Asianet Suvarna News Asianet Suvarna News

IAF Helicopter Crash ಬೆಂಗಳೂರು ಕಮಾಂಡ್ ಆಸ್ಪತ್ರೆಯಲ್ಲಿರುವ ಕ್ಯಾಪ್ಟನ್ ವರುಣ್ ಸಿಂಗ್ ಹೆಲ್ತ್ ಬುಲೆಟಿನ್ ಬಿಡುಗಡೆ

  • ವಾಯುಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದ ಏಕೈಕ ಯೋಧ ವರುಣ್ ಸಿಂಗ್
  • ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌ಗೆ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ಹೆಲಿಕಾಪ್ಟರ್ ದುರುಂತದಲ್ಲಿ CDS ರಾವತ್, ಪತ್ನಿ ಸೇರಿ 13 ಸೇನಾಧಿಕಾರಿಗಳು ಸಾವು
IAF Helicopter Crash Group Capt Varun Singh come out victorious father express confidence ckm
Author
Bengaluru, First Published Dec 11, 2021, 8:36 PM IST

ಬೆಂಗಳೂರು(ಡಿ.11):  ವಾಯುಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ(IAF Helicopter crash) ಬದುಕಿದಿರುವ ಏಕೈಕ ಯೋಧ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್(Group Capt Varun Singh) ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಸದ್ಯ ಆರೋಗ್ಯ ಕುರಿತು ಏನೂ ಹೇಳುವ ಪರಿಸ್ಥಿತಿಯಲ್ಲಿ ನಾವಿಲ್ಲ. ಆದರೆ ನನ್ನ ಮಗ ಹೋರಾಟಗಾರ(He is a fighter), ವೀರ ಯೋಧ, ಆತ ಖಂಡಿತವಾಗಿ ಪರಿಸ್ಥಿತಿಯನ್ನು ಗೆದ್ದುಬರುತ್ತಾನೆ ಎಂದು ವರುಣ್ ಸಿಂಗ್ ತಂದೆ ನಿವೃತ್ತ ಕರ್ನಲ್ ಕೆಪಿ ಸಿಂಗ್(Colonel K P Singh) ಹೇಳಿದ್ದಾರೆ. 

ವರುಣ್ ಸಿಂಗ್ ಆರೋಗ್ಯವನ್ನು ಕ್ಷಣಕ್ಷಣಕ್ಕೂ ನಿಘಾವಹಿಸಲಾಗುತ್ತಿದೆ. ಅತ್ಯುತ್ತಮ ವೈದ್ಯರು, ಉತ್ತಮ ಆಸ್ಪತ್ರೆಯಲ್ಲಿ ನನ್ನ ಮಗನ ಚಿಕಿತ್ಸೆ ನಡೆಯುತ್ತಿದೆ. ದೇಶದ ಜನರ ಪ್ರಾರ್ಥನೆ ಮಗನ ಜೊತೆಗಿದೆ. ಮಗ ಹುಟ್ಟು ಹೋರಾಟಗಾರ, ವೀರ ಯೋಧ. ಹೀಗಾಗಿ ಈ ಎಲ್ಲಾ ಸಂಕಷ್ಟವನ್ನು ತೊಡೆದು ವಿಜಯಶಾಲಿಯಾಗುತ್ತಾನೆ ಎಂದು ಕೆಪಿ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Brigadier LS Lidder Funeral: ದುಃಖಿಸದೆ ಬೀಳ್ಕೊಡುವೆ: ಹುತಾತ್ಮ ಬ್ರಿಗೇಡಿಯರ್‌ ಲಿಡ್ಡರ್‌ ಪತ್ನಿ ಭಾವುಕ ನುಡಿ

ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಆದರೆ ಸ್ಥಿರವಾಗಿದೆ ಎಂದು ಬೆಂಗಳೂರಿನ ಕಮಾಂಡ್(Command Hospital Bengaluru) ಆಸ್ಪತ್ರೆಯ ಅಧಿಕಾರಿಗಳು ಹಾಗೂ ವಾಯುಸೇನಾ(IAF) ಅಧಿಕಾರಿಗಳು ಪ್ರಕಟಣೆಯಲ್ಲಿ ಹೇಳಿದ್ದಾರೆ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ದೇಗದಲ್ಲಿ ಶೇಕಡಾ 90 ರಷ್ಟು ಸುಟ್ಟ ಗಾಯಗಳಾಗಿವೆ. ಇನ್ನು ಅಪಘಾತದಿಂದ ರಕ್ತ ಸ್ರಾವವಾಗಿದೆ. ಅಪಘಾತದ ಗಾಯ , ಸುಟ್ಟ ಗಾಯದಿಂದ ವರುಣ್ ಸಿಂಗ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ ವೆಂಟಿಲೇಟರ್ ನೆರವಿನಲ್ಲಿರುವ ವರುಣ್ ಸಿಂಗ್ ಆರೋಗ್ಯ ಸ್ಥಿರವಾಗಿದೆ. ತೀವ್ರ ನಿಘಾ ಘಟಕದಲ್ಲಿ ನುರಿತ ವೈದ್ಯರ ತಂಡ ವರುಣ್ ಸಿಂಗ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. 

