ಪತ್ನಿ ಮೇಲೆ ಅತ್ಯಾಚಾರ, ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದ ಗಂಡನಿಗೆ 7 ವರ್ಷ ಜೈಲು ಶಿಕ್ಷೆ

ಐಪಿಸಿ ಸೆಕ್ಷನ್ 375ರ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ಅಪ್ರಾಪ್ತೆಯ ಒಪ್ಪಿಗೆ ಪಡೆದು ಅಥವಾ ಇಲ್ಲದೇ ದೈಹಿಕ ಸಂಪರ್ಕ ನಡೆಸಿದ್ರೆ ಅದು ಅತ್ಯಾಚಾರ ಎಂದು ಪರಿಗಣನೆ ಆಗುತ್ತೆ ಎಂದು ವಕೀಲ ಫಿರೋಜ್ ಹೇಳುತ್ತಾರೆ.

husband get 7 year jail for raping minor wife mrq

ಮೀರತ್: 30 ವರ್ಷದ ವ್ಯಕ್ತಿಗೆ ಏಳು ವರ್ಷ ಜೈಲು ಶಿಕ್ಷೆ ನೀಡಿ ನ್ಯಾಯಾಲಯ ತೀರ್ಪು (Court Judgement) ನೀಡಿದೆ. 2015ರಲ್ಲಿ ತನ್ನ 13 ವರ್ಷದ ಅಪ್ರಾಪ್ತ ಪತ್ನಿ (Minor Wife) ಮೇಲೆ ಅತ್ಯಾಚಾರ ಎಸಗಿದ್ದನು. 13 ವರ್ಷದ ಬಾಲಕಿ ಮನೆಯಿಂದ ಓಡಿ (Girl Elope) ಬಂದು ಈತನನ್ನು ಮದುವೆಯಾಗಿದ್ದಳು. ಮದುವೆ ಬಳಿಕ ಅಪ್ರಾಪ್ತ ಪತ್ನಿ ಜೊತೆ ದೈಹಿಕ ಸಂಪರ್ಕ (Physical Relationship) ಹೊಂದಿದ್ದನು. ಆದರೆ ಬಾಲಕಿ ಪೋಷಕರ ಮನೆಗೆ ಹಿಂದಿರುಗಿದ್ದಳು. ಇದಾದ ಬಳಿಕ ಎರಡು ತಿಂಗಳ ನಂತರ ಬಾಲಕಿ ಮತ್ತೆ ಗಂಡನ ಮನೆ ಸೇರಿಕೊಂಡಿದ್ದಳು. ಸದ್ಯ ದಂಪತಿಗೆ ಇಬ್ಬರು ಮಕ್ಕಳಿದ್ದು, ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಬರೇಲಿ ಕೋರ್ಟ್ (Bareilly trial court order) ಬುಧವಾರ ಏಳು ವರ್ಷ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ. ದಂಪತಿ ಬರೇಲಿ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ದಂಪತಿ ನಿರ್ಧರಿಸಿದ್ದಾರೆ.

ಬಾಲಕಿಯ ತಂದೆಯಿಂದ ದೂರು ದಾಖಲು

2015ರಲ್ಲಿ ಓಡಿ ಹೋಗಿದ್ದ ಬಾಲಕಿ ಎರಡು ತಿಂಗಳ ಬಳಿಕ ತವರು ಸೇರಿದ್ದಳು. ಈ ವೇಳೆ ಬಾಲಕಿಯ ತಂದೆ ಬರೇಲಿ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು (Kidnap) ದಾಖಲಿಸಿದ್ದರು. ಐಪಿಸಿ ಸೆಕ್ಷನ್ 363 (ಅಪಹರಣ) , 366 (ಅಪಹರಣ, ಅಪಹರಣ ಅಥವಾ ಮಹಿಳೆಯನ್ನು ಆಕೆಯ ಮದುವೆಗೆ ಒತ್ತಾಯಿಸಲು ಪ್ರೇರೇಪಿಸುವುದು ಇತ್ಯಾದಿ) ಅಡಿಯಲ್ಲಿ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದರು. ಪ್ರಕರಣ ಸಂಬಂಧ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಬಾಲಕಿ ಜೊತೆ ಸಮಾಲೋಚನ ನಡೆಸಿದ್ದ ವೈದ್ಯರು, ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರೋದರ ಬಗ್ಗೆ ಖಚಿತಪಡಿಸಿರಲಿಲ್ಲ. 

ತನಿಖೆ ವೇಳೆ ಪೊಲೀಸರು ಸಿಆರ್‌ಪಿಸಿ ಸೆಕ್ಸನ್ 161ರ ಅಡಿಯಲ್ಲಿ ನ್ಯಾಯಾಧೀಶರ ಮುಂದೆ ಅಪ್ರಾಪ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಬಾಲಕಿಯ ಈ ಹೇಳಿಕೆಯನ್ನು ಆಧರಿಸಿ ಪೊಲೀಸರು ಪೋಕ್ಸೋ ಆಕ್ಟ್, ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. 

ಬಾಲಕಿ ಮೇಲೆ ಅತ್ಯಾಚಾರ: ಕಾಮುಕನಿಗೆ 10 ವರ್ಷ ಜೈಲು

ಬಾಲಕಿಯ ಸಿಆರ್‌ಪಿಸಿ 161 ಹೇಳಿಕೆ

ನನ್ನ ಸ್ವಯಿಚ್ಛೆ ಮೇರೆಗೆ  ಮನೆಯಿಂದ ಓಡಿ ಹೋಗಿ ಆತನನ್ನು ಮದುವೆಯಾಗಿದ್ದೆ. ಪ್ರಿಯಕರ ನನ್ನ ಮೇಲೆ ಯಾವುದೇ ಒತ್ತಡ ಹಾಕಿರಲಿಲ್ಲ. ನಾನು ಆತನೊಂದಿಗೆ ಜೀವನ ನಡೆಸಲು ಇಷ್ಟಪಡುತ್ತೇನೆ. ಮದುವೆಯಾಗಿ ಆತನೊಂದಿಗೆ ನಾನು ಸಂತೋಷವಾಗಿ ಬಾಳುತ್ತೇನೆ ಎಂದು ಬಾಲಕಿ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 161 ಹೇಳಿಕೆ ದಾಖಲಿಸಿದ್ದಳು. ಸಂತ್ರಸ್ತೆ ಅಪ್ರಾಪ್ತೆಯಾಗಿರುವ ಕಾರಣ ಆಕೆಯ ಹೇಳಿಕೆ ಸ್ವೀಕಾರರ್ಹವಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತ್ತು. 

ಈ ಪ್ರಕರಣದ ಬಗ್ಗೆ ವಕೀಲರು ಹೇಳಿದ್ದೇನು?

ಪ್ರಕರಣದ ವಿಚಾರಣೆಯಲ್ಲಿ ಸಂತ್ರಸ್ತೆ, ಮಹಿಳಾ ಪೊಲೀಸ್ ಪೇದೆಯೊಬ್ಬರು ಬಲವಂತವಾಗಿ ಖಾಲಿ ಕಾಗದದ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಳು. ವಿಚಾರಣೆಯಲ್ಲಿಯೂ ನನ್ನನ್ನು ಅಪಹರಣ ಮಾಡಿಲ್ಲ, ನಾನಾಗಿಯೇ ಹೋಗಿದ್ದೆ. ಹಾಗೆ ನನ್ನ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ ಎಂದು ಹೇಳಿದ್ದಳು ಅಂತ ವಕೀಲರಾದ ಮೊಹಮ್ಮದ್ ಫಿರೋಜ್ ಹೇಳಿದ್ದಾರೆ. ಐಪಿಸಿ ಸೆಕ್ಷನ್ 375ರ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ಅಪ್ರಾಪ್ತೆಯ ಒಪ್ಪಿಗೆ ಪಡೆದು ಅಥವಾ ಇಲ್ಲದೇ ದೈಹಿಕ ಸಂಪರ್ಕ ನಡೆಸಿದ್ರೆ ಅದು ಅತ್ಯಾಚಾರ ಎಂದು ಪರಿಗಣನೆ ಆಗುತ್ತೆ ಎಂದು ಫಿರೋಜ್ ಹೇಳುತ್ತಾರೆ.

ನೈಜೀರಿಯಾದಲ್ಲಿ ರೇಪಿಸ್ಟ್‌ಗಳ  ವೃಷಣಕ್ಕೆ ಕತ್ತರಿ: ಮತ್ತೊಮ್ಮೆ ಸೆಕ್ಸ್‌ಗೆ ಛಾನ್ಸೇ ಇಲ್ಲ

Latest Videos
Follow Us:
Download App:
  • android
  • ios