ಚಿಕಿತ್ಸೆ ಫಲಕಾರಿಯಾಗದೆ ಅಮಿತ್ ಶಾ ಸಹೋದರಿ ನಿಧನ, ಗೃಹ ಸಚಿವರ ಗುಜರಾತ್ ಕಾರ್ಯಕ್ರಮ ರದ್ದು!

ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿರಿಯ ಸಹೋದರಿ ನಿಧನರಾಗಿದ್ದಾರೆ. ಇದರ ಪರಿಣಾಮ ಗುಜರಾತ್‌ನಲ್ಲಿ ಆಯೋಜಿಸಲಾಗಿದ್ದ ಕೆಲ ಕಾರ್ಯಕ್ರಮಗಳನ್ನು ಅಮಿತ್ ಶಾ ರದ್ದುಗೊಳಿಸಿದ್ದಾರೆ. 

Home Minister Amit shah elder sister passes away after pro long illness in Mumbai hospital ckm

ನವದೆಹಲಿ(ಜ.15) ಕೆಲ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ದಾಖಲಾಗಿದ್ದ ಕೇಂದ್ರ ಗೃಹ ಸಚಿವರ ಹಿರಿಯ ಸೋಹದರಿ ರಾಜೇಶ್ವರಿ ಬೆನ್ ಶಾ ಇಂದು ನಿಧನರಾಗಿದ್ದಾರೆ. ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್ವರಿಬೆನ್ ಶಾ ಮುಂಜಾನೆ ನಿಧನರಾಗಿದ್ದಾರೆ. ಸಹೋದರಿ ನಿಧನ ಸುದ್ದಿಯಿಂದ ಗುಜರಾತ್‌ನಲ್ಲಿ ಹಲವು ಕಾರ್ಯಕ್ರಮಗಳಲ್ಲಿದ್ದ ಅಮಿತ್ ಶಾ, ಎಲ್ಲಾ ಕಾರ್ಯಕ್ರಮ ರದ್ದು ಮಾಡಿದ್ದಾರೆ.

60ರ ಅಸುಪಾಸಿನ ರಾಜೇಶ್ವರಿಬೆನ್ ಶಾ ಕಳೆದ ಹಲವು ದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸಿದ್ದರು. ಗಂಭೀರ ಸಮಸ್ಸೆಯಿಂದ ಬಳಲಿದ ರಾಜೇಶ್ವರಿಬೆನ್ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆ ದಾಖಲಾದ ಆರಂಭಿಕ ದಿನಗಳಲ್ಲಿ ಅಲ್ಪ ಚೇತರಿಸಿಕೊಂಡಿದ್ದ ರಾಜೇಶ್ವರಿಬೆನ್ , ಬಳಿಕ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು. ತೀವ್ರ ನಿಘಾಘಟಕದಲ್ಲಿ ರಾಜೇಶ್ವರಿಬೆನ್ ಶಾ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

ಅಮಿತ್‌ ಶಾ ಬಳಿ ರಾಜ್ಯಸಭೆ ಸ್ಥಾನ, 3 ಕಷ್ಟದ ಕ್ಷೇತ್ರ ಕೇಳಿದ ಸೋಮಣ್ಣ..!

ರಾಜೇಶ್ವರಿಬೆನ್ ಶಾ ಪಾರ್ಥೀವ ಶರೀರವನ್ನು ಅಹಮ್ಮದಾಬಾದ್‌ನಲ್ಲಿರುವ ಅವರ ನಿವಾಸಕ್ಕೆ ತರಲಾಗುತ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ ತಲ್ತೇಜ್ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.  ಕಾರ್ಯಕ್ರಮಗಳ ನಿಮಿತ್ತ ಭಾನುವಾರ ಗುಜರಾತ್‌ಗೆ ತೆರಳಿದ್ದ ಅಮಿತ್ ಶಾ, ಮಕರ ಸಂಕ್ರಾತಿ ದಿನ ಗಾಳಿಪಟ ಹಾರಿಸಿ ಸಂಭ್ರಮಪಟ್ಟಿದ್ದರು. ಬಿಜೆಪಿ ಕಾರ್ಯಕರ್ತರ ಜೊತೆ ಮಕರ ಸಂಕ್ರಾತಿ ಆಚರಿಸಿದ ಅಮಿತ್ ಶಾ, ಗಾಂಧಿನಗರ ಜಿಲ್ಲೆಯ ಬನಸ್ಕಾಂತದಲ್ಲಿ ಆಯೋಜಿಸಿದ್ದ 2 ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಇದೀಗ ರಾಜೇಶ್ವರಿಬೆನ್ ಶಾ ನಿವಾಸಕ್ಕೆ ಆಗಮಿಸಿದ್ದಾರೆ.

