Asianet Suvarna News Asianet Suvarna News

ಚಿಕನ್ ಬಿರಿಯಾನಿಯಲ್ಲಿ ಲೆಗ್‌ ಪೀಸ್ ಇಲ್ಲ; ಸಚಿವರಿಗೆ ದೂರು ನೀಡಿದ ಗ್ರಾಹಕ!

  • ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ಲೆಗ್ ಪೀಸ್ ಇಲ್ಲ
  • ಆಕ್ಸಿಜನ್, ಬೆಡ್, ಲಸಿಕೆ ಸಮಸ್ಯೆಗಳ ನಡುವೆ ವಿಶೇಷ ದೂರು
  • ದೂರು ನೋಡಿದ ಸಚಿವರು ನನ್ನಿಂದ ಏನು ನಿರೀಕ್ಷಿಸುತ್ತಿದ್ದೀರಿ ಎಂದು ಪ್ರಶ್ನೆ?
Hyderabad man complains to minister about lack of leg piece in biryani ckm
Author
Bengaluru, First Published May 29, 2021, 5:43 PM IST

ಹೈದರಾಬಾದ್(ಮೇ.29): ಕೊರೋನಾ ಸಂಕಷ್ಟ ಸಮಯದಲ್ಲಿ ಜನಪ್ರತಿನಿಧಿಗಳಿಗೆ ಆಕ್ಸಿಜನ್, ಬೆಡ್, ಲಸಿಕೆ ಸೇರಿದಂತೆ ಹಲವು ದೂರುಗಳು ಮನವಿಗಳು ಪ್ರತಿ ದಿನ ಬರುತ್ತಲೇ ಇದೆ. ಕೊರೋನಾ ದೂರು, ಮನವಿಗಳ ನಡುವೆ ಸಚಿವರಿಗೆ ವಿಶೇಷ ದೂರೊಂದು ಬಂದಿದೆ. ತಾನು ಆರ್ಡರ್ ಮಾಡಿದ ಚಿಕನ್ ಬಿರಿಯಾನಿಯಲ್ಲಿ ಲೆಗ್‌ಪೀಸ್, ಮಸಾಲ ಇಲ್ಲ ಅನ್ನೋ ದೂರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ

ಚಿಕನ್ ಬಿರಿಯಾನಿ ಜೊತೆ ಮೊಟ್ಟೆ ತಿಂತೀರಾ..? ಹಾಗಾದ್ರೆ ಇಲ್ಲಿ ಓದಿ

ಹೈದರಾಬಾದ್ ಎಂದ ತಕ್ಷಣ ಎಲ್ಲರಿಗೆ ಮೊದಲು ನೆನಪಾಗುವುದೇ ಬಿರಿಯಾನಿ. ಹೈದರಾಬಾದ್ ಬಿರಿಯಾನಿ ದೇಶದಲ್ಲಿ ಭಾರಿ ಜನಪ್ರಿಯವಾಗಿದೆ. ರಾಜಕಾರಣಿಗಳು, ಬಾಲಿವುಡ್, ಟೀಂ ಇಂಡಿಯಾ ಕ್ರಿಕೆಟಿಗರಿಗೂ ಹೈದರಾಬಾದ್ ಬಿರಿಯಾನಿ ಅಚ್ಚು ಮೆಚ್ಚು. ಇಂತಹ ಪ್ರದೇಶದಲ್ಲಿ ಬಿರಿಯಾನಿ ಹೆಚ್ಚು ಕಮ್ಮಿ ಆದರೆ ರಾಜಿಯಾಗಲು ಸಾಧ್ಯವೆ. ಹೈದರಾಬಾದ್‌ನ ತೋಟಕುರಿ ರಘುಪತಿ ಅನ್ನೋ ವ್ಯಕ್ತಿ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ತಾನು ಹೇಳಿದ ರೀತಿ ಬಿರಿಯಾನಿ ಇರಲಿಲ್ಲ. ರೊಚ್ಚಿಗೆದ್ದ ರಘುಪತಿ ನೇರವಾಗಿ ಪುರಸಭೆ ಮತ್ತು ನಗರಾಡಳಿತ ಸಚಿವ ಕೆಟಿ ರಾಮ ರಾವ್‌ಗೆ ದೂರು ನೀಡಿದ್ದಾರೆ.

ರಘುಪತಿ ಜೋಮ್ಯಾಟೋ ಮೂಲಕ ಚಿಕನ್ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಆರ್ಡರ್ ವೇಳೆ ಹೆಚ್ಚುವರಿ ಲೆಗ್‌ಪೀಸ್ ಹಾಗೂ ಮಸಾಲಾಗೆ ಆರ್ಡರ್ ಮಾಡಿದ್ದಾರೆ. ಆದರೆ ಜೋಮ್ಯಾಟೋ ನೀಡಿದ ಬಿರಿಯಾನಿಯಲ್ಲಿ ಹೆಚ್ಚುವರಿ ಲೆಗ್‍‌ಪೀಸ್, ಮಸಾಲ ಇರಲಿಲ್ಲ. ಕೋಪಗೊಂಡ ರಘುುಪತಿ ಟ್ವಿಟರ್ ಮೂಲಕ ದೂರು ನೀಡಿದ್ದಾರೆ. ದೂರಿನಲ್ಲಿ ಜೋಮ್ಯಾಟೋ ಜೊತೆಗೆ ಕೆಟಿ ರಾಮ ರಾವ್‌ ಅವರಿಗೂ ದೂರು ನೀಡಿದ್ದಾನೆ.

Hyderabad man complains to minister about lack of leg piece in biryani ckm

ರುಘಪತಿ ತನ್ನ ದೂರಿನಲ್ಲಿ ನಾನು ಚಿಕನ್ ಬಿರಿಯಾನಿ ಜೊತೆಗೆ ಹೆಚ್ಚುವರಿ ಲೆಗ್ ಪೀಸ್ ಹಾಗೂ ಮಸಾಲ ಆರ್ಡರ್ ಮಾಡಿದ್ದೇನೆ. ಆದರೆ ಯಾವುದು ಸಿಕ್ಕಿಲ್ಲ. ಇದು ಗ್ರಾಹಕರಿಗೆ ನೀವು ನೀಡುತ್ತಿರುವ ಸೇವೆಯೇ? ಎಂದು ಜೋಮ್ಯಾಟೋ ಹಾಗೂ ಕೆಟಿ ರಾಮ ರಾವ್‌ಗೆ ಪ್ರಶ್ನಿಸಿದ್ದಾನೆ.

ವಿಶ್ವದ ದುಬಾರಿ ಬಿರಿಯಾನಿ... ಕೊತ್ತಂಬರಿ ಸೊಪ್ಪಲ್ಲ, ಚಿನ್ನದಿಂದ ಅಲಂಕರಿಸುತ್ತಾರೆ.

ಇದಕ್ಕೆ ಉತ್ತರಿಸಿರುವ ಕೆಟಿ ರಾಮ ರಾವ್, ನಿಮ್ಮ ದೂರಿನಲ್ಲಿ ನನ್ನ ಏಕೆ ಟ್ಯಾಗ್ ಮಾಡಿದ್ದೀರೀ? ನನ್ನಿಂದ ಏನನ್ನು ಬಯಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

 

For all those who finds the quoted tweet unavailable now and curious to see it. 👇 pic.twitter.com/SZ10RuSun8

— Jagan Patimeedi (@JAGANTRS) May 28, 2021

ಇನ್ನು ಹಲವರು ಹೆದರಾಬಾದ್ ಬಿರಿಯಾನಿಯಲ್ಲಿ ಲೆಗ್ ಪೀಸ್ ಇರಲೇಬೇಕು ಎಂದು ಆಗ್ರಹಿಸಿದ್ದಾರೆ. ತೆಲಂಗಾಣ ಸರ್ಕಾರ ಬಿರಿಯಾನಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow Us:
Download App:
  • android
  • ios