಲ್ ಯುದ್ಧವಿಮಾನ ತರಬೇತಿ ಪಡೆಯುತ್ತಿದೆ. ಜುಲೈ ಅಂತ್ಯದಲ್ಲಿ ಭಾರತ ವಾಯುಪಡೆ ಪೈಲೆಟ್‌ಗಳು ಫ್ರಾನ್ಸ್‌ನಿಂದ ಭಾರತಕ್ಕೆ ರಾಫೆಲ್ ಯುದ್ಧವಿಮಾನದಲ್ಲಿ ಆಗಮಿಸಲಿದ್ದಾರೆ. ಮಾರ್ಗ ಮಧ್ಯ ಅಬುದಾಬಿ ಎರ್‌ಬೇಸ್‌ನಲ್ಲಿ ಇಳಿದು ಮತ್ತೆ ಭಾರತಕ್ಕೆ ಹಾರಾಟ ನಡೆಸಲಿದೆ.
ಜುಲೈ ಅಂತ್ಯದಲ್ಲಿ ಭಾರತಕ್ಕೆ ಆಗಮಿಸುವ ರಾಫೆಲ್ ಯುದ್ಧವಿಮಾನ ಆಗಸ್ಟ್ ಆರಂಭದಿಂದಲೇ ಕಾರ್ಯ ಆರಂಭಿಸಲಿದೆ. ಅತ್ಯಾಧುನಿಕ ಯುದ್ಧ ವಿಮಾನ ಭಾರತೀಯ ಸೇನೆಯ ಬಲ ಮತ್ತಷ್ಟು ಹೆಚ್ಚಿಸಿದೆ.