Asianet Suvarna News Asianet Suvarna News

Bipin Rawat Death ಗೌರವಾರ್ಥ ಸೂಚನೆಯಾಗಿ ಅಂತ್ಯಕ್ರಿಯೆಗೆ ಸೇನಾ ಮುಖ್ಯಸ್ಥರ ಕಳುಹಿಸಲಿದೆ ಶ್ರೀಲಂಕಾ, ಭೂತಾನ್, ನೇಪಾಳ!

  • CDS ಜನರಲ್ ಬಿಪಿನ್ ರಾವತ್ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನ
  • ರಾವತ್, ಪತ್ನಿ ಸೇರಿದಂತೆ 13 ಮಂದಿ ಅಪಘಾತದಲ್ಲಿ ನಿಧನ
  • ಡಿ.10ಕ್ಕೆ ರಾವತ್ ಹಾಗೂ ಪತ್ನಿ ಮಧುಲಿಕ ಅಂತ್ಯಕ್ರಿಯೆ
  • ಗೌರವಾರ್ಥ ಸೂಚನೆಯಾಗಿ ಮೂರು ರಾಷ್ಟ್ರಗಳಿಂದ ಸೇನಾಧಿಕಾರಿ ಭಾರತಕ್ಕೆ
Sri Lanka Nepal and Bhutan send top army officials to cremation of CDS Gen Bipin Rawat delhi ckm
Author
Bengaluru, First Published Dec 9, 2021, 8:16 PM IST

ನವದೆಹಲಿ(ಡಿ.09): ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್(CDS Gen Bipin Rawat) ಸೇರಿದಂತೆ 13 ಪ್ರಯಾಣಿಸುತ್ತಿದ್ದ IAF ಸೇನಾ ಹೆಲಿಕಾಪ್ಟರ್ ಪತನದ ನೋವು ದೇಶದಲ್ಲಿ ಮಡುಗಟ್ಟಿದೆ. ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಭಾರತೀಯ ಮಿಲಿಟರಿಯಲ್ಲಿ(Indian Military) ಹೊಸ ಅಧ್ಯಾಯ ಬರೆದ ಬಿಪಿನ್ ರಾವತ್(Bipin Rawat Death) ದುರಂತ ಅಂತ್ಯ ಕಂಡಿದ್ದು ಭಾರತೀಯರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾವತ್ ಅಂತ್ಯಕ್ರಿಯೆಗೆ(cremation) ಗೌರವಾರ್ಥವಾಗಿ ಶ್ರೀಲಂಕಾ, ಭೂತಾನ್ ಹಾಗೂ ನೇಪಾಳ ತಮ್ಮ ದೇಶದ ಸೇನಾಧಿಕಾರಿಗಳನ್ನು ಭಾರತಕ್ಕೆ ಕಳುಹಿಸಲಿದೆ. 

"

ಬಿಪಿನ್ ರಾವತ್ ಹಾಗೂ ರಾವತ್ ಪತ್ನಿ ಮಧುಲಿಕ ಅಂತ್ಯಕ್ರಿಯೆ ನಾಳೆ(ಡಿ.10) ದೆಹಲಿಯ ಕಂಟೋನ್ಮೆಂಟ್ ಬ್ರಾರ್ ಸ್ಕ್ವೇರ್ ಸ್ಮಶಾನದಲ್ಲಿ ನಡೆಯಲಿದೆ. ರಾವತ್ ಸೇರಿ ಸೇನಾಧಿಕಾರಿಗಳ ನಿಧನಕ್ಕೆ ಅಮೆರಿಕ, ರಷ್ಯಾ, ಇಸ್ರೇಲ್, ಯುಕೆ, ಆಸ್ಟ್ರೇಲಿಯಾ ಪೋಲಾಂಡ್, ಜೆಕ್ ರಿಪಬ್ಲಿಕ್, ಮಾಲ್ಡೀವ್ಸ್, ಪಾಕಿಸ್ತಾನ, ಚೀನಾ, ಜಪಾನ್, ತೈವಾನ್, ಜರ್ಮನಿ, ಸಿಂಗಾಪೂರ್, ಯುರೂಪೋ, ಸ್ವೀಡನ್, ಬಾಂಗ್ಲಾದೇಶ, ಓಮನ್, ಇರಾನ್, UA, ಗ್ರೀಸ್, ನೇಪಾಳ, ಭೂತಾನ್, ಶ್ರೀಲಂಕಾ ಸೇರಿದಂತೆ ಹಲವು ರಾಷ್ಟ್ರಗಳು ಸಂತಾಪ ಸೂಚಿಸಿದೆ. ಗೌರವಾರ್ಥವಾಗಿ ಮೂರು ರಾಷ್ಟ್ರಗಳು ತಮ್ಮ ಸೇನಾ ಮುಖ್ಯಸ್ಥರನ್ನು ಭಾರತಕ್ಕೆ ಕಳುಹಿಸುತ್ತಿದೆ.

