Asianet Suvarna News Asianet Suvarna News

Bengaluru: ರೌಡಿ ಮೇಲೆ ಗುಂಡಿನ ದಾಳಿ: ಮೂವರ ಬಂಧನ

ಆಂಧ್ರಪ್ರದೇಶದ ಕುಖ್ಯಾತ ರೌಡಿ ಶಿವಶಂಕರ್‌ ರೆಡ್ಡಿ ಹಾಗೂ ಆತನ ಕಾರು ಚಾಲಕನ ಮೇಲೆ ಕಳೆದ ಗುರುವಾರ ನಡೆದ ಗುಂಡಿನ ದಾಳಿ ಪ್ರಕರಣ ಸಂಬಂಧ ಮೂವರು ದುಷ್ಕರ್ಮಿಗಳನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

3 held in andhra pradesh in builder shooting case in bengaluru gvd
Author
First Published Dec 11, 2022, 1:43 PM IST

ಬೆಂಗಳೂರು (ಡಿ.11): ಆಂಧ್ರಪ್ರದೇಶದ ಕುಖ್ಯಾತ ರೌಡಿ ಶಿವಶಂಕರ್‌ ರೆಡ್ಡಿ ಹಾಗೂ ಆತನ ಕಾರು ಚಾಲಕನ ಮೇಲೆ ಕಳೆದ ಗುರುವಾರ ನಡೆದ ಗುಂಡಿನ ದಾಳಿ ಪ್ರಕರಣ ಸಂಬಂಧ ಮೂವರು ದುಷ್ಕರ್ಮಿಗಳನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮನೋಜ್‌ ಕುಮಾರ್‌, ಜಯಪ್ರಕಾಶ್‌ ಹಾಗೂ ಪ್ರವೀಣ್‌ ಬಂಧಿತರಾಗಿದ್ದು, ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. 

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೆ.ಆರ್‌.ಪುರ ಸಮೀಪದ ಕುರು ಸೋನ್ನೇನಹಳ್ಳಿಯಲ್ಲಿ ಆಂಧ್ರಪ್ರದೇಶದ ಮದನಪಲ್ಲಿಯ ರೌಡಿ ಶಿವಶಂಕರ್‌ ರೆಡ್ಡಿ, ಆತನ ವ್ಯವಸ್ಥಾಪಕ ಅಶೋಕ್‌ ಮೇಲೆ ದುಷ್ಕರ್ಮಿಗಳು ಗುರುವಾರ ಮಧ್ಯಾಹ್ನ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಪ್ರಕರಣದ ಸಂಬಂಧ ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ಮಾರ್ಗದರ್ಶನದಲ್ಲಿ ವಿಶೇಷ ತಂಡಗಳು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.

Shootout At Bengaluru: ಆಂಧ್ರದ ರೌಡಿ ಮೇಲೆ ನಗರದಲ್ಲಿ ಶೂಟೌಟ್‌

ಅಪ್ಪನ ಸಾವಿನ ಪ್ರತೀಕಾರಕ್ಕೆ ಹೊಂಚು: ಹಲವು ವರ್ಷಗಳಿಂದ ಶಿವಶಂಕರ ರೆಡ್ಡಿ ಹಾಗೂ ಆತನ ನೆರೆಮನೆಯ ಭಯ್ಯಾರೆಡ್ಡಿ ಕುಟುಂಬಗಳು ನಡುವೆ ಮನಸ್ತಾಪವಿದ್ದು, 2011ರಲ್ಲಿ ತನ್ನ ತಂದೆ ಜತೆ ಭಯ್ಯಾರೆಡ್ಡಿಯನ್ನು ಶಿವಶಂಕರ ರೆಡ್ಡಿ ಕೊಲೆ ಮಾಡಿದ್ದ. ಇದಕ್ಕೆ ಪ್ರತೀಕಾರವಾಗಿ ರೆಡ್ಡಿ ತಂದೆ ಜಯಚಂದ್ರ ರೆಡ್ಡಿಯನ್ನು ಎದುರಾಳಿಗಳು ಕೊಲೆ ಮಾಡಿದ್ದರು.

ತನ್ನ ಕಣ್ಮುಂದೆ ತಂದೆಯನ್ನು ಕೊಂದವರ ಪೈಕಿ ಒಬ್ಬಾತನನ್ನು ಅಟ್ಟಾಡಿಸಿಕೊಂಡು ಹೋಗಿ ಶಿವಶಂಕರ ರೆಡ್ಡಿ ಕೊಚ್ಚಿ ಕೊಂದು ಹಾಕಿದ್ದ. ಈ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವಿನ ದ್ವೇಷ ತಾರಕ್ಕೇರಿತು. ಇತ್ತೀಚಿಗೆ ತನ್ನ ತಂದೆ ಹತ್ಯೆಗೆ ಪ್ರತೀಕಾರ ತೀರಿಸಲು ರೆಡ್ಡಿ ಹೊಂಚು ಹಾಕಿರುವ ಬಗ್ಗೆ ಮಾಹಿತಿ ಪಡೆದ ಭಯ್ಯಾರೆಡ್ಡಿ ಕುಟುಂಬದವರು, ಅದಕ್ಕೆ ಮೊದಲೇ ಶಿವಶಂಕರರೆಡ್ಡಿ ಮೇಲೆ ಗುಂಡಿನ ದಾಳಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕುರಿ, ಹಸು ಕಳ್ಳರ ಬಂಧನ: ತಾಲೂಕು ಸೇರಿದಂತೆ ವಿವಿಧೆಡೆ ಕುರಿ ಮತ್ತು ಹಸುಗಳನ್ನು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರ್‌ ಜಿಲ್ಲಾ ಕಳ್ಳರನ್ನು ಬಂಧಿಸಲಾಗಿದೆ ಎಂದು ಚಿಂತಾಮಣಿ ಉಪವಿಭಾಗದ ಎಎಸ್‌ಪಿ ಕುಶಾಲ್‌ ಚೌಕ್ಸೆ ತಿಳಿಸಿದರು. ನಗರದ ವೃತ್ತ ನಿರೀಕ್ಷರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್‌ 18ರಂದು ತಾಲ್ಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಾಂಡ್ಲಚಿಂತೆ ಗ್ರಾಮದ ವೆಂಕಟರಾಯಪ್ಪ ಅವರಿಗೆ ಸೇರಿದ ಕುರಿ ಕಳ್ಳತನದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ, ಶಿಡ್ಲಘಟ್ಟವೃತ್ತದ ಸಿಪಿಐ ನಂದಕುಮಾರ್‌ ರವರ ನೇತೃತ್ವದಲ್ಲಿ ತಂಡ ರಚಿಸಿ ನಡೆಸಿದ ಕಾರ್ಯಾಚರಣೆ ನಡೆಸಿದ್ದಾಗಿ ತಿಳಿಸಿದರು.

ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ಮೂವರ ಸಾವು, ಓರ್ವ ಗಂಭೀರ ಗಾಯ

ಪೊಲೀಸ್‌ ತಂಡವು ಹೊಸಕೋಟೆ ತಾಲ್ಲೂಕಿನ ಬೈಲನರಸಾಪುರ ಗ್ರಾಮದ ಪೈರೋಜ್‌, ತಮಿಳುನಾಡಿನ ಕಾಮರಾಜನಗರದ ನಿವಾಸಿ ಸತೀಶ್‌ ಎಂಬುವನನ್ನು ಬಂಧಿಸಿ, 4,37,000 ನಗದು ಮತ್ತು 1,50,000 ಮೌಲ್ಯದ 17 ಕುರಿಗಳನ್ನು ಹಾಗೂ ಕುರಿ ಮತ್ತು ಹಸು ಸಾಗಣೆ ಮಾಡಲು ಬಳಸುತ್ತಿದ್ದ 2 ಸ್ಯಾಂಟ್ರೋ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. ಕಳ್ಳರನ್ನು ಬಂಧಿಸಿದ ಪೋಲಿಸ್‌ ತಂಡಕ್ಕೆ 20,000 ರು.ಗಳನ್ನು ಬಹುಮಾನವಾಗಿ ನೀಡಿ, ತಂಡ ಹಾಗೂ ಇತರೆ ಸಿಬ್ಬಂದಿಯನ್ನು ಸ್ಲಾಘಿಸಿದರು.ಈ ಸಂದರ್ಭದಲ್ಲಿ ಶಿಡ್ಲಘಟ್ಟವೃತ್ತದ ಸಿಪಿಐ ನಂದಕುಮಾರ್‌, ದಿಬ್ಬೂರಹಳ್ಳಿ ಪಿ.ಎಸ್‌.ಐ ಕೃಷ್ಣಪ್ಪ, ಪ್ರೋಪೆಷನರಿ ಪಿ.ಎಸ್‌.ಐ ಹರೀಶ್‌ ಸೇರಿದಂತೆ ಇತರೆ ಸಿಬ್ಬಂದಿ ಹಾಜರಿದ್ದರು.

Follow Us:
Download App:
  • android
  • ios