Asianet Suvarna News Asianet Suvarna News

Bipin Rawat Death ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ 13 ಸೇನಾಧಿಕಾರಿಗಳಿಗೆ ಮೋದಿ ಗೌರವ ನಮನ!

  • ಬಿಪಿನ್ ರಾವತ್, ಪತ್ನಿ ಮಧುಲಿಕಾ, 11 ಮಂದಿ ಸೇನಾಧಿಕಾರಿಗಳಿಗೆ ಮೋದಿ ನಮನ
  • ತಮಿಳುನಾಡು ವಾಯುನೆಲೆಯಿಂದ ದೆಹಲಿ ತಲುಪಿದ ಪಾರ್ಥೀವ ಶರೀರ
  • ರಾವತ್ ಹಾಗೂ ದುರಂತದಲ್ಲಿ ಮಡಿದ ಸೇನಾಧಿಕಾರಿಗಳ ಕುಟಂಬ ಭೇಟಿಯಾದ ಮೋದಿ
IAF Helicopter crash PM modi rajnath singh pay tribute to CDS Gen Bipin rawat and others in delhi ckm
Author
Bengaluru, First Published Dec 9, 2021, 11:15 PM IST

ನವದೆಹಲಿ(ಡಿ.09):  ಸೇನಾ ಹೆಲಿಕಾಪ್ಟರ್(IAF Helicopter crash) ಪತನದಲ್ಲಿ ಮಡಿದ ಮಿಲಿಟರಿ ಮುಖ್ಯಸ್ಥ ಬಿಪಿನ್ ರಾವತ್(CDS Gen Bipin Rawat), ಪತ್ನಿ ಮಧುಲಿಕಾ ಹಾಗೂ ಇತರ 11 ಸೇನಾಧಿಕಾರಿಗಳ ಮೃತದೇಹ ದೆಹಲಿ ತಲುಪಿದೆ. ತಮಿಳುನಾಡಿನಿಂದ(Tamil Nadu) ದೆಹಲಿಯ ಪಾಲಮ್ ವಾಯು ನೆಲೆಗೆ(Palam Airbase Delhi)  ವಾಯು ಸೇನೆ ವಿಮಾನದ ಮೂಲಕ ಪಾರ್ಥೀವ ಶರೀರ ಆಗಮಿಸಿದೆ.  ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಗಲಿದ ಸೇನಾಧಿಕಾರಿಗಳಿಗ ಅಂತಿಮ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath singh) ಹಾಗೂ ಪ್ರಧಾನಿ ನರೇಂದ್ರ ಮೋದಿ((PM Narendra Modi) ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮಡಿದ 12 ಕುಟುಂಬವನ್ನು ಭೇಟಿ ಮಾಡಿದ್ದಾರೆ. ಈ ವೇಲೆ ಸರ್ಕಾರ ಕುಟುಂಬದ ಜೊತೆಗಿರುವುದಾಗಿ ಧೈರ್ಯ ತುಂಬಿದ್ದಾರೆ. ಪಾಲಮ್ ವಾಯುನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಾಜನಾಥ್ ಸಿಂಗ್ ಕೂಡ ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದವರ ಅಂತಿಮ ದರ್ಶನ ಪಡೆದಿದ್ದಾರೆ. ರಾಜನಾಥ್ ಸಿಂಗ್ ಕೂಡ ಕುಟುಂಬಸ್ಥರ ಭೇಟಿಯಾಗಿದ್ದಾರೆ.

Bipin Rawat Death ಹೆಲಿಕಾಪ್ಟರ್ ದುರಂತಕ್ಕೆ ಗಾಳಿ ಏರಿಳಿತ ಕಾರಣವೇ? ಬ್ಲಾಕ್ಸ್ ಬಾಕ್ಸ್ ಸೀಕ್ರೆಟ್!

ಮೋದಿ, ರಾಜನಾಥ್ ಸಿಂಗ್ ಜೊತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್(Ajit Doval), ಮೂರು ಸೇನಾ ಮುಖ್ಯಸ್ಥರು ಅಗಲಿದೆ ಸೇನಾಧಿಕಾರಿಗಳಿಗೆ ಗೌರವ ನಮನ ಸಲ್ಲಿಸಿದ್ದಾರೆ. 

ಸಿಡಿಎಸ್ ಜನರಲ್ ಬಿಪಿನ್ ರಾವತ್, ರಾವತ್ ಪತ್ನಿ ಮಧುಲಿಕ, ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ಪಿಎಸ್ ಚೌವ್ಹಾನ್, ಸ್ಕಾಡ್ರಾನ್ ಲೀಡರ್  ಕೆ ಸಿಂಗ್, JWO ದಾಸ್, JWO ಪ್ರದೀಪ್ ಎ, ಹವಿಲ್ದಾರ್ ಸತ್ಪಾಲ್ ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್್ ಹಾಗೂ ಲ್ಯಾನ್ಸ್ ನಾಯಕ್ ಸಾಯಿ ತೇಜ್ ವಾಯು ಸೇನೆಯ Mi-17V5 ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದಿದ್ದಾರೆ. ಇವರ ಪಾರ್ಥೀವ ಶರೀರವನ್ನು ಇದೀಗ ಪಾಲಂ ವಾಯುನೆಲೆಯಲ್ಲಿ ಇಡಲಾಗಿದೆ.

 

Bipin Rawat Death ಗೌರವಾರ್ಥ ಸೂಚನೆಯಾಗಿ ಅಂತ್ಯಕ್ರಿಯೆಗೆ ಸೇನಾ ಮುಖ್ಯಸ್ಥರ ಕಳುಹಿಸಲಿದೆ ಶ್ರೀಲಂಕಾ, ಭೂತಾನ್, ನೇಪಾಳ!

ಮೃತರ ಅಂತ್ಯಕ್ರಿಯೆ(Cremation) ನಾಳೆ(ಡಿ.10)ಕ್ಕೆ ದೆಹಲಿಯ ಕಂಟೋನ್ಮೆಂಟ್‌ನಲ್ಲ ನಡೆಯಲಿದೆ. ನಾಗರೀಕರಿಗೆ ಜನರಲ್ ಬಿಪಿನ್ ರಾವತ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ನಾಳೆ ಬೆಳಗ್ಗೆ 11 ಗಂಟೆಯಿಂದ 12.30ರ ವರೆಗೆ ರಾವತ್ ಅವರ ಕರಾಜ್ ಮಾರ್ಗ್‌ನಲ್ಲಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. 

ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ಪಿಎಸ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕೆ ಸಿಂಗ್, ಜೆಡಬ್ಲ್ಯೂಒ ದಾಸ್, ಜೆಡಬ್ಲ್ಯೂಒ ಪ್ರದೀಪ್ ಎ, ಹವಾಲ್ದಾರ್ ಸತ್ಪಾಲ್, ನಾಯಕ್ ಗುರ್ಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಮತ್ತು ಲ್ಯಾನ್ಸ್ ಅವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ (IAF) Mi-17V5 ಹೆಲಿಕಾಪ್ಟರ್ ಡಿಸೆಂಬರ್ 8 ರಂದು ತಮಿಳುನಾಡಿನ ಕುನೂರ್ ಬಳಿ ಪತನಗೊಂಡಾಗ ನಾಯಕ್ ಸಾಯಿ ತೇಜಾ ಸಾವನ್ನಪ್ಪಿದ್ದರು.

ಅಪಘಾತದಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್(Group Captain Varun Singh). ಆದರೆ ತೀವ್ರವಾಗಿ ಗಾಯಗೊಂಡಿರುವ ವರುಣ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ತಮಿಳುನಾಡಿನ ಮಿಲಿಟರಿ ಆಸ್ಪತ್ರೆಯಿಂದ ವರುಣ್ ಸಿಂಗ್ ಅವರನ್ನು ಬೆಂಗಳೂರಿನ(Bengaluru) ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 

 

ಹೆಲಿಕಾಪ್ಟರ್ ಅಪಘಾತದ ಕುರಿತು ಇದೀಗ ಭಾರಿ ಚರ್ಚೆಯಾಗುತ್ತಿದೆ. ಅತ್ಯಂತ ಸುರಕ್ಷಿತ(Safest Helicopter) ಹೆಲಿಕಾಪ್ಟರ್ Mi-17V5 ಹೆಲಿಕಾಪ್ಟರ್ ಪತನ ಹೇಗಾಯ್ತು? ಇದರ ಹಿಂದೆ ನಿಗೂಢ ಕಾರಣಗಳಿವೆಯಾ? ಹವಾಮಾನ(weather) ಒಂದೇ ಕಾರಣವಾಯಿತಾ? ಇಂತಹ ಹಲವು ಪ್ರಶ್ನೆಗಳು ಎದ್ದಿವೆ. ಇದರ ನಡುವೆ ತನಿಖೆಯೂ(Investigation) ಆರಂಭಗೊಂಡಿದೆ. 

Follow Us:
Download App:
  • android
  • ios