ದೈಹಿಕ ಹಲ್ಲೆ, ಮಾನಸಿಕ ಕಿರುಕುಳ, ಖಿನ್ನತೆ ಸೇರದಂತೆ ಹಲವು ಕಾರಣಗಳಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಪತಿಯ ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ತಾಳಲಾರದೆ ಟೆಕ್ಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಟೆಕ್ಕಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿದ್ದಾರೆ. ಆತ್ಮಹತ್ಯೆ ಬೆನ್ನಲ್ಲೇ ಟೆಕ್ಕಿ ಕುಟುಂಬಸ್ಥರು ಪತಿಯ ಘನಘೋರ ವಿಡಿಯೋ ಬಿಡುಗಡೆ ಮಾಡಿದ್ದಾರೆ

ಹೈದರಾಬಾದ್(ಜೂ.27): ಹಲವು ಕಾರಣಗಳಿಂದ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರಲ್ಲೂ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ದೇಶವೇ ಬೆಚ್ಚಿ ಬಿದ್ದಿದೆ. ಇದೀಗ ಹೈದರಾಬಾದ್ 32 ವರ್ಷದ ಟೆಕ್ಕಿ ಎಂ ಲಾವಣ್ಯ ಲಹರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಕಿರಿಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

 ಪದವಿ ಪರೀಕ್ಷೆ ನಡೆಯದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಖಾಸಗಿ ವಿಮಾನಯಾನದಲ್ಲಿ ಪೈಲೆಟ್ ಆಗಿರುವ ಪತಿ ವೆಂಕಟೇಶ್ವರಲು ಪ್ರತಿ ದಿನ ಹಲ್ಲೆ ಮಾಡುತ್ತಿದ್ದಾನೆ. ಆತನಿಗೆ ಬೇರೊಂದು ಮಹಿಳೆ ಜೊತೆ ಸಂಪರ್ಕವಿದೆ. ಪತಿಯ ಕಿರುಕುಳ ಸಹಿಸಲು ಆಗುತ್ತಿಲ್ಲ ಎಂದಿದ್ದಾರೆ. ಲಾವಣ್ಯ ಆತ್ಮಹತ್ಯೆ ಬೆನ್ನಲ್ಲೇ, ಕುಟುಂಬಸ್ಥರು ವೆಂಕಟೇಶ್ವರಲು ಭೀಕರತೆ ವಿಡಿಯೋ ಬಹಿರಂಗ ಮಾಡಿದ್ದಾರೆ.

Scroll to load tweet…

ಸುಶಾಂತ್ ಅಗಲಿಕೆ ನೋವು; ನಾಲ್ವರು ಮಕ್ಕಳ ಆತ್ಮಹತ್ಯೆ

ಲಾವಣ್ಯಗೆ ಹಲ್ಲೆ ಮಾಡುತ್ತಿರುವ ದೃಶ್ಯದ ಈ ವಿಡಿಯೋ ಬೆಚ್ತಿ ಬೀಳಿಸುವಂತಿದೆ. ಘನಘೋರ ವಿಡಿಯೋ ಬಹಿರಂಗ ಮಾಡಿದ ಕುಟುಂಬಸ್ಥರು ಕಠಿಣ ಶಿಕ್ಷೆಗೆ ಆಗ್ರಹಿಸಿತ್ತು. ಮಗಳನ್ನು ಹೊಡೆದು ಸಾಯಿಸಲಾಗಿದೆ. ಬಳಿಕ ಆತ್ಮಹತ್ಯೆ ನಾಟಕ ಆಡಿದ್ದಾರೆ ಎಂದು ಲಾವಣ್ಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ವೆಂಕಟೇಶ್ವರ ವಿರುದ್ಧ ಪ್ರಕರಣ ದಾಖಲಾಗಿದೆ.