IAF Helicopter Crash: ಸಾವಿಲ್ಲದ ಸೈನಿಕನ ಜೀವನ, ಮಿಂಚಿನ ಮಾತುಗಳು!

ಶ್ರೀಲಂಕಾ(Srilanka Army) ರಕ್ಷಣಾ ಮುಖ್ಯಸ್ಥ ಹಾಗೂ ಲಂಕಾ ಕಮಾಂಡರ್ ಜನರಲ್ ಶವೇಂದ್ರ ಸಿಲ್ವಾ ಭಾರತಕ್ಕೆ ಆಗಮಿಸುತ್ತಿದ್ದಾರೆ. ರಾವತ್ ಅಂತ್ಯಕ್ರಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಿಗೆ ಭಾರತದ ನ್ಯಾಷನಲ್ ಡಿಫೆನ್ಸ್ ಕಾಲೇಜಿನಿಂದ  ಕೋರ್ಸ್‌ಮೇಟ್ ಆಗಿದ್ದ, ನಿವೃತ್ತ ಸಿಡಿಎಸ್ ಅಡ್ಮಿರಲ್ ರವಿ ವಿಜೆಗುಣರತ್ನೆ ಸಾಥ್ ನೀಡಲಿದ್ದಾರೆ. 

"

ರಾಯಲ್ ಬೂತನ್(Roayl Bhutan Army) ಸೇನೆಯಿಂದ ಬ್ರಿಗೇಡಿಯರ್, ಸೇನೆಯ ಮುಖ್ಯ ಕಾರ್ಯಾಚಾರಣೆ ಉಪಾಧಿಕಾರಿ ದೋರ್ಜಿ ರಿಂಚೆನ್ ಭಾರತಕ್ಕೆ ಆಗಮಿಸುತ್ತಿದ್ದು, ಬಿಪಿನ್ ರಾವತ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭೂತನ್ ಸೇನೆಯ ಎರನೇ ಹಿರಿಯ ಅಧಿಕಾರಿಯಾಗಿದ್ದಾರೆ. ಇನ್ನು ನೇಪಾಳ(Napal Army) ಸೇನೆಯಿಂದ  ವೈಸ್ ಚೀಫ್ ಆರ್ಮಿಯ, ಚೀಫ್ ಆರ್ಮಿ ಸ್ಟಾಪ್ ಲೆಫ್ಟಿನೆಂಟ್ ಜನರಲ್ ಬಾಲಕೃಷ್ಣ ಕಾರ್ಕಿ ಭಾರತಕ್ಕೆ ಆಗಮಿಸುತ್ತಿದ್ದು, ರಾವತ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Bipin Rawat Death: ಪಾರ್ಥೀವ ಶರೀರ ಸಾಗುವ ದಾರಿಯುದ್ದಕ್ಕೂ ಹೂಮಳೆ ಸುರಿಸಿ ಭಾರತ್ ಮಾತಾಕಿ ಜೈ ಘೋಷಣೆ

ನೇಪಾಳ, ಶ್ರೀಲಂಕಾ, ಭೂತಾನ್ ಸೇರಿದಂತೆ ನೆರೆ ರಾಷ್ಟ್ರಗಳ ಜೊತೆ ಭಾರತ ನಿಕಟ ಸಂಪರ್ಕ ಹೊಂದಿದೆ.ಮಿಲಿಟರಿ ಒಪ್ಪಂದ, ಭಯೋತ್ಪಾದನೆ ವಿರುದ್ದದ ಹೋರಾಟ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ನೆರೆ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದು ಜೊತೆಯಾಗಿ ಹೆಜ್ಜೆ ಹಾಕಲು ಬಿಪಿನ್ ರಾವತ್ ನೆರವಾಗಿದ್ದರು. 2017ರಲ್ಲಿ ನೇಪಾಳ ಸರ್ಕಾರ ನೇಪಾಳ ಸೇನೆಯ ಗೌರವ ಜನರಲ್ ಆಗಿ ನೇಮಕ ಮಾಡಿತ್ತು.  ಇದು ಉಭಯ ದೇಶಗಳ ನಡುವಿನ ಮಿಲಿಟರಿ ಸಂಬಂಧಕ್ಕೆ ಸಾಕ್ಷಿಯಾಗಿದೆ.

ತಮಿಳುನಾಡಿನ(Tamil Nadu) ಕೂನೂರಿನಲ್ಲಿ ಘಟಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ(IAF Helicopter Crash) ಭಾರತದ ಮೊದಲ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ತಮ್ಮ ಪತ್ನಿ ಸೇರಿದಂತೆ 13 ಮಂದಿ ಸೇನಾಧಿಕಾರಿಗಳ ಜೊತೆ ಪ್ರಯಾಣಿಸುತ್ತಿದ್ದರು.  ಸೂಲುರ್ ವಾಯು(Sulur Air base) ನೆಲೆಯಿಂದ ಬೆಳಗ್ಗೆ 11.48ಕ್ಕೆ ಹೆಲಿಕಾಪ್ಟರ್ ಟೇಕ್ ಆಫ್ ಆಗಿದೆ. ಸತತ ಸಂಪರ್ಕದಲ್ಲಿದ್ದ ಹೆಲಿಕಾಪ್ಟರ್ ರೆಡಿಯೋ ಸಂಪರ್ಕ ಮಧ್ಯಾಹ್ನ 12.08ರ ವರೆಗೆ ಸಿಕ್ಕಿದೆ. ಬಳಿಕ ರೇಡಿಯೋ ಸಂಪರ್ಕ ಕಡಿದುಕೊಂಡಿದೆ. ಒಟ್ಟು 27 ನಿಮಿಷದ ಪ್ರಯಾಣವಾಗಿತ್ತು. 12.15ಕ್ಕೆ ವೆಲ್ಲಿಂಗ್ಟನ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಬೇಕಿತ್ತು.  ಟೇಕ್ ಆಫ್ ಆದ 20 ನಿಮಿಷಕ್ಕೆ ಹೆಲಿಕಾಪ್ಟರ್ ಪತನಗೊಂಡಿದೆ. ಇನ್ನು ಕೇವಲ 7 ನಿಮಿಷ ಪ್ರಯಾಣಸಿದರೆ ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡ್ ಆಗುವ ಸಾಧ್ಯತೆ ಇತ್ತು. ಆದರೆ ದುರಂತ ಅಂತ್ಯ ಕಾಣುವ ಮೂಲಕ ಭಾರತಕ್ಕೆ ತುಂಬಲಾರದ ನಷ್ಟ ಸಂಭವಸಿದೆ.  ವೀರ ಪುತ್ರರರನ್ನು ಕಳದುಕೊಂಡ ಭಾರತ ಬಡವಾಗಿದೆ.

Follow Us:
Download App:
  • android
  • ios