Asianet Suvarna News Asianet Suvarna News

Data On Suicides : ಕೋವಿಡ್-19 ಮೊದಲ ಅಲೆಯ ವೇಳೆ ಆದ ಆತ್ಮಹತ್ಯೆಗಳ ಪ್ರಮಾಣ ಪ್ರಕಟಿಸಿದ ಕೇಂದ್ರ ಸರ್ಕಾರ!

ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಗೃಹಖಾತೆ ರಾಜ್ಯ ಸಚಿವ
2018-2020ರ ಅವಧಿಯಲ್ಲಿ 25, 251 ಮಂದಿ ಆತ್ಮಹತ್ಯೆ
2020ರಲ್ಲಿ 8 ಸಾವಿರ ಮಂದಿಯ ಸಾವು

Home Ministry Released Data On Suicides During 1st Covid Wave san
Author
Bengaluru, First Published Feb 9, 2022, 9:00 PM IST | Last Updated Feb 9, 2022, 9:00 PM IST

ನವದೆಹಲಿ (ಫೆ. 9): 2020 ರಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ (financial crises) 8,000 ಕ್ಕೂ ಹೆಚ್ಚು ಜನರು ಆತ್ಮಹತ್ಯೆಯಿಂದ (Suicide) ಸಾವನ್ನಪ್ಪಿದ್ದಾರೆ. ಕೋವಿಡ್-19 ಮೊದಲ ಅಲೆ, ಹಠಾತ್ ಲಾಕೌಡೌನ್ ನಿಂದಾಗಿ (abrupt lockdown)ಉಂಟಾದ ಅನೇಕ ನಿರುದ್ಯೋಗದಿಂದಾಗಿ, ತಿಂಗಳುಗಳ ಕಾಲ ಜನರು ಆದಾಯವನ್ನು ಕಾಣದೇ ಇದ್ದ ಕಾರಣ ಇದು ಸಂಭವಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಕೋವಿಡ್-19 ಮೊದಲ ಅಲೆಯಲ್ಲಿ ಆದ ಆತ್ಮಹತ್ಯೆಗಳ ಡೇಟಾವನ್ನು ಜನರ ಮುಂದಿಟ್ಟಿದೆ.

ನಿರುದ್ಯೋಗದಿಂದಾಗಿ 8761 ಮಂದಿ ಈ ಅವಧಿಯಲ್ಲಿ ಸಾವನ್ನಪ್ಪಿದ್ದಾರೆ. 2020ರಲ್ಲಿ ಆದ ಇಷ್ಟು ಪ್ರಮಾಣದ ಆತ್ಮಹತ್ಯೆಗೆ ನಿರುದ್ಯೋಗ (unemployment)ಮಾತ್ರವಲ್ಲದೆ, ದಿವಾಳಿತನ (bankruptcy )ಹಾಗೂ ಸಾಲಬಾಧೆಯೂ (indebtedness ) ಕಾರಣವಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ರಾಜ್ಯಸಭೆಗೆ (Minister of State of Home Affairs Nityanand Rai informed the Rajya Sabha)ಬುಧವಾರ ತಿಳಿಸಿದ್ದಾರೆ. 2018 ಮತ್ತು 2020ರ ನಡುವಿನ ಮೂರು ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ 25,251 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.

2020 ರಲ್ಲಿ, ವಲಸೆ ಕಾರ್ಮಿಕರ ಸಾವಿನ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಸರ್ಕಾರವು ಸಂಸತ್ತಿನಲ್ಲಿ ಹೇಳಿತ್ತು, ಆದ್ದರಿಂದ ಪರಿಹಾರದ "ಪ್ರಶ್ನೆ ಉದ್ಭವಿಸುವುದಿಲ್ಲ" ಎಂದು ಕೇಂದ್ರ ಹೇಳಿದ್ದರಿಂದ ಈ ಡೇಟಾವು ಮಹತ್ವ ಪಡೆದುಕೊಂಡಿದೆ. ಕೊರೋನಾವೈರಸ್ ಲಾಕ್‌ಡೌನ್‌ನಲ್ಲಿ ಮನೆ ತಲುಪಲು ಪ್ರಯತ್ನಿಸುವಾಗ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಸರ್ಕಾರದ ಲಿಖಿತ ಪ್ರತಿಕ್ರಿಯೆಯು ವಿರೋಧ ಪಕ್ಷದಿಂದ ವ್ಯಾಪಕ ಟೀಕೆಗೆ ಕಾರಣವಾಗಿತ್ತು.

