ಪಟಾಕಿ ಸದ್ದಿಗೆ ಹೆದರಿ ಮದುವೆ ಗಂಡಿನೊಂದಿಗೆ ಓಡಿದ ಕುದುರೆ: ವಿಡಿಯೋ ವೈರಲ್

  • ಮದುವೆ ವರನೊಂದಿಗೆ ಓಡಿ ಹೋದ ಕುದುರೆ
  • ದಿಬ್ಬಣ ಹೊರಟಾಗ ಹೊಡೆದ ಪಟಾಕಿಯಿಂದ ಬೆಚ್ಚಿದ ಅಶ್ವ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
Horse Gets Scared of Cracker Runs Away With Groom watch Viral Video akb

ಮದುವೆ ಮನೆಗಳಲ್ಲಿ ಪಟಾಕಿ (Cracker) ಹೊಡೆದು ಸಂಭ್ರಮಿಸುವುದು ಸಾಮಾನ್ಯ. ಪಟಾಕಿ ಸಿಡಿಸುವುದು ಸಂಭ್ರಮದ ಸಂಕೇತವಾಗಿದೆ. ಆದರೆ ಇಲ್ಲೊಂದು ಕಡೆ ಮದುವೆ ಮನೆಯಲ್ಲಿ ಸಿಡಿಸಿದ ಪಟಾಕಿ ಸದ್ದಿಗೆ ವರನನ್ನು ಹೊತ್ತಿದ್ದ ಕುದುರೆಯೊಂದು ಕಣ್ಣಿಗೆ ಕಾಣದಷ್ಟು ದೂರ ಓಡಿ ಹೋಗಿದ್ದು, ಮನೆ ಮಂದಿಯೆಲ್ಲಾ ಗಾಬರಿಯಿಂದ ಬೆಚ್ಚಿ ಬಿದ್ದ ಘಟನೆಯೊಂದು ನಡೆದಿದೆ. ಆ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (video Viral) ಆಗಿದೆ. 

ಉತ್ತರ ಭಾರತದ ಬಹುತೇಕ ಮದುವೆಗಳಲ್ಲಿ ಸಂಗೀತ ಸಂಭ್ರಮದಷ್ಟೇ ಮದುವೆಯ (wedding) ದಿಬ್ಬಣಕ್ಕೆ ಮಹತ್ವದ ಸ್ಥಾನವಿದೆ. ವರನ ಅಥವಾ ವಧುವಿನ ದಿಬ್ಬಣ ಹೊರಟಾಗ ಪಟಾಕಿ ಸಿಡಿಸುವುದು ಸಾಮಾನ್ಯ. ಅಲ್ಲದೇ ಮದುವೆ ದಿಬ್ಬಣಕ್ಕೆ ಕುದುರೆಗಳನ್ನು ಬಳಸುವುದು ಸಾಮಾನ್ಯ. ಆದರೆ ಪಟಾಕಿ ಸದ್ದಿಗೆ ಕುದುರೆಗಳಷ್ಟೇ ಅಲ್ಲದೇ ಬಹುತೇಕ ಪ್ರಾಣಿಗಳು ಹೆದರಿ ವಿಲ ವಿಲ ಒದ್ದಾಡುತ್ತವೆ. ಪಟಾಕಿ ಸದ್ದು ಕುದುರೆಗಳನ್ನು (Horse) ಬೆಚ್ಚಿ ಬೀಳಿಸುವುದಲ್ಲದೇ ಅವು ಪ್ರಚೋದನೆಗೆ ಒಳಗಾಗುತ್ತವೆ. ವಿಶೇಷವಾಗಿ ಮದುವೆಗೆ ಕುದುರೆಗಳನ್ನು ಬಳಸುವವರು ಪ್ರಾಣಿಗಳಿಗೆ ಕಿರಿಕಿರಿ ಉಂಟು ಮಾಡುವುದನ್ನು ತಪ್ಪಿಸಲು ಮತ್ತು ಅದರ ಸುತ್ತಲಿನ ಜನರ ಸುರಕ್ಷತೆಗಾಗಿ ಈ ವಿಚಾರಗಳನ್ನು ತಿಳಿದಿರಬೇಕು. ಆದರೆ ಇಲ್ಲಿ ನಡೆದ ಮದುವೆಯಲ್ಲಿ ಮದುವೆ ಸಂಭ್ರಮದ ಜೋಶ್‌ನಲ್ಲಿದ್ದ ನೆಂಟರು ಗೆಳೆಯರು ಪಟಾಕಿ ಸಿಡಿಸಿದ್ದು, ಇದರಿಂದ ಹೆದರಿದ ಕುದುರೆ ವರನ ಸಮೇತ ಕ್ಷಣದಲ್ಲಿ ಸ್ಥಳದಿಂದ ಎಸ್ಕೇಪ್ ಆಗಿದೆ. 

 
 
 
 
 
 
 
 
 
 
 
 
 
 
 

A post shared by memes | comedy (@ghantaa)

 

ವಿಡಿಯೋದಲ್ಲಿ ಕಾಣಿಸುವಂತೆ ವರನು ಕುದುರೆ ಮೇಲೆ ಕುಳಿತಿದ್ದು, ಕುದುರೆಗೆ ಆಹಾರ ನೀಡಲಾಗುತ್ತಿದೆ ಕುದುರೆ ಆಹಾರಕ್ಕೆ (Food) ಬಾಯಿ ಹಾಕುತ್ತಿದ್ದಂತೆ ಸಮೀಪದಲ್ಲಿದ್ದವರಾರೋ ಪಟಾಕಿ ಸಿಡಿಸುತ್ತಾರೆ. ಇದರಿಂದ ಒಮ್ಮೆಲೇ ಬೆಚ್ಚಿ ಬಿದ್ದ ಕುದುರೆ ವರನನ್ನು ಹೊತ್ತುಕೊಂಡು ಶರವೇಗದಲ್ಲಿ ಅಲ್ಲಿಂದ ಓಡುತ್ತದೆ. ಏತನ್ಮಧ್ಯೆ, ಕುದುರೆಯನ್ನು ನಿರ್ವಹಿಸುವವರು ಅದು ಹೋದ ದಾರಿಯಲ್ಲೇ ಓಡಲು ಶುರು ಮಾಡುತ್ತಾರೆ. ಅಷ್ಟರಲ್ಲಾಗಲೇ ಕುದುರೆ ಕಣ್ಣಿಗೆ ಕಾಣದಷ್ಟು ದೂರು ಹೋಗಿ ಆಗಿರುತ್ತದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಘಂಟಾ ಎಂಬ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದ್ದು, ನಾಲ್ಕು ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ಸೀರೆಯುಟ್ಟು ಕುದುರೆ ಸವಾರಿ ಮಾಡೋ ಮೋನಾಲಿಸಾ: ಬುಲೆಟ್, ಲಾರಿಯನ್ನೂ ಓಡಿಸುವ ಗಟ್ಟಿಗಿತ್ತಿ

ಇತ್ತೀಚೆಗೆ ಜನರಿಗೆ ಕುದುರೆ ಮೇಲಿನ ಹುಚ್ಚು ಹೆಚ್ಚಾಗಿದೆ. ಎಲ್ಲರೂ ಆಫೀಸ್ ಹೋಗಲು ಸ್ಕೂಟಿ ಕಾರು ಬೈಕ್‌ ಖರೀದಿಸಿದರೆ ಪುಣೆಯಲ್ಲಿ ಒಬ್ಬರು ವ್ಯಕ್ತಿ  40,000 ರೂ. ಕೊಟ್ಟು ಕುದುರೆಯೊಂದನ್ನು ಖರೀದಿಸಿದ್ದರು. ಅದರಲ್ಲೇ ದಿನಾ ತಮ್ಮ ಕೆಲಸದ ಸ್ಥಳಕ್ಕೆ ಪ್ರಯಾಣಿಸುತ್ತಿದ್ದರು. ಇಂಧನ ಬೆಲೆ ಏರಿಕೆಯ ನಡುವೆ ಇದು ಸುಲಭ ಉಪಾಯ ಎಂದು ಅವರು ಹೇಳುತ್ತಾರೆ. ಮಹಾರಾಷ್ಟ್ರದ (Maharashtra) ಔರಂಗಾಬಾದ್‌ನ (Aurangabad) ಶೇಖ್ ಯೂಸುಫ್ (Shaikh Yusuf) ಎಂಬುವವರೇ ಕುದುರೆ ಖರೀದಿಸಿದ ವ್ಯಕ್ತಿ. 

ಕೊರೊನಾ ವೈರಸ್‌ನಿಂದಾದ ಲಾಕ್‌ಡೌನ್ ನಮ್ಮಲ್ಲಿ ಅನೇಕರಿಗೆ ಕಠಿಣವಾಗಿತ್ತು. ಅನೇಕರು ತಮ್ಮ ಉದ್ಯೋಗ ಮತ್ತು ವ್ಯವಹಾರಗಳನ್ನು ಕಳೆದುಕೊಂಡರು ಮತ್ತು ಅನೇಕರು ತಮ್ಮ ಕುಟುಂಬವನ್ನು ಪೋಷಿಸಲು ಹೆಣಗಾಡಿದರು. ಆದರೆ ಮಹಾರಾಷ್ಟ್ರದ ಔರಂಗಾಬಾದ್‌ನ ವ್ಯಕ್ತಿ ಶೇಖ್ ಯೂಸುಫ್, ಇಂಧನ ಬೆಲೆ ಏರಿಕೆಯ ಮಧ್ಯೆ ಲಾಕ್‌ಡೌನ್ (lockdown) ಸಮಯದಲ್ಲಿ ಕುದುರೆ ಖರೀದಿಸಿದ್ದಾರೆ. ಯೂಸುಫ್ ಮಹಾರಾಷ್ಟ್ರದ ಕಾಲೇಜೊಂದರಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಆ ಸಮಯದಲ್ಲಿ ಅವರ ಬೈಕು ಕಾರ್ಯನಿರ್ವಹಿಸುತ್ತಿರಲಿಲ್ಲ. ಸಾರ್ವಜನಿಕ ಸಾರಿಗೆಯು ಕಾರ್ಯನಿರ್ವಹಿಸುತ್ತಿರಲಿಲ್ಲ ಮತ್ತು ಪೆಟ್ರೋಲ್ ಡಿಸೇಲ್‌ ಬೆಲೆಗಳು ಏರಿದ್ದವು. ಹೀಗಾಗಿ ಅವರಿಗೆ ಇದೊಂದೇ ಆಯ್ಕೆ ಉಳಿದಿತ್ತು. ಅವರು ಕುದುರೆಯೊಂದನ್ನು ಖರೀದಿಸಿ ಅದರಲ್ಲೇ ಪ್ರಯಾಣಿಸಲು ಶುರು ಮಾಡಿದರು.

ಕಪ್ಪು ಕುದುರೆ ಎಂದು 23 ಲಕ್ಷ ಕೊಟ್ಟು ತಂದ : ಸ್ನಾನ ಮಾಡಿಸಿದಾಗ ಬಯಲಾಯ್ತು ಬಣ್ಣ
 

 

Latest Videos
Follow Us:
Download App:
  • android
  • ios