ಗುಜರಾತ್ ಕಾರ್ಯಕ್ರಮದ ಬಳಿಕ ದೆಹಲಿಗೆ ಆಗಮಿಸಬೇಕಿದ್ದ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರ ಕುರಿತು ಇತ್ತೀಚೆಗೆ ತೆಗೆದುಕೊಂಡ ಆಪರೇಷನ್ ಸರ್ವಶಕ್ತಿ ಹಾಗೂ ಇತರ ಕೆಲ ಯೋಜನೆಗಳ ಕುರಿತು ಮಹತ್ವದ ಸಭೆ ಆಯೋಜಿಲಾಗಿತ್ತು. ಆದರೆ ಗುಜರಾತ್ ಕಾರ್ಯಕ್ರಮಗಳನ್ನು ಮಾತ್ರ ರದ್ದು ಮಾಡಿರುವ ಅಮಿತ್ ಶಾ, ಸಹೋದರಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ದೆಹಲಿಗೆ ಮರಳಲಿದ್ದಾರೆ.

ರೈತರಿಂದ ನೇರವಾಗಿ ತೊಗರಿ ಖರೀದಿಗೆ ವೆಬ್‌ಸೈಟ್‌ ಆರಂಭಿಸಿದ ಅಮಿತ್ ಶಾ: ಹಣ ರೈತರ ಖಾತೆಗೆ ವರ್ಗಾವಣೆ

ಇತ್ತೀಚೆಗೆ ಅಮಿತ್ ಶಾ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ತಡೆಯುವ ಪ್ರಮುಖ ಹೆಜ್ಜೆಯಾಗಿ, ಭಾರತೀಯ ಸೇನೆಯು ‘ಆಪರೇಷನ್ ಸರ್ವಶಕ್ತಿ’ ಎಂಬ ವಿಶೇಷ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಲಾಗಿತ್ತು. ಇತ್ತೀಚೆಗೆ ಗಡಿಯ ಪೀರ್‌ ಪಂಜಾಲ್‌ ಎಂಬಲ್ಲಿ ಒಳನುಸುಳುವಿಕ ಯತ್ನ ಹೆಚ್ಚಿವೆ. ಪೂಂಛ್‌-ರಜೌರಿ ವಲಯದಲ್ಲಿ ಸೇನಾಪಡೆಗಳ ಮೇಲೆ ದಾಳಿಗಳೂ ಹೆಚ್ಚಾಗಿವೆ. ಇತ್ತೀಚೆಗೆ ವಿವಿಧ ಉಗ್ರ ದಾಳಿಗಳಲ್ಲಿ ಸುಮಾರು 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಒಳನುಸುಳುವಿಕೆ ತಡೆಗೆ ಹಾಗೂ ಈಗಾಗಲೇ ನುಗ್ಗಿ ದಾಳಿ ನಡೆಸುತ್ತಿರುವ ಉಗ್ರರ ವಿರುದ್ಧ ‘ಆಪರೇಷನ್‌ ಸರ್ವಶಕ್ತಿ’ ಆರಂಭಕ್ಕೆ ತೀರ್ಮಾನಿಸಲಾಗಿದೆ.

Latest Videos
Follow Us:
Download App:
  • android
  • ios