Monuments and Heritage : ಸ್ಮಾರಕಗಳು ಮತ್ತು ಪರಂಪರೆಯ ಕುರಿತಾಗಿ ಜಾಗತಿಕ ವೆಬಿನಾರ್
2020ರ ಮಾರ್ಚ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಘೋಷಣೆ ಮಾಡಿದ ಲಾಕ್ ಡೌನ್ ನಿಂದಾಗಿ, ದೇಶದಲ್ಲಿ 1 ಕೋಟಿಗೂ ಅಧಿಕ ವಲಸಿಗರಿಗೆ ಸಿದ್ಧತೆ ಮಾಡಲು ಅವಕಾಶವೂ ಸಿಗದೆ, ದೇಶದ ವಿವಿಧ ಮೂಲೆಗಳಿಂದ ತಮ್ಮ ತವರು ರಾಜ್ಯಗಳಿಗೆ ವಾಪಸಾಗಿದ್ದರು. ಈ ವೇಳೆ ವಾಹನ ಸಂಚಾರವಿಲ್ಲದೆ, ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಆ ಸಮಯದಲ್ಲೂ ಸರ್ಕಾರ ರೈಲುಗಳ ಸೇವೆ ನೀಡುವ ಮೂಲಕ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿತ್ತು. ಉತ್ತರ ಪ್ರದೇಶದ ವ್ಯಾಪಾರಿಯೊಬ್ಬ ಕೋವಿಡ್-19ನಿಂದಾಗಿ ಉಂಟಾದ ಭಾರೀ ನಷ್ಟ, ಜಿಎಸ್ ಟಿ (GST)ಹಾಗೂ ಪ್ರಧಾನಿ ಮೋದಿ ಅವರ ಆರ್ಥಿಕ ನೀತಿಗಳನ್ನು ದೂಷಣೆ ಮಾಡಿ ಫೇಸ್ ಬುಕ್ ಲೈವ್ ನಲ್ಲಿಯೇ ಪತ್ನಿಯೊಂದಿಗೆ ವಿಷ ಸೇವಿಸಿದ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ದಿನವೇ ಕೇಂದ್ರ ಸರ್ಕಾರ ಈ ಡೇಟಾವನ್ನು ಪ್ರಕಟಿಸಿದೆ.

Hijab Row : ಕರ್ನಾಟಕದ ವಿವಾದ ತಮಿಳುನಾಡಿಗೆ ಬರಬಾರದು ಎಂದ ಕಮಲ್ ಹಾಸನ್
ಆತ್ಮಹತ್ಯೆಗಳ ಡೇಟಾದ ಜೊತೆಗೆ, ಬೆಳೆಯುತ್ತಿರುವ ಮಾನಸಿಕ ಅಸ್ವಸ್ಥತೆಗಳನ್ನು ಎದುರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಸರ್ಕಾರವು ಪಟ್ಟಿಮಾಡಿದೆ: "ಸರ್ಕಾರವು ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು (National Mental Health Programme) (NMHP) ಅನುಷ್ಠಾನಗೊಳಿಸುತ್ತಿದೆ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ (DMHP) ಅನುಷ್ಠಾನವನ್ನು ಬೆಂಬಲಿಸುತ್ತಿದೆ." ಈ ಕಾರ್ಯಕ್ರಮವು ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮಗಳು, ಕೆಲಸದ ಒತ್ತಡ ನಿರ್ವಹಣೆ, ಜೀವನ ಕೌಶಲ್ಯ ತರಬೇತಿ ಮತ್ತು ಶಾಲಾ-ಕಾಲೇಜುಗಳಲ್ಲಿ ಸಮಾಲೋಚನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಸಚಿವ ರೈ ಹೇಳಿದರು. ನಿರುದ್ಯೋಗವನ್ನು ಎದುರಿಸಲು, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಉತ್ತೇಜಿಸಲು ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios