ಕಾಶ್ಮೀರದಲ್ಲಿ ಹೆಚ್ಚಿದ ಉಗ್ರರ ಅಟ್ಟಹಾಸ: ಅಜಿತ್ ದೋವಲ್ ಭೇಟಿ ಮಾಡಿದ ಅಮಿತ್ ಷಾ

ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಿದ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಷಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Home minister Amit Shah meets NSA Doval Amid unabated targeted killings in valley akb

ನವದೆಹಲಿ: ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಆರಂಭವಾಗಿದೆ. ಒಂದಾದ ಬಳಿಕ ಮತ್ತೊಂದರಂತೆ ಕಾಶ್ಮೀರಿ ಪಂಡಿತರ ಹತ್ಯೆ ನಡೆಯುತ್ತಿದ್ದು, ಇಲ್ಲಿನ ಅಲ್ಪಸಂಖ್ಯಾತರು ತಮ್ಮ ಮನೆಗಳನ್ನು ತೊರೆಯುವಂತಾಗಿದೆ. ಕಣಿವೆ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಉದ್ದೇಶ ಪೂರ್ವಕ ಹತ್ಯೆಗಳಿಂದ ಕೇಂದ್ರ ಸರ್ಕಾರ ಆತಂಕಗೊಂಡಿದ್ದು, ಈ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ದೇಶದ ಭದ್ರತಾ ಸಲಹೆಗಾರ ಎನ್ಎಸ್ಎ ಅಜಿತ್‌ ದೋವಲ್ ಅವರನ್ನು ಭೇಟಿ ಮಾಡಿದ್ದಾರೆ. 

ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು (ಜೂ.2) ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ನವದೆಹಲಿಯ ಉತ್ತರ ಬ್ಲಾಕ್‌ನಲ್ಲಿರು ಗೃಹ ಸಚಿವಾಲಯದಲ್ಲಿ ಭೇಟಿ ಮಾಡಿದರು. ವರದಿಗಳ ಪ್ರಕಾರ, ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಹಲವು ಕಾಶ್ಮೀರಿ ಪಂಡಿತರ ಉದ್ದೇಶಿತ ಹತ್ಯೆಗಳ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ. ಪ್ರಧಾನಿ ಕಾರ್ಯಾಲಯದ ಕೇಂದ್ರದ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. 

ಇಂದು ಬೆಳಗ್ಗೆಯಷ್ಟೇ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಬ್ಯಾಂಕ್ ಆವರಣದೊಳಗೆ ರಾಜಸ್ಥಾನದ (Rajasthan) ಮೂಲದ ಬ್ಯಾಂಕ್ ಉದ್ಯೋಗಿಯನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಇದು ಜಮ್ಮು ಕಾಶ್ಮೀರದಲ್ಲಿ ಮೇ 1 ರಿಂದ ನಡೆದ ಎಂಟನೇ ನಾಗರಿಕರ ಹತ್ಯೆಯಾಗಿದೆ ಮತ್ತು ಹಾಗೆಯೇ ಮುಸ್ಲಿಮೇತರ ಸರ್ಕಾರಿ ನೌಕರನ ಮೂರನೇ ಹತ್ಯೆಯಾಗಿದೆ.

 

ಉಗ್ರರ ಅಟ್ಟಹಾಸ, ಶಿಕ್ಷಕಿಯ ಹತ್ಯೆ ಬಳಿಕ ಕಣಿವೆ ತೊರೆದ 100ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು!
 

ದಕ್ಷಿಣ ಕಾಶ್ಮೀರ (south Kashmir) ಜಿಲ್ಲೆಯ ಅರೆಹ್ ಮೋಹನ್‌ಪೋರಾ ಶಾಖೆಯಲ್ಲಿ ( Areh Mohanpora branch) ಎಲ್ಲಕಿ ದೇಹತಿ ಬ್ಯಾಂಕ್‌ನ (Ellaqui Dehati Bank) ಮ್ಯಾನೇಜರ್ ಆಗಿದ್ದ ವಿಜಯ್ ಕುಮಾರ್ (Vijay Kumar) ಅವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡು ವಿಜಯಕುಮಾರ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಬಿಜೆಪಿ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಖಂಡನೆ ವ್ಯಕ್ತಪಡಿಸಿವೆ. 

ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಹತ್ಯೆಗಳಿಂದ ಕಂಗೆಟ್ಟಿರುವ ಕಣಿವೆಯಲ್ಲಿ ನಿಯೋಜಿಸಲಾದ ನೂರಾರು ಸರ್ಕಾರಿ ನೌಕರರು ಇಂದು ಜಮ್ಮುವಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ತಮ್ಮ ಜಿಲ್ಲೆಗಳಿಗೆ ತಕ್ಷಣ ತಮ್ಮನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಅವರು ಮೆರವಣಿಗೆ ನಡೆಸಿದ್ದಾರೆ.

ಕಣಿವೆಯಲ್ಲಿ ಮತ್ತೆ ಹರಿದ ನೆತ್ತರು, ಬ್ಯಾಂಕ್‌ಗೆ ನುಗ್ಗಿ ಮ್ಯಾನೇಜರ್ ಹತ್ಯೆಗೈದ ಉಗ್ರರು!
 

ಮಂಗಳವಾರವಷ್ಟೇ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ (Kulgam district) ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ರಜನಿ ಅವರ ಸಹೋದ್ಯೋಗಿಗಳು ಕೂಡ ರಜನಿ ಅವರ ಭಾವಚಿತ್ರಗಳನ್ನು ಹಿಡಿದು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅಲ್ಲದೇ ತಮ್ಮನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದ ಉದ್ಯೋಗಿಗಳು ಪ್ರೆಸ್ ಕ್ಲಬ್‌ನಿಂದ (Press Club) ಅಂಬೇಡ್ಕರ್ ಚೌಕ್‌ವರೆಗೆ (Ambedkar Chowk) ಮೆರವಣಿಗೆ ನಡೆಸಿದರು.

Latest Videos
Follow Us:
Download App:
  • android
  • ios