ಕೋವಿಡ್ ಸೋಂಕಿನಿಂದ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಏರಿಕೆ, ಭಾರತದಲ್ಲಿ ಮತ್ತೆ ಆತಂಕ!
ಇತ್ತೀಚೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೂ ದೇಶದಲ್ಲಿ ಹೆಚ್ಚಿನ ಆತಂಕ ತಂದೊಡ್ಡಿರಲಿಲ್ಲ. ಪ್ರಕರಣ ಏರಿಕೆಯಿಂದ ಆತಂಕ ಬೇಡ, ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ ಎಂಬ ಮಾತನ್ನು ತಜ್ಞ ವೈದ್ಯರು ಪದೇ ಪದೇ ಹೇಳಿದ್ದರು. ಆದರೆ ಇದೀಗ ಸೋಂಕಿನಿಂದ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ. ಸಾವಿನ ಸಂಖ್ಯೆಯೂ ಏರಿಕೆಯಾಗಿದೆ.
ನವದೆಹಲಿ(ಆ.16): ಭಾರತದಲ್ಲಿ ಕೋವಿಡ್ ಪ್ರಕರಣ ಏರಿಕೆ, ಮಾಸ್ಕ್ ಕಡ್ಡಾಯ ನಿಯಮಗಳು ಜಾರಿಯಾದಾಗಲೂ ಒಂದು ರೀತಿಯ ನಿರಾಳತೆ ಇತ್ತು. ಕಾರಣ ಇತ್ತೀಚೆಗಿನ ಕೋವಿಡ್ ತಗುಲಿದ ವ್ಯಕ್ತಿಗಳಲ್ಲಿ ಸೌಮ್ಯ ಲಕ್ಷಣಗಳು ಮಾತ್ರ ಕಾಣಿಸಿಕೊಂಡಿತ್ತು. ಹೀಗಾಗಿ ಆಸ್ಪತ್ರೆ ದಾಖಲಾಗುವ ಅವಶ್ಯಕತೆ ಇರಲಿಲ್ಲ. ಇದೇ ಕಾರಣವನ್ನು ಹಲವು ಬಾರಿ ತಜ್ಞ ವೈದ್ಯರು ನೀಡಿದ್ದಾರೆ. ಪ್ರಕರಣ ಏರಿಕೆಯಿಂದ ಆತಂಕ ಬೇಡ, ಕೋವಿಡ್ ಸೋಂಕಿನಿಂದ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಏರಿಕೆಯಾಗಿಲ್ಲ. ಹೀಗಾಗಿ ಮತ್ತೊಂದು ಅಲೆ ಸೃಷ್ಟಿಸುವ ಸಾಧ್ಯತೆ ಇಲ್ಲ ಎಂದಿದ್ದರು. ಆದರೆ ಕಳೆದೆರಡು ವಾರದಿಂದ ದೆಹಲಿಯಲ್ಲಿ ಕೋವಿಡ್ ಸೋಂಕು ತೀವ್ರಗೊಂಡು ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ. ಇದರ ಬೆನ್ನಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಯನ್ ಕುಮಾರ್ ಸಕ್ಸೇನಾ ಈ ಕುರಿತು ಎಚ್ಚರಿಕೆ ನೀಡಿದ್ದರೆ. ಎಲ್ಲರೂ ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಸೋಮವಾರ 1,227 ಪ್ರಕರಣ ದಾಖಲಾಗಿದೆ. ಪಾಸಿಟಿವಿಟಿ ರೇಟ್ ಶೇಕಡಾ 14.57ಕ್ಕೆ ಏರಿಕೆಯಾಗಿದೆ. ಕೊರೋನಾ ವೈರಸ್‌ಗೆ 8 ಬಲಿಯಾಗಿದೆ. ಕಳೆದ 12 ದಿನಗಳಿಂದ ದೆಹಲಿಯಲ್ಲಿ ಸರಾಸರಿ 2,000 ಪ್ರಕರಣಗಳು ಪ್ರತಿ ದಿನ ದಾಖಲಾಗಿದೆ. ಕಳೆದ ಶುಕ್ರವಾರ 10 ಸಾವು ಸಂಭವಿಸಿತ್ತು. ಕಳೆದ 6 ತಿಂಗಳಲ್ಲಿ ಒಂದೇ ದಿನದಲ್ಲಿ ದಾಖಲಾಗದ ಗರಿಷ್ಠ ಸಾವು ಇದಾಗಿತ್ತು. ಫೆಬ್ರವರಿ ತಿಂಗಳಲ್ಲಿ 13 ಸಾವು ಸಂಭವಿಸಿತ್ತು.
ಕೋವಿಡ್: ದಿಢೀರ್ ಐಕಿಯಾ ಮುಚ್ಚಲು ಮುಂದಾದ ಚೀನಾ: ಮಾಲ್‌ನಿಂದ ಜನ ಓಡುತ್ತಿರುವ ವಿಡಿಯೋ ವೈರಲ್
ಪ್ರತಿ ದಿನ ಕೋವಿಡ್ ಸೋಂಕಿನಿಂದ ಆಸ್ಪತ್ರೆ ದಾಖಲಾಗುವ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ಸಂಕೇತವಾಗಿದೆ. ಕಾರಣ ಕೋವಿಡ್ ಎರಡನೇ ಅಲೆಯಲ್ಲಿ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ವಿಪರೀತವಾಗಿತ್ತು. ಹೀಗಾಗಿ ಬೆಡ್ ಕೊರತೆ, ಆಕ್ಸಿಜನ್ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿತ್ತು. ಸದ್ಯ ಭಾರತದ ಆರೋಗ್ಯ ಮೂಲಕ ಸೌಕರ್ಯ ಉತ್ತಮವಾಗಿದೆ. ಆದರೆ ಆಸ್ಪತ್ರೆ ದಾಖಲಾಗುವ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕೋವಿಡ್ ಪ್ರಕರಣ ಸಂಖ್ಯೆ ದ್ವಿಗುಣಗೊಳ್ಳಲಿದೆ.
8,813 ಹೊಸ ಕೇಸು, 29 ಸಾವು
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಮಂಗಳವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಯಲ್ಲಿ ಒಟ್ಟು 8,813 ಕೋವಿಡ್ ಕೇಸುಗಳು ವರದಿಯಾಗಿವೆ. ಇದೇ ವೇಳೆಯಲ್ಲಿ 29 ಸೋಂಕಿತರು ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು 1.11 ಲಕ್ಷಕ್ಕೆ ಇಳಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ.4.15ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ.4.15ರಷ್ಟಿದೆ. ಕæೂೕವಿಡ್ ಚೇತರಿಕೆ ದರವು ಶೇ. 98.56ರಷ್ಟಿದೆ. ದೇಶದಲ್ಲಿ ಈವರೆಗೆ ಒಟ್ಟು 208.31 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ.
ಸೋನಿಯಾ ಗಾಂಧಿಗೆ ಮತ್ತೆ ವಕ್ಕರಿಸಿದ ಕೊರೊನಾ ಸೋಂಕು: 3 ತಿಂಗಳಲ್ಲಿ ಎರಡನೇ ಬಾರಿಗೆ COVID-19
ಬೆಂಗಳೂರು ನಗರದಲ್ಲಿ ಭಾನುವಾರ 1108 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.6.58ರಷ್ಟುದಾಖಲಾಗಿದೆ. 610 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರದಿಯಾಗಿಲ್ಲ. ನಗರದಲ್ಲಿ ಸದ್ಯ 7,279 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 64 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 29 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 7,704 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 419 ಮಂದಿ ಮೊದಲ ಡೋಸ್, 1,273 ಮಂದಿ ಎರಡನೇ ಡೋಸ್ ಮತ್ತು 6,012 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ.