ಸೈಕಲ್ ಏರಿ ಫುಡ್ ವಿತರಣೆ ಮಾಡುತ್ತಿದ್ದ ಡೆಲಿವರಿ ಬಾಯ್ ಬದಕು ಬದಲಿಸಿದ ಒಂದು ಆರ್ಡರ್!

  • ಮಳೆಯಲ್ಲಿ ತೊಯ್ದು ಸೈಕಲ್ ಮೂಲಕ ಫುಡ್ ವಿತರಣೆ
  • ಜೋಮ್ಯಾಟೋ ಡೆಲಿವರಿ ಬಾಯ್ ಕಷ್ಟಕ್ಕೆ ಸ್ಪಂದಿಸಿದ ನೆಟ್ಟಿಗರು
  • ವಿದ್ಯಾಭ್ಯಾಸಕ್ಕಾಗಿ ದುಡಿಮೆ, ಬದುಕು ಬದಲಿಸಿತು ಬೆಚ್ಚಿನ ಚಹಾ ಆರ್ಡರ್
Hyderabad Netizens raise fund to gift bike to food delivery boy ckm

ಹೈದರಾಬಾದ್(ಜೂ.21): ಸಾಮಾಜಿಕ ಮಾಧ್ಯಮ ಹಲವರ ಬದಕು ಬದಲಿಸಿದೆ. ಸರಿಯಾಗಿ ಉಪಯೋಗಿಸಿಕೊಂಡವರ ಬದುಕು ಹಸನಾಗಿದೆ. ಇದೇ ಸಾಮಾಜಿಕ ಮಾಧ್ಯಮ ಕಷ್ಟದಲ್ಲಿದ್ದ ಜೋಮ್ಯಾಟೋ ಡೆಲಿವರಿ ಬಾಯ್ ಬದುಕನ್ನೇ ಬದಲಿಸಿದೆ. ಹೌದು, ಸೈಕಲ್ ಮೂಲಕ, ಮಳೆಯಲ್ಲಿ ಒದ್ದೆಯಾಗಿ ಡೆಲಿವರಿ ಮಾಡುತ್ತಿದ್ದ ಹೈದರಾಬಾದ್‌ನ ಮೊಹಮ್ಮದ್ ಅಖೀಲ್ ಬದುಕು, ಸಾಮಾಜಿಕ ಮಾಧ್ಯಮದಿಂದ ಹಸನಾಗಿದೆ.

ನೀರು ತುಂಬಿದ ರಸ್ತೆಯಲ್ಲಿ ಪಾರ್ಸಲ್ ಹಿಡಿದು ನಿಂತ ಡಿಲೆವರಿ ಬಾಯ್! ಕಮೆಂಟ್ಸ್ ಚೆನ್ನಾಗಿವೆ.

ಹೈದರಾಬಾದ್ ಮೂಲದ ಎಂಜನೀಯರಿಂಗ್ ವಿದ್ಯಾರ್ಥಿ ಮೊಹಮ್ಮದ್ ಅಖೀಲ್ . ಅನಾರೋಗ್ಯದಿಂದಿರುವ ತಂದೆ ತಾಯಿ ಸೇರಿದಂತೆ 7 ಮಂದಿ ಇರುವ ಕುಟುಂಬ. ಆದರೆ ಕುಟುಂಬದ ಜವಾಬ್ದಾರಿ ಇದೇ ಮೊಹಮ್ಮದ್ ಅಖೀಲ್ ಮೇಲಿದೆ. ಹೀಗಾಗಿ ಜೋಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ. 

ಆರ್ಡರ್ ಬಂದ ತಕ್ಷಣ ತನ್ನ ಸೈಕಲ್ ಏರಿ, ಮಳೆಯನ್ನೂ ಲೆಕ್ಕಿಸದೆ ಸಮಯಕ್ಕೆ ಸರಿಯಾಗಿ ಡೆಲಿವರಿ ಮಾಡುತ್ತಿದ್ದ ಮೊಹಮ್ಮದ್‌ಗೆ ರೊಬಿನ್ ಮುಖೇಶ್ ಅವರಿಂದ ಆರ್ಡರ್ ಬಂದಿದೆ. ಭಾರಿ ಮಳೆ ಇದ್ದರೂ ತಕ್ಕ ಸಮಯದಲ್ಲಿ ಆರ್ಡರನ್ನು ರಾಬಿನ್ ಮುಖೇಶ್‌ಗೆ ತಲುಪಿಸಿದ್ದಾನೆ. 

Zomato ಫುಡ್ ಡೆಲಿವರಿ ಮಾಡುವ ವಿಶೇಷ ಚೇತನ: ವೀಡಿಯೋ ಫುಲ್ ವೈರಲ್

ಮಳೆಯಿಂದ ಒದ್ದೆಯಾದ ಮೊಹಮ್ಮದ್ ಅಖೀಲ್ ನೋಡಿ ರಾಬಿನ್ ಮುಖೇಶ್ ಮಾತುಕತೆ ನಡೆಸಿದ್ದಾರೆ. ಬಳಿಕ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾನು ನಿಲೋಫರ್ ಕೆಫೆ ಮೂಲಕ ಫುಡ್ ಆರ್ಡರ್ ಮಾಡಿದ್ದೆ. ಡೆಲಿವರಿ ಬಾಯ್ ಮೊಹಮ್ಮದ್ ಅಖೀಲ್  ತಕ್ಕ ಸಮಯದಲ್ಲಿ ಹಾಜರಾಗಿದ್ದಾರೆ. ಗೇಟ್ ಬಳಿ ಹೋದಾಗ ಮಳೆಯಿಂದ ತೊಯ್ದ ಅಖೀಲ್ ಬೆಚ್ಚಿಗಿನ ಆಹಾರ ಡೆಲಿವರಿ ಮಾಡಿದ್ದಾನೆ. ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಮೊಹಮ್ಮದ್, ಸೈಕಲ್ ಮೂಲಕ ಡೆಲಿವರಿ ಮಾಡುತ್ತಿದ್ದಾನೆ. ದಯವಿಟ್ಟು ಎಲ್ಲರೂ ಸಹಾಯ ಮಾಡಿ ಎಂದು ಫೇಸ್‌ಬುಕ್ ಮೂಲಕ ಬರೆದುಕೊಂಡಿದ್ದಾರೆ.

ರಾಬಿನ್ ಮುಖೇಶ್ ಪೋಸ್ಟ್ ಮಾಡಿದ 12 ಗಂಟೆಗಳಲ್ಲೇ ನೆರವು ಹರಿದು ಬಂದಿದೆ. 73,000 ರೂಪಾಯಿ ಸಂಗ್ರಹಿಸಲಾಗಿದೆ. ಮೊಹಮ್ಮದ್ ಅಖೀಲ್ ಆಹ್ವಾನಿಸಿ, ಆತನಿಗೆ ಟಿವಿಎಸ್ XL ಬೈಕ್ ಖರೀದಿಸಿದ್ದಾರೆ. ಇನ್ನು ರೈನ್ ಕೋಟ್, ಉತ್ತಮ ಹೆಲ್ಮೆಟ್ ಕೂಡ ನೀಡಲಾಗಿದೆ. ಇನ್ನುಳಿದ ಹಣವನ್ನು ಆತನ ಕಾಲೇಜು ಫೀಸ್‌ಗೆ ನೀಡಲಾಗಿದೆ.

Latest Videos
Follow Us:
Download App:
  • android
  • ios