Asianet Suvarna News Asianet Suvarna News

ಅಮಿತ್‌ ಶಾ ಬಳಿ ರಾಜ್ಯಸಭೆ ಸ್ಥಾನ, 3 ಕಷ್ಟದ ಕ್ಷೇತ್ರ ಕೇಳಿದ ಸೋಮಣ್ಣ..!

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಪಕ್ಷ ಗೆಲ್ಲಲು ಕಷ್ಟವಾಗಬಹುದು ಎನ್ನುವಂಥ 3 ಕ್ಷೇತ್ರಗಳ ಉಸ್ತುವಾರಿಯನ್ನು ತಮಗೆ ವಹಿಸಿ ಎಂದೂ ಅವರು ವರಿಷ್ಠರಿಗೆ ಮನವಿ ಮಾಡಿದ್ದಾರೆ. 'ಯಾವುದೇ ಕಾರಣಕ್ಕೂ ನಿಮ್ಮ ನ್ನು ಬಿಟ್ಟು ಕೊಡುವುದಿಲ್ಲ. ಪಕ್ಷಕ್ಕೆ ನಿಮ್ಮ ಅಗತ್ಯ ವಿದೆ. ಏನೇ ಇದ್ದರೂ ನಾನೇ ಶೀಘ್ರ ರಾಜ್ಯಕ್ಕೆ ಬಂದು ಸಮಸ್ಯೆ ಬಗೆಹರಿಸುವೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮಣ್ಣ ಅವರಿಗೆ ಭರವಸೆ ಕೊಟ್ಟಿದ್ದಾರೆ. 

V Somanna asked to Union Minister Amit Shah for Rajya Sabha Seat 3 difficult Constituencies grg
Author
First Published Jan 14, 2024, 9:08 AM IST

ಬೆಂಗಳೂರು(ಜ.14):  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಆದೇಶಕ್ಕೆ ತಲೆಬಾಗಿ 2 ಕ್ಷೇತ್ರಗಳಿಂದ ಸ್ಪರ್ಧಿಸಿ ದರೂ ಸ್ವಪಕ್ಷೀಯರಿಂದಲೇ ಸೋಲು ಅನುಭವಿ ಸಬೇಕಾಯಿತು ಎಂದು ವರಿಷ್ಠರಿಗೆ ದೂರು ನೀಡಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು ಅದಕ್ಕೆ ಪ್ರತಿಯಾಗಿ ತಮಗೆ ರಾಜ್ಯಸಭಾ ಸದಸ್ಯ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಅಲ್ಲದೆ, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಪಕ್ಷ ಗೆಲ್ಲಲು ಕಷ್ಟವಾಗಬಹುದು ಎನ್ನುವಂಥ 3 ಕ್ಷೇತ್ರಗಳ ಉಸ್ತುವಾರಿಯನ್ನು ತಮಗೆ ವಹಿಸಿ ಎಂದೂ ಅವರು ವರಿಷ್ಠರಿಗೆ ಮನವಿ ಮಾಡಿದ್ದಾರೆ. 'ಯಾವುದೇ ಕಾರಣಕ್ಕೂ ನಿಮ್ಮ ನ್ನು ಬಿಟ್ಟು ಕೊಡುವುದಿಲ್ಲ. ಪಕ್ಷಕ್ಕೆ ನಿಮ್ಮ ಅಗತ್ಯ ವಿದೆ. ಏನೇ ಇದ್ದರೂ ನಾನೇ ಶೀಘ್ರ ರಾಜ್ಯಕ್ಕೆ ಬಂದು ಸಮಸ್ಯೆ ಬಗೆಹರಿಸುವೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮಣ್ಣ ಅವರಿಗೆ ಭರವಸೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಅಸಮಾಧಾನಗೊಂಡು ಪಕ್ಷದ ಚಟುವಟಿಕೆಗಳಿಂದ ಸೋಮಣ್ಣ ಅವರು ದೂರ ಉಳಿದಿದ್ದರು. ಸೋಮಣ್ಣ ಅವರು ಶನಿವಾರ ದೆಹಲಿಯಲ್ಲಿ ಕೇಂದ್ರ ಅಮಿತ್ ತಾಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಬಿಜೆಪಿ ವರಿಷ್ಠರ ಭೇಟಿಗಾಗಿ ಅತೃಪ್ತ ಸೋಮಣ್ಣ ದೆಹಲಿಗೆ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗಳಿಸಲು ಪಕ್ಷ ಸಂಘಟನೆ ಮತ್ತು ಕಾರ್ಯತಂತ್ರ ಕುರಿತು ಚರ್ಚಿಸಿದ ಸೋಮಣ್ಣ ಅವರು ಪಕ್ಷದಲ್ಲಿ ಎಲ್ಲರೂ ಸಂಘಟನೆಯಾಗಿ ಹೋಗಬೇಕು ಮತ್ತು ಕಳೆದ ಬಾರಿ ವಿಧಾನಸಭಾ ಚುನಾವಣೆ ಯಲ್ಲಿ ಆಂತರಿಕ ಬಿಕ್ಕಟ್ಟಿನಿಂದ ಪಕ್ಷದ ಸೋಲುವಂತಾಯಿತು ಎಂಬುದನ್ನು ವಿವರಿಸಿದರು.

ನನ್ನ ಸೋಲಿಗೆ ಸ್ವಪಕ್ಷೀಯರೇ ಕಾರಣ. ಆದರೆ ಆ ಸೋಲಿಗೆ ಕಾರಣರಾದವರ ವಿರುದ್ದ ಇದುವರೆಗೆ ಯಾವುದೇ ಕ್ರಮ ಆಗಿಲ್ಲ ಎಂದು ರಾಷ್ಟ್ರೀಯ ನಾಯಕರು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.
ರಾಜ್ಯದಲ್ಲಿ ಮತದಾರರು ಬಿಜೆಪಿ ಪರ ಒಲವು ಹೊಂದಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಹೋದರೆ ಪಕ್ಷಕ್ಕೆ ಲಾಭ ಖಚಿತ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅಗತ್ಯವಿದೆ ಎನ್ನುವುದನ್ನು ಹೇಳಿದರು ಎನ್ನಲಾಗಿದೆ.
ಪ್ರಧಾನಿನರೇಂದ್ರ ಮೋದಿನಾಯಕತ್ವ, ಕೇಂದ್ರ ಸರ್ಕಾರದ ಯೋಜನೆಗಳನ್ನು ಮನೆ, ಮನೆ ತಲುಪಿಸುವ ಕಾರ್ಯ ಸಾಗಬೇಕು. ಇದರ ಕಾರ್ಯಕ್ಷಮತೆ ಕುರಿತು ಪರಿಶೀಲನಾ ಭರದಿಂದ ಸಮಿತಿ ರಚಿಸಬೇಕು ಎಂಬ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಮಾತನಾಡಿದ ಸೋಮಣ್ಣ ಅವರು, ಅಮಿತ್‌ ಶಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡಿದ್ದೇನೆ. ಮಾತುಕತೆ ತುಂಬಾ ಚೆನ್ನಾಗಿ ನಡೆದಿದೆ. ನಾನುಮುಖ್ಯವಾಹಿನಿಯಲ್ಲಿ ಇರಬೇಕು ಎಂಬ ಮಾತನ್ನು ವರಿಷ್ಠರು ಭೇಟಿ ಬಳಿಕ ಸುದ್ದಿಗಾರರೊಂದಿಗೆ ಎಂದರು. ಇದೇ ವೇಳೆ ನನಗೆ ರಾಜ್ಯ ಸಭೆ ಪ್ರದೇಶ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇನೆ. ಅಲ್ಲದೆ, ರಾಜ್ಯದ ಯಾವುದಾದರೂ ಕಷ್ಟ ಎನ್ನುವಂಥ ಮೂರು ಲೋಕಸಭಾ ಕ್ಷೇತ್ರಗಳ ಜವಾಬ್ದಾರಿ ಕೊಡಿ. ಕೆಲಸ ಮಾಡಿ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

ವಿ.ಸೋಮಣ್ಣ ಜೊತೆ ಮಾತನಾಡಿದ್ದೇನೆ, ಅವರು ಬಿಜೆಪಿ ಪಕ್ಷ ಬಿಡೊಲ್ಲ: ಆರ್.ಅಶೋಕ್

ವರಿಷ್ಠರೊಂದಿಗೆ ನಾನು ಕೆಲವೊಂದು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಎಲ್ಲ ಮಾತುಕತೆಯ ಬಗ್ಗೆ ನಾನು ಈಗ ಬಹಿರಂಗವಾಗಿ ಹೇಳಲು ಆಗಲ್ಲ, ಅಮಿತ್ ಶಾ ಅವರ ಭೇಟಿ ಬಹಳ ಸಮಾಧಾನ ತಂದಿದೆ. ನಿಮ್ಮ ಸೇವೆಯನ್ನು ಬಳಸಿಕೊಳ್ಳುವುದಾಗಿವರಿಷ್ಠರುಹೇಳಿದ್ದಾರೆ ಎಂದು ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸೋಮಣ್ಣ ಅವರು, ಲೋಕಸಭಾ ಚುನಾವಣೆ ಸ್ಪರ್ಧೆಯ ಬಗ್ಗೆ ಹೈಕಮಾಂಡ್ ನಡೆಯುವೆ ಎಂದರು. ತೀರ್ಮಾನದಂತೆ ನಡೆಯುವೆ ಎಂದರು. 

ಗೊಂದಲ ಬಗೆಹರಿಸಲು ಅಮಿತ್ ಶಾ ಶೀಘ್ರ ರಾಜ್ಯಕ್ಕೆ?

ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಿ ರಾಜ್ಯ ಬಿಜೆಪಿಯ ಸಣ್ಣಪುಟ್ಟ ಗೊಂದಲಗಳು ಹಾಗೂ ಸಮಸ್ಯೆಯನ್ನು ಬಗೆಹರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಜಿ ಸಚಿವ ಸೋಮಣ್ಣಗೆ ತಿಳಿಸಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios