ಭಯೋತ್ಪಾದನಾ ಕೃತ್ಯದ ಮೂಲಕ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಹೊರಟಿದ್ದ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(ಸಿಮಿ) ಸಂಘಟನೆ ಮೇಲಿನ ನಿಷೇಧವನ್ನು ಕೇಂದ್ರ ಗೃಹ ಸಚಿವಾಲಯ ವಿಸ್ತರಿಸಿದೆ.  

ನವದೆಹಲಿ(ಜ.29) ಭಯೋತ್ಪಾದನೆ, ಹಿಂಸೆ, ಜಿಹಾದ್ ಮೂಲಕ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಲು ಹುಟ್ಟಿಕೊಂಡ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(SIMI) ಉಗ್ರ ಸಂಘಟನೆ ಮೇಲೆ ಹೇರಲಾಗಿದ್ದ ನಿಷೇಧವನ್ನು ಮತ್ತೆ ವಿಸ್ತರಿಸಲಾಗಿದೆ. ಮುಂದಿನ 5 ವರ್ಷಗಳ ಕಾಲ ಈ ಉಗ್ರ ಸಮಿ ಸಂಘಟನೆಯ್ನು ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆ(UAPA) ಅಡಿಯಲ್ಲಿ ನಿಷೇಧಿಸಲಾಗಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿರುವ ನರೇಂದ್ರ ಮೋದಿ ಸರ್ಕಾರ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ ಉಗ್ರ ಸಂಘಟನೆ ಮೇಲಿನ ನಿಷೇಧವನ್ನು ಮುಂದಿನ 5 ವರ್ಷಗಳಿಗೆ ವಿಸ್ತರಿಸಲಾಗುತ್ತಿದೆ. UAPA ಕಾಯ್ದೆಯಡಿಯಲ್ಲಿ ಈ ಸಂಘಟನೆಯನ್ನು ಕಾನೂನು ಬಾಹಿರ ಚಟವಟಿಕೆ ನಡೆಸುತ್ತಿರುವ ಸಂಘಟನೆ ಎಂದು ಘೋಷಿಸಲಾಗಿದೆ. ಭಾರತದ ಸಾರ್ವಭೌಮತೆ, ಭದ್ರತೆ ಹಾಗೂ ಸಮಗ್ರತೆಗೆ ಧಕ್ಕೆ ತರುವಲ್ಲಿ ಹಾಗೂ ದೇಶದಲ್ಲಿ ಭಯೋತ್ಪಾದನೆಯನ್ನು ಪ್ರಚೋದಿಸಿ ಶಾಂತಿ ಹಾಗೂ ಕೋಮು ಸೌಹಾರ್ಧತೆಗೆ ಧಕ್ಕೆ ತಂದಿರುವ ಸಿಮಿ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಟ್ವೀಟ್ ಮಾಡಿದೆ.

ಕೇಂದ್ರದಿಂದ ಮತ್ತೊಂದು ಸ್ಟ್ರೋಕ್, ಕಾಶ್ಮೀರದ ತೆಹ್ರೀಕ್ ಇ ಹುರಿಯತ್ ಸಂಘಟನೆ ನಿಷೇಧ!

1977ರಲ್ಲಿ ಸಿಮಿ ಉಗ್ರ ಸಂಘಟನೆ ಆಲಿಘಡದಲ್ಲಿ ಹುಟ್ಟಿಕೊಂಡಿತು. ಉಗ್ರ ಚಟುವಟಿಕೆಗಳ ಮೂಲಕ ದೇಶದಲ್ಲಿ ಹಿಂಸೆ, ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಸಿಮಿ ಸಂಘಟನೆಯನ್ನು 2001ರಲ್ಲಿ ನಿಷೇಧಿಸಲಾಯಿತು. ಆದರೆ 2008ರ ಮುಂಬೈ ದಾಳಿ ಬೆನ್ನಲ್ಲೇ ಸಮಿ ಸಂಘಟನೆ ಮೇಲಿನ ನಿಷೇಧವನ್ನು ವಾಪಸ್ ಪಡೆಯಲಾಗಿತ್ತು. ಆದರೆ ಆಗಸ್ಟ್ 6, 2008ರಲ್ಲಿ ಭಾರತದ ಮುಖ್ಯನ್ಯಾಯಮೂರ್ತಿ ಸಿಮಿ ಸಂಘಟನೆಯನ್ನು ಮತ್ತೆ ನಿಷೇಧಿಸಿದ್ದರು. 2019ರ ಆರಂಭದಲ್ಲಿ ನಿಷೇಧದ ಅವಧಿ ಅಂತ್ಯಗೊಂಡಿತ್ತು. ಇದಕ್ಕೂ ಮೊದಲೇ ಅಂದರೆ ಫೆಬ್ರವರಿ 6, 2019ರಂದು ಸಿಮಿ ಸಂಘಟನೆ ನಿಷೇಧ ವಿಸ್ತರಿಸಲಾಗಿತ್ತು. ಇದೀಗ ಮತ್ತೆ 5 ವರ್ಷಗಳ ಕಾಲಕ್ಕೆ ಸಿಮಿ ಸಂಘಟನೆಯನ್ನು ನಿಷೇಧಿಸಲಾಗಿದೆ.

2022ರಲ್ಲಿ ಉಗ್ರಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಐಸಿಸ್‌ ಸೇರಿ ವಿವಿಧ ಉಗ್ರಗಾಮಿ ಸಂಘಟನೆಗಳ ಜತೆ ನಂಟು, ಹಿಂದು ಕಾರ್ಯಕರ್ತರ ಹತ್ಯೆ, ಯುವಕರನ್ನು ತಲೆಕೆಡಿಸಿ ಮೂಲಭೂತವಾದಿಗಳನ್ನಾಗಿ ಮಾಡುವ ಗುರುತರ ಆರೋಪದ ಮೇಲೆ ಪಿಎಫ್ಐ ಸಂಘಟನೆಯನ್ನು 5 ವರ್ಷಗಳ ಕಾಲ ನಿಷೇಧಿಸಲಾಗಿದೆ.

ನಿಜ್ಜರ್ ಆಪ್ತ, ಗ್ಯಾಂಗ್‌ಸ್ಟರ್ ಲಕ್ಬೀರ್ ಸಿಂಗ್ ಭಯೋತ್ಪಾದಕ, ಕೇಂದ್ರ ಸರ್ಕಾರ ಘೋಷಣೆ!