Asianet Suvarna News Asianet Suvarna News

ಕೊರೋನಾ ಮಧ್ಯೆ ಅಬ್ಬರದ ಮೆರವಣಿಗೆ: ಜನ ಎಚ್ಚೆತ್ತುಕೊಳ್ಳೋದು ಇನ್ಯಾವಾಗ ?

ಕೊರೋನಾ ಎರಡನೇ ಅಲೆಯ ಅಬ್ಬರ | ವಿಶ್ವದ ಒಟ್ಟು ಕೊರೋನಾ ಪ್ರಕರಣದಲ್ಲಿ 46% ಪ್ರಕರಣ ಭಾರತದಲ್ಲಿ | ಇದರ ಮಧ್ಯೆ ಅಬ್ಬರದ ಮೆರವಣಿಗೆ | ಜನ ಎಚ್ಚೆತ್ತುಕೊಳ್ಳೋದು ಇನ್ಯಾವಾಗ ?

Hundreds of women march towards temple flouting social distancing rules in Gujarat dpl
Author
Bangalore, First Published May 5, 2021, 4:50 PM IST

ಗಾಂಧೀನಗರ(ಮೇ.05): ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಿಶ್ವದ ಒಟ್ಟು ಪ್ರಕರಣಗಳಲ್ಲಿ ಶೇ.46ರಷ್ಟು ಭಾರತದಲ್ಲಿಯೇ ವರದಿಯಾಗುತ್ತಿದೆ. ಕೊರೋನಾ ಸಾವಿನ ಸಂಖ್ಯೆ ವಿಪರೀತವಾಗಿ ಹೆಚ್ಚಾಗುತ್ತಿದೆ.

ಆಕ್ಸಿಜನ್ ಇಲ್ಲ, ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ವ್ಯಾಕ್ಸೀನ್ ಇಲ್ಲ.. ಬಿಡಿ ಇಷ್ಟಾದರೂ ಜನರಿಗೆ ಬುದ್ಧಿ ಬಂದಿಲ್ಲ. ಹೌದು.. ಗುಜರಾತ್‌ನಲ್ಲಿ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ನೂರಾರು ಮಹಿಳೆಯರು ಮೆರವಣಿಗೆ ಹೊರಟಿದ್ದಾರೆ. ಮಾಸ್ಕ್ ಇಲ್ಲ, ಸ್ಯಾನಿಟೈಸರ್ ಇಲ್ಲ, ಸಾಮಾಜಿಕ ಅಂತರವಂತೂ ದೂರದ ಮಾತು.

ಕೊರೋನಾ ರೂಲ್ಸ್ ಫಾಲೋ ಮಾಡಿದ ನವಜೋಡಿಗಾಗಿ ಪೊಲೀಸರ ಹುಡುಕಾಟ

COVID-19 ಮಧ್ಯೆ ನಿರ್ಬಂಧಗಳ ಹೊರತಾಗಿಯೂ, ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ಸನಂದ್ ಪ್ರದೇಶದ ನವಪುರ ಗ್ರಾಮದಲ್ಲಿ ನೂರಾರು ಮಹಿಳೆಯರು ಜಮಾಯಿಸಿ ಬಾಲಿಯದೇವ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ವೀಡಿಯೊಗಳು ಮತ್ತು ಚಿತ್ರಗಳಲ್ಲಿ ಮಹಿಳೆಯರಲ್ಲಿ ಹೆಚ್ಚಿನವರು ಮಾಸ್ಕ್ ಧರಿಸದೆ ಇರುವುದರಿಂದ ಸಾಮಾಜಿಕ ದೂರವಿಡುವ ನಿಯಮಗಳನ್ನು ಉಲ್ಲಂಘಿಸುತ್ತಿರುವುದನ್ನು ಕಾಣಬಹುದು. ಘಟನೆ ಸಂಬಂಧ 23 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios