ನ್ಯಾಷನಲ್ ಹೆರಾಲ್ಡ್ ಕುಟುಂಬದಲ್ಲಿ ಸಿಕ್ಕಿ ಹೈರಾಣಾಗಿರುವ ಗಾಂಧಿ ಕುಟುಂಬಕ್ಕೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಗಾಂಧಿ ಕುಟುಂಬದ ರಾಜೀವ್ ಗಾಂಧಿ ಫೌಂಡೇಶನ್ ಹಾಗೂ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಗಳ  FCRA ಲೈಸೆನ್ಸ್ ರದ್ದು ಮಾಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಇದೀಗ ಕಾಂಗ್ರೆಸ್ ಕಂಗಾಲಾಗಿದೆ.

ನವದೆಹಲಿ(ಅ.23): ನ್ಯಾಷನಲ್ ಹೆರಾಲ್ಡ್ ಅಕ್ರಣ ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಈಗಾಗಲೇ ವಿಚಾರಣೆ ಎದುರಿಸಿದ್ದಾರೆ. ಈ ಪ್ರಕರಣದಲ್ಲಿ ಗಾಂಧಿ ಕುಟುಂಬ ಹೈರಾಣಾಗಿದೆ. ಇದೀಗ ಮತ್ತೊಂದು ಆಘಾತ ಎದುರಾಗಿದೆ. ನಿಯಮ ಉಲ್ಲಂಘಿಸಿದ ಕಾರಣಕ್ಕೆ ಗಾಂಧಿ ಕುಟುಂಬದ ಹಿಡಿತದಲ್ಲಿರುವ ರಾಜೀವ್ ಗಾಂಧಿ ಫೌಂಡೇಶನ್ ಹಾಗೂ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ ಸಂಸ್ಥೆಗಳು ವಿದೇಶದಿಂದ ದೇಣಿಗೆ ಸಂಗ್ರಹಿಸುವ ಅವಕಾಶವನ್ನು ರದ್ದುಮಾಡಿದೆ. ಫಾರಿನ್ ಕಾಂಟ್ರ್ಯೂಬ್ಯೂಶನ್ ರೆಗ್ಯೂಲೇಶನ್ ಆ್ಯಕ್ಟ್ ಪ್ರಕಾರ ಈ ಎರಡು ಸಂಸ್ಥೆಗಳ ಲೈಸೆನ್ಸ್ ರದ್ದು ಮಾಡಲಾಗಿದೆ. ಈ ಕುರಿತ ಆಂತರಿಕ ಸಚಿವಾಲಯದ ಸಮಿತಿ ತನಿಖೆ ನಡೆಸಿ 2020ರಲ್ಲಿ ಗೃಹ ಸಚಿವಾಲಯಕ್ಕೆ ವರದಿ ನೀಡಿತ್ತು. ಈ ವರದಿಯಲ್ಲಿ ರಾಜೀವ್ ಗಾಂಧಿ ಹೆಸರಿನಲ್ಲಿರುವ ಎರಡು ಸಂಸ್ಥೆಗಳು ನಿಧಿ ಸಂಗ್ರಹದಲ್ಲಿ ಕೆಲ ವಿತ್ತೀಯ ಅವ್ಯವಹಾರಗಳು ನಡೆದಿರುವುದನ್ನು ಪತ್ತೆ ಹಚ್ಚಿತ್ತು.

ಕಾಂಗ್ರೆಸ್ ದೇಶದ ಹಿತಾಸಕ್ತಿ ಗಮನಿಸುವುದಿಲ್ಲ, ಕೇವಲ ಪಕ್ಷದ ಹಿತಾಸಕ್ತಿ ಮಾತ್ರ ಗಮನಿಸುತ್ತದೆ ಎಂದು ಹಲವು ಬಾರಿ ಬಿಜೆಪಿ ಆರೋಪ ಮಾಡಿದೆ. ಈ ವೇಳೆ ಪ್ರಮುಖವಾಗಿ ವಿದೇಶದಿಂದ ದೇಣಿಗೆ ಸಂಗ್ರಹದ ಕುರಿತು ಆರೋಪ ಮಾಡಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ರಾಯಭಾರ ಕಚೇರಿಯಿಂದ ರಾಜೀವ್ ಗಾಂಧಿ ಫೌಂಡೇಶನ ಹಾಗೂ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ನಿಧಿ ಸಂಗ್ರಹಿಸಿದೆ ಎಂದು ಆರೋಪಿಸಿತ್ತು. 

ವಕ್ಫ್ ಆಸ್ತಿ ಕಬಳಿಕೆ ಪ್ರಕರಣಕ್ಕೆ ಮರುಜೀವ: ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಲು ಬಿಜೆಪಿ ಪ್ಲಾನ್?

2005 ಹಾಗೂ 2006ರಲ್ಲಿ ಗಾಂಧಿ ಕುಟುಂಬದ ಪ್ರತಿಷ್ಠಾನ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಿಂದ ಹಾಗೂ ಚೀನಾ ರಾಯಭಾರ ಕಚೇರಿಯಿಂದ ಬರೋಬ್ಬರಿ 3,00,000 ಅಮೆರಿಕನ್ ಡಾಲರ್ ವಿದೇಶಿ ದೇಣಿಗೆ ಸಂಗ್ರಹಿಸಿದೆ ಎಂದು ಜೆಪಿ ನಡ್ಡ ಆರೋಪ ಮಾಡಿದ್ದರು. ಇದೀಗ ವಿದೇಶಿ ದೇಣಿಗೆ ಹಾಗೂ ಅಕ್ರಣ ಹಣ ವರ್ಗಾವಣೆ ಪ್ರಕರಣದಡಿ ಇದೀಗ ಗಾಂಧಿ ಪ್ರತಿಷ್ಠಾನ ಸಂಸ್ಥೆಗಳ ಲೈಸೆನ್ಸ್ ರದ್ದು ಮಾಡಿದೆ. ಇನ್ನು ಮುಂದೆ ರಾಜೀವ್ ಗಾಂಧಿ ಫೌಂಡೇಷನ್ ಹಾಗೂ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ವಿದೇಶಿ ದೇಣಿಗೆ ಸಂಗ್ರಹಿಸಲು ಸಾಧ್ಯವಿಲ್ಲ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದಿ, ವಿದೇಶಿ ಕೂಡುಗೆ ನಿಯಂತ್ರಣ ಕಾಯ್ದೆ, ಆದಾಯ ತೆರಿಗೆ ಕಾಯ್ದಿಗೆಳ ನಿಯಮದಡಿಯಲ್ಲಿ ರಾಜೀವ್ ಗಾಂಧಿ ಫೌಂಡೇಷನ್ ಕಾರ್ಯನಿರ್ವಹಿಸಿಲ್ಲ. ನಿಯಮಗಳು ಉಲ್ಲಂಘಿಸಿದ ಅನುಮಾನದ ಮೇಲೆ ಸಮಿತಿ ತನಿಖೆ ನಡೆಸಿತ್ತು. ಈ ತನಿಖಾ ವರದಿ ಆಧಾರದಲ್ಲಿ ಕೇಂದ್ರ ಗೃಹ ಸಚಿವಾಲಯದ ಇದೀಗ ಗಾಂಧಿ ಪ್ರತಿಷ್ಠಾನಗಳ ಲೈಸೆನ್ಸ್ ರದ್ದು ಮಾಡಿದೆ.

ದ್ವೇಷದ ರಾಜಕೀಯಕ್ಕೆ ತಂದೆ ಕಳೆದುಕೊಂಡೆ, ನನ್ನ ಪ್ರೀತಿಯ ದೇಶ ಕಳೆದುಕೊಳ್ಳಲ್ಲ: Rahul Gandhi