ತಮಿಳುನಾಡಿನ ಕೂನುರಿನ( Coonoor in Tamil Nadu) ನೀಲಗಿರಿ ಅರಣ್ಯದಲ್ಲಿ ವಾಯುಸೇನೆಯ Mi-17V5 ಹೆಲಿಕಾಪ್ಟರ್ ಪತನಗೊಂಡಿತ್ತು. ಈ ವಿಮಾನದಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್(Bipin Rawat), ಪತ್ನಿ ಮಧುಲಿಕಾ ರಾವತ್(Madhulika rawat) ಸೇರಿದಂತೆ 13 ಸೇನಾಧಿಕಾರಿಗಳು ನಿಧನರಾಗಿದ್ದಾರೆ. ಈ ಅಪಘಾತದಲ್ಲಿ ಬದುಕಿಳಿದ ಏಕೈಕ ಯೋಧ ಹೆಲಿಕಾಪ್ಟರ್ ಕ್ಯಾಪ್ಟನ್ ವರುಣ್ ಸಿಂಗ್. ಅಪಘಾತ ಸ್ಥಳದಿಂದ ಆ್ಯಂಬುಲೆನ್ಸ್ ಮೂಲಕ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

IAF Chopper Crash: ವದಂತಿಗಳನ್ನು ನಂಬಬೇಡಿ, ಶೀಘ್ರ ತನಿಖೆ ವರದಿ: ವಾಯು ಸೇನೆ

ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಿಲಿಟರಿ ಕಮಾಂಡ್ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿತ್ತು. ಬೆಂಗಳೂರಲ್ಲಿ ಚಿಕಿತ್ಸೆ ಆರಂಭಗೊಳ್ಳುತ್ತಿದ್ದ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಆಸ್ಪತ್ರೆಗೆ ದೌಡಾಯಿಸಿ ಆರೋಗ್ಯ ವಿಚಾರಿಸಿದ್ದಾರೆ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌ಗೆ ಅತ್ಯುತ್ತಮ ಚಿಕಿತ್ಸೆ ಸಿಗಲಿದೆ. ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಾರೆ ಎಂದು ಬೊಮ್ಮಾಯಿ ಹೇಳಿದ್ದರು. ಇದೇ ವೇಳೆ ಶೀಘ್ರ ಚೇತರಿಕೆಗೆ ಪಾರ್ಥಿಸುವುದಾಗಿ ಹೇಳಿದ್ದಾರೆ.

ವೆಲ್ಲಿಂಗ್ಟನ್‌ನಲ್ಲಿರುವ ಸೇನಾ ಕಾಲೇಜಿನಾ ಕಾರ್ಯಕ್ರಮಕ್ಕಾಗಿ ಭಾರತ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪತ್ನಿ ಮಧುಲಿಕಾ ರಾವತ್ ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನೀಲಗಿರಿ ಅರಣ್ಯದಲ್ಲಿ ಅಪಘಾತಕ್ಕೆ ಈಡಾಗಿತ್ತು. ಆ ಅಪಘಾದಲ್ಲಿ ರಾವತ್ ದಂಪತಿ ಸೇರಿದಂತೆ 13 ಮಂದಿ ನಿಧನರಾಗಿದ್ದಾರೆ. 

ಬಿಪಿನ್ ರಾವತ್ ದಂಪತಿ ಅಂತ್ಯಕ್ರಿಯೆ ಶುಕ್ರವಾರ ದೆಹಲಿಯ ಬ್ರಾರ್ ಸ್ಕ್ವೇರ್ ಕಂಟೋನ್ಮೆಂಟ್ ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ. ರಾವತ್ ಇಬ್ಬರು ಪುತ್ರಿಯರು ಅಂತಿಮ ವಿಧಿವಿಧಾನಗಳ್ನು ನಡೆಸಿ,  ಪೋಷಕರ ಪಾರ್ಥೀವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಇದಕ್ಕೂ ಮೊದಲು ಸಕಲ ಮಿಲಿಟರಿ ಗೌರವ ನೀಡಲಾಯಿತು.  ಬಾಂಗ್ಲಾದೇಶ, ನೇಪಾಳ, ಭೂತಾನ್, ಶ್ರೀಲಂಕಾ ಸೇನಾ ದಂಡಾಧಿಕಾರಿಗಳು ಅಂತ್ಯಕ್ರಿಯೆಲ್ಲಿ ಪಾಲ್ಗೊಂಡು ಗೌರವ ನಮನ ಸಲ್ಲಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡಿದ್ದರು.
 

Follow Us:
Download App:
  • android
  • ios