ಬೆರಳು, ಚೇಳಿನ ಬಳಿಕ ಇದೀಗ ಆಹಾರದಲ್ಲಿ ಸತ್ತ ಹಾವು, 11 ಕಾಲೇಜು ವಿದ್ಯಾರ್ಥಿಗಳು ಅಸ್ವಸ್ಥ!
ಐಸ್‌ಕ್ರೀಮ್‌ನಲ್ಲಿ ಮುಷ್ಯನ ಬೆರಳು, ಚೇಳು ಪತ್ತೆಯಾದ ಘಟನೆ ಬೆನ್ನಲ್ಲೇ ಇದೀಗ ಎಂಜಿನೀಯರಿಂಗ್ ಕಾಲೇಜಿನಲ್ಲಿ ನೀಡಿದ ಆಹಾರದಲ್ಲಿ ಸತ್ತ ಹಾವು ಪತ್ತೆಯಾಗಿದೆ. ಈ ಆಹಾರ ಸೇವಿಸಿದ 11 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಕಾಲೇಜು ಸೇರಿದ್ದಾರೆ.
ಪಾಟ್ನ(ಜೂ.16) ದೇಶದ ಹಲವು ಭಾಗದಲ್ಲಿ ಆಹಾರಗಳಲ್ಲಿ ಸತ್ತ ಚೇಳು, ಮುನುಷ್ಯನ ಬೆರಳು ಸೇರಿದಂತೆ ಹಲವು ಕ್ರಿಮಿ ಕೀಟಗಳು ಪತ್ತೆಯಾದ ಘಟನೆ ವರದಿಯಾಗಿದೆ. ಇದೀಗ ಬಿಹಾರದ ಎಂಜಿನೀಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಆಹಾರದಲ್ಲಿ ಹಾವೊಂದು ಪತ್ತೆಯಾಗಿದೆ. ಇದರ ಅರಿವಿಲ್ಲದೆ ಆಹಾರ ಸೇವಿಸಿದ 11 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ.
ಬಿಹಾರ ಬಂಕಾದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮೆಸ್ ವಿರುದ್ಧ ಹಲವು ಬಾರಿ ಆಹಾರದ ಕುರಿತು ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಪ್ರಮುಖವಾಗಿ ಶುಚಿತ್ವ ಇಲ್ಲದ ಕಾರಣ ವಿದ್ಯಾರ್ಥಿಗಳು ಪದೇ ಪದೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಎಂದಿನಂತೆ ಆಹಾರ ಯಾರಿಸಿ ವಿದ್ಯಾರ್ಥಿಗಳಿಗೆ ಬಡಿಸಲಾಗಿದೆ. ಓರ್ವ ವಿದ್ಯಾರ್ಥಿಗೆ ತಟ್ಟೆಯಲ್ಲಿ ಆಹಾರದ ಜೊತೆ ಸತ್ತ ಹಾವು ಪತ್ತೆಯಾಗಿದೆ. ತಕ್ಷಣವೇ ವಿದ್ಯಾರ್ಥಿ ಮಾಹಿತಿ ನೀಡಿದ್ದಾನೆ.
ಐಸ್ ಕ್ರೀಮ್ ಆರ್ಡರ್ ಮಾಡಿದ ಮಹಿಳೆಗ ಶಾಕ್, ಪ್ಯಾಕ್ ತೆರೆದಾಗ ಪತ್ತೆಯಾಯ್ತು ಸತ್ತ ಚೇಳು!
ಇದಕ್ಕೂ ಮೊದಲು ಆಹಾರ ಸೇವಿಸಿದ ವಿದ್ಯಾರ್ಥಿಗಳಲ್ಲಿ ವಾಂತಿ ಕಾಣಿಸಿಕೊಂಡಿತ್ತು. ಹಾವನ್ನು ಬೇಯಿಸಿ ನೀಡಿದ್ದ ಕಾರಣ ಆಹಾರದಲ್ಲಿ ವಿಷ ಸೇರಿಕೊಂಡಿದೆ. ಇದರ ಪರಿಣಾಮ 11 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರೆ. ವಿದ್ಯಾರ್ಥಿಗಳನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಿದ್ಯಾರ್ಥಿಗಳು ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.
ಇತ್ತ ಕಾಲೇಜು ಆಡಳಿತ ಮಂಡಳಿ ಕಾಲೇಜಿನ ಮೆಸ್ ಉಸ್ತುವಾರಿ ವಹಿಸಿಕೊಂಡಿದ್ದ ವೆಂಡರ್‌ನ್ನು ಅಮಾನತು ಮಾಡಿದೆ. ಇದೇ ವೇಳೆ ನಿರ್ಲಕ್ಷ್ಯ ವಹಿಸಿ ಆಹಾರ ತಯಾರಿಸಿದ ಕಾರಣಕ್ಕೆ ದುಬಾರಿ ದಂಡ ಹಾಕಲು ನಿರ್ಧರಿಸಿದೆ. ಇತ್ತ ಕಾಲೇಜಿನ ಸಮಿತಿ ಈ ಘಟನೆ ಕುರಿತು ಶಿಕ್ಷಣ ಅಧಿಕಾರಿಗೆ ವರದಿ ನೀಡಿದೆ. ಪ್ರಮುಖವಾಗಿ ವೆಂಡರ್ ಶುಚಿತ್ವಕ್ಕೆ ಗಮನ ನೀಡಿಲ್ಲ. ಆಹಾರ ಧಾನ್ಯ ಕೂಡಿಟ್ಟ ಗೋಣಿ ಚೀಲದಲ್ಲಿ ಹಾವು ಸೇರಿಕೊಂಡಿದೆ. ಇತ್ತ ಸಿಬ್ಬಂಧಿಗಳು ಆಹಾರ ಧಾನ್ಯಗಳನ್ನು ತೆಗೆದು ತೊಳೆದು ಬಳಸುತ್ತಿಲ್ಲ. ಗೋಣಿಯಿಂದ ನೇರವಾಗಿ ಬಾಣಲೆಗೆ ಹಾಕಿದೆ. ಇದರಿಂದ ಈ ಅವಾಂತರ ಸಂಭವಿಸಿದೆ ಎಂದು ವರದಿ ನೀಡಿದೆ.
ಜೆಪ್ಟೊದಲ್ಲಿ ಐಸ್‌ಕ್ರೀಂ ಆರ್ಡರ್ ಮಾಡಿದ ಮುಂಬೈ ವೈದ್ಯನಿಗೆ ಶಾಕ್: ಕೋನ್ ಐಸ್‌ಕ್ರೀಂನಲ್ಲಿತ್ತು ಮಾನವ ಬೆರಳು
ವಿದ್ಯಾರ್ಥಿಗಳು ಹಲವು ಬಾರಿ ನಿರ್ಲಕ್ಷ್ಯ ಹಾಗೂ ಶುಚಿತ್ವ ಕುರಿತು ದೂರು ನೀಡಿದ್ದಾರೆ. ಗುತ್ತಿಗೆ ಪಡೆದವರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೂ ನಿರ್ಲಕ್ಷ್ಯ ಮುಂದುವರಿದಿದೆ. ಇದರ ಪರಿಣಾಮ ಅವಾಂತರ ಸಂಭವಿಸಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇತ್ತ ಪೋಷಕರುು ಆಕ್ರೋಶ ಹೊರಹಾಕಿದ್ದಾರೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.