Asianet Suvarna News Asianet Suvarna News

ರಾಖಿ ಕಟ್ಟಲು ತವರಿಗೆ ಹೊರಟ ಹೆಂಡತಿಯ ಮೂಗು ಕತ್ತರಿಸಿದ ಪಾಪಿ ಗಂಡ!

ರಕ್ಷಾ ಬಂಧನ ಆಚರಣೆ ಹಿನ್ನಲೆಯಲ್ಲಿ ತವರಿನಲ್ಲಿರುವ ಸಹೋದರನಿಗೆ ರಾಖಿ ಕಟ್ಟಲು ಹೊರಟ ಹೆಂಡತಿಯ ಮೂಗನ್ನೇ ಗಂಡ ಕತ್ತರಿಸಿದ್ದಾನೆ. ಆಸ್ಪತ್ರೆ ದಾಖಲಿಸಿರುವ ಪತ್ನಿ ಇದೀಗ ಗಂಡ ಜೊತೆ ಬಾಳುವುದಿಲ್ಲ ಎಂದಿದ್ದಾಳೆ.

Husband chops wife nose after she plan to visit maternal home and tie rakhi to brother uttar pradesh ckm
Author
First Published Aug 19, 2024, 8:37 PM IST | Last Updated Aug 19, 2024, 8:37 PM IST

ಲಖನೌ(ಆ.19) ರಕ್ಷಾ ಬಂಧನ ದಿನ ರಾಖಿ ಕಟ್ಟಿ ಹಬ್ಬ ಆಚರಿಸಲಾಗುತ್ತದೆ. ಅದೆಷ್ಟೆ ದೂರದಲ್ಲಿದ್ದರೂ ಸಹೋದರರಿಗೆ , ಸಹೋದರಿಯರು ರಾಖಿ ಕಟ್ಟಿ ಹಬ್ಬ ಆಚರಿಸುತ್ತಾರೆ. ಹೀಗೆ ತವರು ಮನೆಗೆ ತೆರಳಿ ತನ್ನ ಸಹೋದರನಿಗೆ ರಾಖಿ ಕಟ್ಟಲು ಹೊರಟ ಪತ್ನಿಯ ಮೂಗನ್ನೇ ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ. ಸಾವು ಬದುಕಿನ ನಡುವೆ ಬಿದ್ದಿದ್ದ ಪತ್ನಿಯನ್ನು ಪತಿಯ ಸಹೋದರ ಆಸ್ಪತ್ರೆ ದಾಖಲಿಸಿದ್ದಾನೆ. ಇದರ ಪರಿಣಾಮ ಆಕೆಯ ಪ್ರಾಣ ಉಳಿದಿದೆ. 

ಬನಿಯಾನಿ ಪೂರ್ವ ನಿವಾಸಿ ರಾಹುಲ್ ಹಾಗೂ ಪತ್ನಿ ಅನಿತಾ ನಡುವೆ ರಕ್ಷಾ ಬಂಧನ ಆಚರಣೆ ಕುರಿತು ಜಗಳ ಶುರುವಾಗಿದೆ. ಪಕ್ಕದ ಊರಿನಲ್ಲಿರುವ ತವರಿಗೆ ತೆರಳಿ ಸಹೋದರನಿಗೆ ರಾಖಿ ಕಟ್ಟಬೇಕು. ಹೀಗಾಗಿ ತವರಿಗೆ ಹೋಗಿ ಇಂದು ಸಂಜೆ ಮರಳುತ್ತೇನೆ ಎಂದು ಅನಿತಾ ಪತಿಯ ಬಳಿ ಅನುಮತಿ ಕೇಳಿದ್ದಾಳೆ. ಇದು ಪತಿಯ ಪಿತ್ತ ನೆತ್ತಿಗೇರಿಸಿದೆ. ಎಲ್ಲವೂ ನೀನೆ ನಿರ್ಧಾರ ಮಾಡಿ ಕೊನೆಯ ಕ್ಷಣದಲ್ಲಿ ನನ್ನ ಬಳಿ ಅನುಮತಿ ಕೇಳುತ್ತಿದ್ದಿಯಾ ಎಂದು ಜಗಳ ಆರಂಭಿಸಿದ್ದಾನೆ.

ಮಗನ ಮೇಲೆ ಮಚ್ಚಿನಿಂದ ದಾಳಿ ಮಾಡಿದ ರೌಡಿಗಳನ್ನು ಕಲ್ಲಿನಿಂದ ಓಡಿಸಿದ ತಾಯಿ, ವಿಡಿಯೋ ಸೆರೆ!

ಪತಿಯ ಧ್ವನಿ ಹೆಚ್ಚಾಗುತ್ತಿದ್ದಂತೆ ಪತ್ನಿ ಮೌನವಾಗಿದ್ದಾಳೆ. ರಾಖಿ ಹಬ್ಬ ಆಚರಣೆ ಸಾಧ್ಯವಿಲ್ಲ ಎಂದುಕೊಂಡು ಸುಮ್ಮನಾಗಿದ್ದಾಳೆ. ಆದರೆ ಪತಿಯ ಆಕ್ರೋಶ ಇಷ್ಟಕ್ಕೆ ನಿಂತಿಲ್ಲ. ಮಚ್ಚು ತೆಗೆದು ಒಂದೇ ಸಮನೆ ಬೀಸಿದ್ದಾನೆ. ಈ ರಭಸಕ್ಕೆ ಪತ್ನಿಯ ಮೂಗು ಕತ್ತರಿಸಿ ಹೋಗಿದೆ. ದಾಳಿ ಬೆನ್ನಲ್ಲೇ ಪತ್ನಿ ಕುಸಿದು ಬಿದ್ದಿದ್ದಾಳೆ. ಚೀರಾಡುತ್ತಾ ಸಹಾಯಕ್ಕಿ ಕೂಗಾಡಿದ್ದಾಳೆ. ಇತ್ತ ಹಲ್ಲೆ ತೀವ್ರಗೊಂಡಿದೆ ಅರಿತ ಪತಿ ಪರಾರಿಯಾಗಿದ್ದಾನೆ.

 

 

ನೆಲದ ಮೇಲೆ ಬಿದ್ದಿದ್ದ ಅನಿತಾಳ ಚೀರಾಟ ಗಮನಿಸಿದ ಪತಿಯ ಸಹೋದರ, ತಕ್ಷಣವೇ ಸ್ಥಳೀಯ ಹರ್ದೋಯಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾನೆ. ಈ ವೇಳೆ ಪರಿಸ್ಥಿತಿ ಗಂಭೀರತ ಅರಿತ ವೈದ್ಯರು, ಆ್ಯಂಬುಲೆನ್ಸ್ ಮೂಲಕ ಲಖೌನ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಲಖನೌ ಟ್ರೌಮಾ ಸೆಂಟರ್‌ಗೆ 25 ವರ್ಷಗ ಅನಿತಾಳನ್ನು ದಾಖಲಿಸಲಾಗಿದೆ. ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ.ಇದೀಗ ಅನಿತಾ ಚೇತರಿಸಿಕೊಂಡಿದ್ದಾಳೆ.

ತನ್ನಿಬ್ಬರು ಸೋದರರಿಗೆ ಕೊನೆಯ ಬಾರಿ ರಾಖಿ ಕಟ್ಟಿ ಪ್ರಾಣ ಬಿಟ್ಟ ಸೋದರಿ

ಘಟನೆ ಮಾಹಿತಿ ಪಡೆದ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ. ಘಟನೆ ಸಂಬಂಧ ಅನಿತಾ ಮಾಹಿತಿ ನೀಡಿದ್ದಾಳೆ. ಪತಿ ಕ್ರೌರ್ಯ ಇಷ್ಟು ದಿನ ಸಹಿಸಿಕೊಂಡು ಬದುಕಿದ್ದೆ. ಆದರೆ ಇನ್ನು ಪತಿಯ ಜೊತೆ ಬಾಳುವುದಿಲ್ಲ. ಆತನ ಕ್ರೂರ ನಡೆಯಿಂದ ಬೇಸತ್ತಿದ್ದೇನೆ. ಹಲವು ಬಾರಿ ನೊಂದಿದ್ದೇನೆ. ಮಾನಸಿಕ ಹಾಗೂ ದೈಹಿಕ ಕಿರುಕುಳ ಅನುಭವಿಸಿದ್ದೇನೆ ಎಂದು ಅನಿತಾ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios