ಆಕ್ಸಿಜನ್ ತುಂಬಿಸಲು ಟ್ಯಾಂಕರ್‌ಗಳನ್ನು ಏರ್‌ಲಿಫ್ಟ್ ಮಾಡಿಸಿದ IAF
ಆಕ್ಸಿಜನ್ ತುಂಬಿಸಿ ತರಲು ಟ್ಯಾಂಕರ್ ಏರ್‌ಲಿಫ್ಟ್ | ಅವಶ್ಯಕತೆ ಇದ್ದಲ್ಲಿಂದ ಸಿಲಿಂಡರ್ ಏರ್‌ಲಿಫ್ಟ್ ಮಾಡಿ ಆಕ್ಸಿಜನ್ ತುಂಬಿಸಿ ತರುವ ಕೆಲಸ
ದೆಹಲಿ(ಏ.23): ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದ್ದು ಆಕ್ಸಿಜನ್ ಕೊರತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈಗಾಗಲೇ ಕೇಂದ್ರ ದೇಶದಲ್ಲಿ ಆಕ್ಸಿಜನ್‌ನ ಮುಕ್ತ ಸಾಗಾಟಕ್ಕೆ ಅನುಮತಿ ನೀಡಿದ್ದರೂ, ತುರ್ತಾಗಿ ಆಕ್ಸಿಜನ್ ತಲುಪಿಸಲು ಈಗ ಐಎಎಫ್ ಕೂಡಾ ಸಜ್ಜಾಗಿದೆ.
ಆಕ್ಸಿಜನ್ ಖಾಲಿಯಾದಾಗ ಅಂತಹ ಸ್ಥಳದಿಂದ ಟ್ಯಾಂಕರ್‌ಗಳನ್ನು ಏರ್‌ಲಿಫ್ಟ್ ಮಾಡಿ ರೀಫಿಲ್ ಸ್ಟೇಷನ್‌ಗಳಿಗೆ ಒಯ್ಯುವ ಕೆಲಸವನ್ನು ಐಎಎಫ್ ಮಾಡುತ್ತಿದೆ. ಐಎಎಫ್‌ನ ಸಿ -17 ಮತ್ತು ಐಎಲ್ -76 ವಿಮಾನಗಳು ಬೃಹತ್ ಆಕ್ಸಿಜನ್ ಟ್ಯಾಂಕರ್‌ಗಳನ್ನು ಬಳಕೆಯ ಸ್ಥಳದಿಂದ ರೀಫೀಲ್ ಕೇಂದ್ರಗಳಿಗೆ ಏರ್‌ಲಿಫ್ಟ್ ಮಾಡುತ್ತಿದೆ.
ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಲು ಮರೆಯದಿರಿ!
ದೇಶಾದ್ಯಂತ ಕೋವಿಡ್‌ನ ಎರಡನೇ ಅಲೆಯಲ್ಲಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯ ಮಧ್ಯೆ, ಭಾರತವು ಕೊರತೆಯನ್ನು ನೀಗಿಸಲು ಜರ್ಮನಿಯಿಂದ ಆಮ್ಲಜನಕ ಉತ್ಪಾದನಾ ಘಟಕಗಳು ಮತ್ತು ಪಾತ್ರೆಗಳನ್ನು ಆಮದು ಮಾಡಿಕೊಳ್ಳಲಿದೆ ಎನ್ನಲಾಗಿದೆ.
23 ಮೊಬೈಲ್ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಜರ್ಮನಿಯಿಂದ ವಿಮಾನದಲ್ಲಿ ಸಾಗಿಸಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇವುಗಳನ್ನು ಆಸ್ಪತ್ರೆಗಳಲ್ಲಿ ನಿಯೋಜಿಸಲಾಗುವುದು ಮತ್ತು ಅಗತ್ಯವಿರುವವರಿಗೆ ಸಾಕಷ್ಟು ಆಮ್ಲಜನಕವನ್ನು ಒದಗಿಸಲಾಗುತ್ತದೆ.
ಕೋವಿಡ್ ನಿಗ್ರಹ: ಇಂದು ಮೋದಿ 3 ತುರ್ತು ಸಭೆ
ಇದಲ್ಲದೆ, ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಪೂರೈಸಲು ಭಾರತ ಹೆಚ್ಚಿನ ಸಂಖ್ಯೆಯ ಆಮ್ಲಜನಕ ಕಂಟೈನರ್‌ಗಳನ್ನು ಸಂಗ್ರಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.