Asianet Suvarna News Asianet Suvarna News

ಸೋನು ಸೂದ್ ಮೇಲೆ ಐಟಿ ಕಣ್ಣು.. ಆರು ಸ್ಥಳಗಳ ಮೇಲೆ ನಿಗಾ!

* ಬಾಲಿವುಡ್ ನಟ ಸೋನು ಸೂದ್ ಮೇಲೆ ಐಟಿ ಕಣ್ಣು
* ಸೋನು ಸೂದ್ ಗೆ ಸೇರಿದ ಆರು ಸ್ಥಳಗಳ ಸರ್ವೇ
* ದೆಹಲಿ ಸರ್ಕಾರದ ಯೋಜನೆಯೊಂದರ ಅಂಬಾಸಿಡರ್ ಆಗಿದ್ದರು
* ಕೊರೋನಾ ಸಂಕಷ್ಟ ಕಾಲದಲ್ಲಿ ಕಾರ್ಮಿಕರ ನೆರವಿಗೆ ನಿಂತಿದ್ದರು

I T Department Surveys 6 Places Linked To Actor Sonu Sood Mumbai Sources mah
Author
Bengaluru, First Published Sep 15, 2021, 5:01 PM IST
  • Facebook
  • Twitter
  • Whatsapp

ನವದೆಹಲಿ(ಸೆ. 15)  ಬಾಲಿವುಡ್ ನಟ ಸೋನು ಸೂದ್ ಗೆ ಸಂಬಂಧಿಸಿದ ಆರು ಸ್ಥಳಗಳನ್ನು ಆದಾಯ ತೆರಿಗೆ ಇಲಾಖೆ ಸರ್ವೇ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. s ಸೋನು ಸೂದ್ ಅವರ ಮುಂಬೈ ನಿವಾಸಕ್ಕೆ ಐಟಿ ಅಧಿಕಾರಿಗಳ  ತಂಡ ಭೇಟಿ ನೀಡಿತ್ತು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. 

ದೆಹಲಿ ಸರ್ಕಾರದ ಮೆಂಟರ್ ಶಿಪ್ ಯೋಜನೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ಸೋನು ಇತ್ತೀಚೆಗೆ ನೇಮಕವಾಗಿದ್ದರು.  ರಾಜಕಾರಣ ಸೇರುವ ಬಗ್ಗೆ ಸೋನು ಯಾವ ಸ್ಪಷ್ಟನೆಯನ್ನು ಕೊಟ್ಟಿರಲಿಲ್ಲ.

ಹೇಗಿದ್ದ ಸೋನು ಸೂದ್ ಹೇಗಾದರು? ಪೋಟೋಗಳಲ್ಲಿ

ಕೊರೋನಾ ಕಾಲದಲ್ಲಿ ವಲಸೆ ಕಾರ್ಮಿಕರು ಮತ್ತು ಸಂಕಷ್ಟಕ್ಕೆ ಗುರಿಯಾದವರ ನೆರವಿಗೆ 48  ವರ್ಷದ ನಟ ನಿಂತಿದ್ದರು. ವಿಶೇಷ ವಿಮಾನದ ಮೂಲಕವೂ ತವರಿಗೆ ಹಲವರನ್ನು ಕಳುಹಿಸಿಕೊಟ್ಟಿದ್ದರು. ಸೋನು ಸೂದ್ ಅವರ ಈ ಜನಪರ ಕೆಲಸಗಳು ಅವರಿಗೆ ದೊಡ್ಡ ಅಭಿಮಾನಿ ವರ್ಗವೇ ನಿರ್ಮಾಣವಾಗಲು ಕಾರಣವಾಗಿತ್ತು. 

ಸೋನು ಸೂದ್ ಕಾಂಗ್ರೆಸ್ ಸೇರಿ ಪಂಜಾಬ್ ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ ಎನ್ನುವ ಮಾತುಗಳು ವ್ಯಕ್ತವಾಗಿದ್ದವು. ಈ ನಡುವೆಯೇ ಅವರು ದೆಹಲಿ ಆಮ್ ಆದ್ಮಿ ಸರ್ಕಾರದ ಯೋಜನೆಯೊಂದರ ಅಂಬಾಸಿಡರ್ ಆದರು. 

Follow Us:
Download App:
  • android
  • ios