Asianet Suvarna News Asianet Suvarna News

ಇಂದು ಮಿಗ್‌-27 ಕೊನೆಯ ಹಾರಾಟ: ಇತಿಹಾಸ ಪುಟ ಸೇರಲಿರುವ IAF 'ಕಾರ್ಗಿಲ್ ಸ್ಟಾರ್'!

ಇಂದು ಮಿಗ್‌-27 ಕೊನೆಯ ಹಾರಾಟ| ಇತಿಹಾಸ ಪುಟ ಸೇರಲಿರುವ ಭಾರತೀಯ ವಾಯುಪಡೆಯ ಬಹದ್ದೂರ್‌

IAF Kargil star MiG 27 to fly one last time today after serving for 40 glorious years
Author
Bangalore, First Published Dec 27, 2019, 8:53 AM IST
  • Facebook
  • Twitter
  • Whatsapp

ನವದೆಹಲಿ[ಡಿ.27]: ಪಾಕಿಸ್ತಾನದ ವಿರುದ್ಧದ 1999ರ ಕಾರ್ಗಿಲ್‌ ಯುದ್ಧದ ವೇಳೆ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮಿಗ್‌- 27 ವಿಮಾನಗಳ ಸೇವೆ ಶುಕ್ರವಾರ ಕೊನೆಗೊಳ್ಳಲಿದೆ.

ಮಿಗ್‌-27 ಸರಣಿಯಲ್ಲಿ ಉಳಿದುಕೊಂಡಿರುವ ಏಕೈಕ ಸ್ಕ್ವಾಡ್ರನ್‌ನ ವಿಮಾನಗಳು ಜೋಧಪುರದಲ್ಲಿ ಕೊನೆಯ ಹಾರಾಟ ನಡೆಸಿ ಸೇವೆಯಿಂದ ನಿವೃತ್ತವಾಗಲಿವೆ. ಆ ಬಳಿಕ ಮಿಗ್‌-27 ವಿಮಾನಗಳು ಇತಿಹಾಸದ ಪುಟ ಸೇರಲಿವೆ.

1980ರ ದಶಕದಲ್ಲಿ ಸೋವಿಯತ್‌ ಒಕ್ಕೂಟದಿಂದ ಖರೀದಿಸಿದ್ದ ಮಿಗ್‌ 27 ವಿಮಾನಗಳು ಈಗ ತೀರಾ ಹಳೆದಾಗಿದ್ದು, ಪದೇ ಪದೆ ಅಪಘಾತಕ್ಕೀಡಾಗುತ್ತಿರುವುದರಿಂದ ಈ ವಿಮಾನಗಳ ಸೇವೆಯನ್ನು ಅಂತ್ಯಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶತ್ರುಗಳ ಮೇಲೆ ಮಾರಕ ದಾಳಿ ಎಸಗುವ ಸಾಮರ್ಥ್ಯ ಹೊಂದಿರುವ ಮಿಗ್‌- 27 ವಿಮಾನ ‘ಬಹಾದ್ದೂರ್‌’ ಎಂದು ಕರೆಸಿಕೊಂಡಿತ್ತು. 1985ರಿಂದ ಆರಂಭಿಸಿ ಭಾರತೀಯ ವಾಯು ಸೇನೆ ಇದುವರೆಗೆ 165 ಮಿಗ್‌-27 ಯುದ್ಧ ವಿಮಾನಗಳನ್ನು ಕಾರ್ಯಾಚರಣೆಗೆ ಬಳಕೆ ಮಾಡಿಕೊಂಡಿದೆ. 30 ದಶಕಗಳ ಸೇವೆಯಲ್ಲಿ ಕಾರ್ಗಿಲ್‌ ಯುದ್ಧ, ಅಂತಾರಾಷ್ಟ್ರೀಯ ಕಾರ್ಯಾಚರಣೆ ಸೇರಿದಂತೆ ವಿವಿಧ ಕಾರ್ಯಾಚರಣೆಗೆಗಳಿಗೆ ಮಿಗ್‌ ವಿಮಾನ ಬಳಕೆಯಾಗಿತ್ತು.

Follow Us:
Download App:
  • android
  • ios