*ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಚಾರ* ಡೊಮಿನೋಸ್  ಪಿಜ್ಜಾ ಡಿಲೆವರಿ ಬಾಯ್  ನೀರಿನಲ್ಲಿ* ತನ್ನ  ನೌಕರನ ಶ್ಲಾಘನೆ ಮಾಡಿದ ಕಂಪನಿ* ಇದೊಂದು ಅಮಾನವೀಯ ವರ್ತನೆ ಎಂದು ಕ್ಲಾಸ್ ತೆಗೆದುಕೊಂಡ ನೆಟ್ಟಿಗರು

ಕೋಲ್ಕತ್ತಾ(ಮೇ 14) ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಎಂಬುದಕ್ಕೆ ಈ ಪ್ರಕರಣವೇ ದೊಡ್ಡ ಉದಾಹರಣೆ. ಡೊಮಿನೋಸ್ ಪಿಜ್ಜಾ ಸಂಸ್ಥೆ ಈ ಪೋಟೋ ಶೇರ್ ಮಾಡಿಕೊಂಡಿದೆ. ನೀರು ತುಂಬಿರುವ ರಸ್ತೆ ಮಧ್ಯೆ ಡಿಲೆವರಿ ಬಾಯ್ ಗ್ರಾಹಕರಿಗೆ ನೀಡಬೇಕಾದ ಪಾರ್ಸಲ್ ಹಿಡಿದು ನಿಂತಿದ್ದಾರೆ.

ಡೊಮಿನೋಸ್ ಸಂಸ್ಥೆ ತನ್ನ ಸಿಬ್ಬಂದಿಯನ್ನು ಹೊಗಳಿದ್ದರೆ ಜನ ಇದನ್ನು ಕಾರ್ಮಿಕ ಶೋಷಣೆ ಎಂದು ಕರೆದಿದ್ದಾರೆ. ಧಾರಾಕಾರ ಮಳೆ ಕಾರಣಕ್ಕೆ ಕೋಲ್ಕತ್ತಾದ ಬೀದಿಯಲ್ಲಿ ನೀರು ತುಂಬಿಕೊಂಡಿತ್ತು. ಇದೆಲ್ಲದರ ನಡುವೆಯೂ ಡಿಲೆವರಿ ಬಾಯ್ ಶವೋನ್ ಘೋಷ್ ಪಾರ್ಸಲ್ ಹಿಡಿದು ನಿಂತಿದ್ದರು.

ವೆಜ್ ಬದಲು ನಾನ್ ವೆಜ್ ಕೊಟ್ಟಿದ್ದಕ್ಕೆ ಕೋಟಿ ಪರಿಹಾರ

ನಿಜವಾದ ಸೈನಿಕ ಯಾವ ಕಾರಣಕ್ಕೂ ತನ್ನ ಕರ್ತವ್ಯ ಮರೆಯುವುದಿಲ್ಲ ಎಂದು ಡೊಮಿನೋಸ್ ಬಣ್ಣಿಸಿತ್ತು. ಮಳೆಯಾದರೇನು, ಬಿಸಿಲಾದರೇನು ಎಂದು ತನ್ನ ಕರ್ತವ್ಯ ನಿಭಾಯಿಸುತ್ತಿದ್ದ ಎಂದು ಹೇಳಿತ್ತು.

ಇದರಲ್ಲಿ ಹೊಗಳಿಕೊಳ್ಳುವಂತದ್ದು ಏನೂ ಇಲ್ಲ. ಇದೊಂದು ಅಮಾನವೀಯ ವರ್ತನೆ. ಮೊದಲು ಆ ಡಿಲೆವರಿ ಬಾಯ್ ಆರೋಗ್ಯ ಮುಖ್ಯ ಎಂದು ನೆಟ್ಟಿಗರು ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

Scroll to load tweet…

##

Scroll to load tweet…