Asianet Suvarna News Asianet Suvarna News

ಬೈಕ್ ಕಳ್ಳತನಕ್ಕೆ ಬಂದವನ ಆ್ಯಕ್ಟಿಂಗ್‌ಗೆ ಫಿದಾ ಆಗೋದು ಖಚಿತ, ಸಿಸಿಟಿವಿಯಿಂದ ಸ್ಟಂಪ್ ಔಟ್!

ಪ್ರತಿ ಬಾರಿ ಹೊಸ ಮಾರ್ಗ, ಹೊಸ ಐಡಿಯಾ, ಹೊಸ ತಂತ್ರಜ್ಞಾನದ ಮೂಲಕ ಕಳ್ಳತನ ಮಾಡುತ್ತಾರೆ. ಇಲ್ಲೊಬ್ಬ ಕಳ್ಳತನಕ್ಕೆ ಯಾರೂ ಊಹಿಸಲು ಸಾಧ್ಯವಾಗದ ಆ್ಯಕ್ಚಿಂಗ್ ಜೊತೆಗೆ ಐಡಿಯಾ ಬಳಸಿದ್ದಾನೆ. ಆದರೆ ಇನ್ನೇನು ಬೈಕ್ ಕಳ್ಳತನ ಮಾಡಬೇಕು ಅನ್ನುವಷ್ಟರಲ್ಲೆ ಸಿಸಿಟಿವಿಯಿಂದ ಎಲ್ಲಾ ಪ್ರಯತ್ನ ವಿಫಲಗೊಂಡ ವಿಡಿಯೋ ಭಾರಿ ವೈರಲ್ ಆಗಿದೆ.
 

Young man try to stole bike with cricket bating pose Crime foiled by cctv ckm
Author
First Published Jul 29, 2024, 6:35 PM IST | Last Updated Jul 29, 2024, 6:35 PM IST

ಬ್ಯಾಟ್ ಹಿಡಿದು ಬೌಂಡರಿ ಸಿಕ್ಸರ್ ಅಭ್ಯಾಸ, ಕ್ರಿಕೆಟಿಂಗ್ ಶಾಟ್ಸ್ ಅಭ್ಯಾಸ, ಈ ಯುವಕನ ನೋಡಿದರೆ ಮುಂದೊಂದು ದಿನ ಉತ್ತಮ ಕ್ರಿಕೆಟಿಗನಾಗುತ್ತಾನೆ ಅನ್ನೋ ಆಲೋಚನೆಗಳು ಮನಸ್ಸಿನಲ್ಲಿ ಮೂಡುವುದು ಸಹಜ. ಈತನ ಕ್ರಿಕೆಟ್ ಆಸಕ್ತಿಯನ್ನು ಕೊಂಡಾಡಿದರೂ ಅಚ್ಚರಿ ಇಲ್ಲ. ಆದರೆ ಇವೆಲ್ಲವೂ ಕೇವಲ ನಟನೆಯಾಗಿತ್ತು. ಅಸಲಿಗ ಈತ ಬೈಕ್ ಕಳ್ಳತನಕ್ಕೆ ಬಂದಿದ್ದಾನೆ. ಅದೇ ಕ್ರಿಕೆಟ್ ಆಟದಲ್ಲೇ ಹ್ಯಾಂಡಲ್ ಲಾಕ್ ಚೆಕ್ ಮಾಡಿದ್ದಾನೆ. ಇನ್ನೇನು ಬೈಕ್ ಕಳ್ಳತನ ಮಾಡಬೇಕು ಅನ್ನುವಷ್ಟರಲ್ಲಿ ಸಿಸಿಟಿವಿ ಕ್ಯಾಮೆರಾ ನೋಡಿ ಅರ್ಧಕ್ಕೆ ಕೈಬಿಟ್ಟ ವಿಡಿಯೋ ಒಂದು ಭಾರಿ ವೈರಲ್ ಆಗಿದೆ.

ಗಲ್ಲಿ ಒಳಗಿನ ಈ ವಿಡಿಯೋದಲ್ಲಿ ಬೈಕ್ ಕಳ್ಳತನದ ಪ್ರಯತ್ನ ಸೆರೆಯಾಗಿದೆ. ಎರಡೂ ಬದಿಯಲ್ಲಿ ಮನೆ, ಕಟ್ಟಡಗಳಿರುವ ಪ್ರದೇಶ. ಇದರ ನಡುವೆ ಒಂದೆಡೆರು ಬೈಕ್ ನಿಲ್ಲಿಸಲಾಗಿದೆ. ಹೆಚ್ಚಾಗಿ ಜನರ ಓಡಾಟವಿಲ್ಲ. ಈ ವೇಳೆ ಯುವಕನೊಬ್ಬ ಬ್ಯಾಟ್ ಹಿಡಿದು ಆಗಮಿಸಿದ್ದಾನೆ. ಮೊದಲ ನೋಟಕ್ಕೆ ಯಾವುದೇ ಸಂದೇಹವಿಲ್ಲ. ನಡೆದುಕೊಂಡು ಬಂದ ಈ ಯುವಕ ಬ್ಯಾಟ್ ಹಿಡಿದು ಬೌಂಡರಿ ಸಿಕ್ಸ್ ಪೋಸ್ ನೀಡಿದ್ದಾನೆ. 

ಇಡೀ ರೆಸ್ಟೋರೆಂಟ್ ತಡಕಾಡಿದ ಕಳ್ಳನಿಗೆ ನಿರಾಸೆ, ಏನೂ ಸಿಗದೆ ತನ್ನ 20 ರೂ ಇಟ್ಟು ಹೊರಟ ದೃಶ್ಯ ಸೆರೆ!

ಇದೇ ವೇಳೆ ಹಿಂಭಾಗದಿಂದ ವ್ಯಕ್ತಿಯೊಬ್ಬರು ಆಗಮಿಸಿದ್ದಾರೆ. ಈ ವ್ಯಕ್ತಿಗೂ ಅನುಮಾನ ಬರದಂತೆ ಈತ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾನೆ. ಇದೇ ವೇಳೆ ಒಂದೊಂದು ಶಾಟ್ಸ್ ಪೋಸ್ ನೀಡಿದ ಬೆನ್ನಲ್ಲೇ ಬೈಕ್ ಹ್ಯಾಂಡಲ್ ಲಾಕ್ ಆಗಿದೆಯಾ ಎಂದು ಪರೀಶೀಲಿಸಿದ್ದಾನೆ. ಬಳಿಕ ಮೆಲ್ಲನೆ ಬೈಕ್ ಮೇಲೆ ಹತ್ತಿ ಕಳ್ಳತನಕ್ಕೆ ಮುಂದಾಗಿದ್ದಾನೆ. 

 

 

ಸ್ಟಾಂಡ್ ತೆಗೆದು ಬೈಕ್ ಮೆಲ್ಲನೆ ತಳ್ಳಿದ್ದಾನೆ. ಇನ್ನೇನು ಬೈಕ್‌ನ್ನು ಸ್ಥಳದಿಂದ ಎಗರಿಸಬೇಕು ಅನ್ನುವಷ್ಟರಲ್ಲೇ ದೂರದಲ್ಲಿದ್ದ ಸಿಸಿಟಿವಿಯನ್ನು ಗಮನಿಸಿದ್ದಾನೆ.   ತಕ್ಷಣವೇ ತನ್ನ ಕಳ್ಳತನ ಪ್ಲಾನ್ ಕೈಬಿಟ್ಟಿದ್ದಾನೆ. ಮೆಲ್ಲನೆ ಬೈಕ್‌ನಿಂದ ಇಳಿದ ಈತ, ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇನ್ನೇನು ಗೆಲುವಿನ ಸಿಕ್ಸರ್ ಸಿಡಿಸಬೇಕು ಎನ್ನುವಾಗ ಔಟ್ ಆಗಿ ಪೆವಿಲಿಯನ್‌ಗೆ ಮರಳುವಂತೆ ಬ್ಯಾಟ್ ಮುಖಕ್ಕೆ ಅಡ್ಡ ಹಿಡಿದು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಮನೆಗೆ ನುಗ್ಗಿ ಪಕೋಡ ತಯಾರಿಸಿ ತಿಂದು ಚಿನ್ನಾಭರಣ ದೋಚಿದ ಕಳ್ಳರ ಗ್ಯಾಂಗ್!

ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಕೆಲವರು ಇದು ನಕಲಿ ಎಂದು ಪ್ರತಿಕ್ರಿಯೆಸಿದ್ದಾರೆ. ವೈರಲ್ ವಿಡಿಯೋಗಾಗಿ ಮಾಡಿದ ನಕಲಿ ನಾಟಕ ಎಂದಿದ್ದಾರೆ. ನಕಲಿ ಮಾಡುವಾಗಲು ಕೆಲ ತಪ್ಪುಗಳನ್ನು ಮಾಡಿದ್ದಾರೆ. ಈ ರೀತಿ ಕಪಟ ವಿಡಿಯೋಗಳಿಗೆ ಮಾರುಹೋಗಬೇಡಿ ಎಂದು ಎಚ್ಚರಿಸಿದ್ದಾರೆ.ಮತ್ತೆ ಕೆಲವರು ಕಳಪೆ ನಾಯಕತ್ವ ಎಂದು ಕಮೆಂಟ್ ಮಾಡಿದ್ದಾರೆ. ಬ್ಯಾಟಿಂಗ್ ಕಳ್ಳ ಎಂದು ಹೆಸರಿಟ್ಟಿದ್ದಾರೆ. 
 

Latest Videos
Follow Us:
Download App:
  • android
  • ios