Asianet Suvarna News Asianet Suvarna News

ಮದ್ವೆಯಾಗಿದ್ರೂ ಇಬ್ಬರ ಜೊತೆ ಸರಸ ಸಲ್ಲಾಪ; ಅಡ್ಡಿಯಾದ ಗಂಡನಿಗೆ ಚಟ್ಟ ಕಟ್ಟಿದ್ಳು!

ವಿವಾಹಿತ ಮಹಿಳೆಯೊಬ್ಬಳು ಇಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ತಮ್ಮ ಮೂವರು ನಡುವೆ ಬಂದ ಗಂಡನನ್ನ ಪ್ರಿಯಕರ ಜೊತೆ ಸೇರಿಸಿ ಕೊಲೆ ಮಾಡಿದ್ದಾಳೆ.

married woman relationship with two man and they killed her husband mrq
Author
First Published Jul 1, 2024, 2:38 PM IST

ಜೈಪುರ: ರಾಜಸ್ಥಾನದ ಭೀವಂಡಿ ಪೊಲೀಸರು ಕೊಲೆ ಪ್ರಕರಣ ಬೇಧಿಸಿದ್ದಾರೆ. ಪೊಲೀಸರ ತನಿಖೆಯಲ್ಲಿ (Police Investigation) ಮೃತ ವ್ಯಕ್ತಿಯ ಪತ್ನಿಯ ಜೊತೆಯಲ್ಲಿ ಅಕ್ರಮ ಸಂಬಂಧ (Illicit Relationship) ಹೊಂದಿದವರೇ ಆರೋಪಿಗಳು (Accused) ಎಂದು ತಿಳಿದು ಬಂದಿದೆ. ಇದೀಗ ಕೊಲೆ ಪ್ರಕರಣದಲ್ಲಿ ಪೊಲೀಸರು ಇಬ್ಬರು ಪ್ರೇಮಿಗಳನ್ನು ಬಂಧಿಸಿ ಕತ್ತಲಕೋಣೆಗೆ ತಳ್ಳಿದ್ದಾರೆ. ಮಹಿಳೆ ಜೊತೆಗಿನ ಸಂಬಂಧ ಪತಿ ಅಡ್ಡಿ ಆಗ್ತಾನೆ ಎಂಬ ಕಾರಣಕ್ಕೆ ಕೊಲೆ ಮಾಡಿದ್ದರು. ಮಹಿಳೆಯ ಪತಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದನು. ಇಂದ್ರಪಾಲ್ ಎಂಬವರೇ ಪತ್ನಿಯ ಪ್ರೇಮಿಗಳಿಂದ ಕೊಲೆಯಾದ ವ್ಯಕ್ತಿ. ಶಶಿ, ಕುಲದೀಪ್ ಹಾಗೂ ಬಾಲಕಾಂತ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು ಶವ 

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಜೂನ್ 28ರಂದು  ರಾಮಬಾಸಾ ಜೋಪುಡಿ ಬಳಿಯ ನಿರ್ಜನ ಪ್ರದೇಶದಲ್ಲಿ ಸೆಕ್ಯೂರಿಟಿ ಗಾರ್ಡ್ ಶವ ಪತ್ತೆಯಾಗಿತ್ತು. ಅಪರಿಚಿತ ಶವದ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರಿಗೆ ಹೆಣ ಸಿಕ್ಕ ಜಾಗದ ಅನತಿ ದೂರದಲ್ಲಿ ಸ್ಕೂಟಿಯ ನಂಬರ್ ಪ್ಲೇಟ್ ಸಿಕ್ಕಿತ್ತು. ಈ ನಂಬರ್ ಪ್ಲೇಟ್ ಪೊಲೀಸರಿಗೆ ಆರೋಪಿಗಳ ಸುಳಿವು ನೀಡಿತ್ತು. ಮತ್ತ ಸ್ವಲ್ಪ ದೂರ ಹೋದಂತೆ ರಕ್ತದ ಕಲೆಗಳ ಬಟ್ಟೆಗಳಿರೋ ಬ್ಯಾಗ್ ಸಿಕ್ಕಿತ್ತು. 

ನಂಬರ್ ಪ್ಲೇಟ್ ಜಾಡು ಹಿಡಿದ ಹೊರಟ ಪೊಲೀಸರಿಗೆ ಸ್ಕೂಟಿ ಕೊಲೆಯಾದ ಇಂದ್ರಪಾಲ್ ಮಗ ಕೃಷ್ಣ ಕುಮಾರ್ ಎಂಬಾತನದ್ದು ಎಂದು ತಿಳಿದು ಬಂದಿದೆ. ಇಂದ್ರಪಾಲ್ ಕಾಲ್ ಡೀಟೈಲ್ಸ್ ಚೆಕ್ ಮಾಡಿದಾಗ ಕೊನೆಯ ಬಾರಿ ಕುಲದೀಪ್ ಎಂಬಾತನೊಂದಿಗೆ ಮಾತನಾಡಿರೋದು ಗೊತ್ತಾಗಿದೆ. ಕುಲದೀಪ್ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾದ ಪೊಲೀಸರಿಗೆ ಆತ ತನ್ನ ಸ್ವಂತ ಫರೀದಾಬಾದ್‌ಗೆ ಹೋಗಿರುವ ವಿಷಯ ಗೊತ್ತಾಗಿದೆ. ಕುಲದೀಪ್ ಮತ್ತು ಆತನ ಜೊತೆಯಲ್ಲಿರುತ್ತಿದ್ದ ಬಾಲಕಾಂತ್ ಸಹ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿರೋದು ಅನುಮಾನ ಮೂಡಿಸಿತ್ತು. 

ಜೈಲಿನಲ್ಲಿ ಕೈದಿಗಳ ಜೊತೆ ಮಹಿಳಾ ಪೊಲೀಸ್ ಅಧಿಕಾರಿಯ ಸೆಕ್ಸ್ ವಿಡಿಯೋ ವೈರಲ್

ವಿಚಾರಣೆ ವೇಳೆ ಬಾಯಿಬಿಟ್ಟ ಆರೋಪಿಗಳು

ಇತ್ತ ಕೊಲೆಯಾದ ಇಂದ್ರಪಾಲ್‌ ಪತ್ನಿ ಶಶಿ ಸಹ ನಾಪತ್ತೆಯಾಗಿರೋ ವಿಷಯ ಪೊಲೀಸರ ಗಮನಕ್ಕೆ ಬಂದಿದೆ. ಕೊಲೆಗೂ ಮುನ್ನ ಶಶಿ, ನಂತರ ಕುಲದೀಪ್ ಹಾಗೂ ಬಾಲಕಾಂತ್ ಮಿಸ್ ಆಗಿರೋದು ದೃಢಪಡುತ್ತಿದ್ದಂತೆ ಪೊಲೀಸರು ಮೂವರನ್ನು ಬಂಧಿಸಿ ಕರೆತಂದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕೊಲೆಯ ವಿಷಯ ಬಾಯಿಬಿಟ್ಟಿದ್ದಾರೆ.

ಇಬ್ಬರ ಜೊತೆಯಲ್ಲಿಯೂ ಸಂಬಂಧ 

ಕುಲದೀಪ್ ಮತ್ತು ಬಾಲಕಾಂತ್ ಜೊತೆಯಲ್ಲಿ ಇಂದ್ರಪಾಲ್‌ನ ಪತ್ನಿ ಶಶಿ ಅಕ್ರಮ ಸಂಬಂಧ ಹೊಂದಿದ್ದಳು. ಆದ್ರೆ ಈ ಮೂವರ ಸಂಬಂಧಕ್ಕೆ ಇಂದ್ರಪಾಲ್ ಅಡ್ಡಿಯಾಗಿದ್ದನು. ಹಾಗಾಗಿ ಇಂದ್ರಪಾಲ್‌ನನ್ನು ಕೊಲೆ ಮಾಡಲು ಕುಲದೀಪ್ ಪ್ಲಾನ್ ಮಾಡಿಕೊಂಡಿದ್ದನು. ಪ್ಲಾನ್ ಪ್ರಕಾರ ಕೊಲೆಗೂ ಮುನ್ನ ಶಶಿ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಶಶಿ ಕಂಗಾಲಾಗಿದ್ದನು. ಇದೇ ಅವಕಾಶವನ್ನು ಬಳಸಿಕೊಂಡ ಕುಲದೀಪ್ ಮತ್ತು ಬಾಲಕಾಂತ್ ನಮಗೆ ಒಬ್ಬ ಸ್ವಾಮೀಜಿ ಗೊತ್ತು. ಮನೆ ಬಿಟ್ಟು ಹೋದವರು ಎಲ್ಲಿದ್ದಾರೆ ಎಂಬುದನ್ನು ಹೇಳುತ್ತಾರೆ ಎಂದು ನಂಬಿಸಿ ಇಂದ್ರಪಾಲ್‌ನನ್ನು ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ಹೋಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.

ಪಾಕಿಸ್ತಾನಿ ತಾಯಿ-ಮಗಳಿಗೆ ಹೈದರಾಬಾದ್‌ನಲ್ಲಿ ತಾಲಿಬಾನ್‌ ಮಾದರಿಯ ಶಿಕ್ಷೆ; ನರಕ ತೋರಿಸಿದ ಕುಟುಂಬಸ್ಥರು

Latest Videos
Follow Us:
Download App:
  • android
  • ios