ದೀದಿ ನಾಡಿನಲ್ಲಿ ಮತ್ತೊಂದು ಯುವತಿ ಮೇಲೆ ಭೀಕರ ಹಲ್ಲೆ: ಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ
ಸಂದೇಶಖಾಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಅದು ವಜಾಗೊಳಿಸಿದೆ.
ನವದೆಹಲಿ: ಸಂದೇಶಖಾಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಅದು ವಜಾಗೊಳಿಸಿದೆ.
ಭೂ ಕಬಳಿಕೆ ಹಾಗೂ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಟಿಎಂಸಿಯ ಉಚ್ಛಾಟಿತ ನಾಯಕ ಶೇಖ್ ಶಹಜಹಾನ್ ವಿರುದ್ಧ ಕಲ್ಕತ್ತಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿ ಕುರಿತು ವಿಚಾರಣೆ ನಡೆಸಿದ ನ್ಯಾ| ಬಿ.ಆರ್.ಗವಾಯಿ ಹಾಗೂ ನ್ಯಾ|ಕೆ.ವಿ.ವಿಶ್ವನಾಥನ್ ಪೀಠ, ವ್ಯಕ್ತಿಯನ್ನು ರಕ್ಷಿಸುವ ಪ್ರಯತ್ನಗಳು ಏಕೆ ನಡೆಯುತ್ತಿವೆ ಎಂದು ಚಾಟಿ ಬೀಸಿದೆ. ಪಡಿತರ ವಿತರಣೆ ಅಕ್ರಮದ ತನಿಖೆ ನಡೆಸಲು ಶಹಜಹಾನ್ ನಿವಾಸಕ್ಕೆ ತೆರಳಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದರು ಈ ಪ್ರಕರಣ ಸಂಬಂಧ ಶೇಖ್‌ನನ್ನು ಫೆ.29ರಂದು ಬಂಧಿಸಲಾಗಿತ್ತು.
ರಸ್ತೆಯಲ್ಲಿ ಮಹಿಳೆಗೆ ತೀವ್ರ ಥಳಿತ ನೋಡುತ್ತಾ ನಿಂತ ಜನ, ಪಶ್ಚಿಮ ಬಂಗಾಳದಲ್ಲಿ ತಾಲಿಬಾನ್ ಶಿಕ್ಷೆ ವಿಡಿಯೋ!
ದೀದಿ ನಾಡಿನಲ್ಲಿ ಮತ್ತೊಂದು ಯುವತಿ ಮೇಲೆ ಭೀಕರ ಹಲ್ಲೆ
ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಶಾಸಕರು ಮತ್ತು ಬೆಂಬಲಿಗರ ಮತ್ತಷ್ಟು ದುಷ್ಕೃತ್ಯಗಳು ಬೆಳಕಿಗೆ ಬಂದಿವೆ. ಇತ್ತೀಚೆಗಷ್ಟೇ ಟಿಎಂಸಿ ಶಾಸಕನ ಆಪ್ತನೊಬ್ಬ ವ್ಯಕ್ತಿಯೊಬನನ್ನು ವಿಚಾರಣೆ ಕರೆಸಿ ಭೀಕರವಾಗಿ ಹಲ್ಲೆ ನಡೆಸಿದ್ದ. ಈ ಘಟನೆ ಬೆನ್ನಲ್ಲೇ ಅಂಥದ್ದೇ ಮತ್ತೊಂದು ವಿಡಿಯೋ ಇದೀಗ ಬೆಳಕಿಗೆ ಬಂದಿದೆ.
ಕೋಲ್ಕತಾದ ಅರಿದಹಾ ಪ್ರದೇಶದ ಟಿಎಂಸಿ ಶಾಸಕ ಮದನ್ ಮಿತ್ರಾನ ಆಪ್ತ ಜಯಂತ್ ಸಿಂಗ್ ಎಂಬಾತ ತನ್ನ ಬೆಂಬಲಿಗರ ಜೊತೆಗೂಡಿ ಯುವತಿಯೊಬ್ಬಳನ್ನು ಅತ್ಯಂತ ಭೀಕರವಾಗಿ ಹಲ್ಲೆ ಮಾಡಿದ ವಿಡಿಯೋ ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ ನಾಲ್ಕು ಜನ ಯುವತಿಯ ಕೈ, ಕಾಲು ಹಿಡಿದುಕೊಂಡಿದ್ದರೆ, ಮತ್ತಿಬ್ಬರು ಆಕೆಯ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.
ರಾಜಭವನದಲ್ಲಿ ಪೊಲೀಸರಿಂದಲೇ ಕಂಟಕ? ನನಗೆ ಅಭದ್ರತೆ ಕಾಡುತ್ತಿದೆ ಎಂದ ಪಶ್ಚಿಮ ಬಂಗಾಳ ರಾಜ್ಯಪಾಲ!