ಮೋದಿ ಗ್ಯಾರಂಟಿ ನೋಡಿ ಇಂಡಿಯಾ ಕೂಟಕ್ಕೆ ನಡುಕ ಶುರುವಾಗಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌  ಜೂ.4ರ ಬಳಿಕ ಮೋದಿ ರಜೆಯ ಮೇಲೆ ತೆರಳುವುದು ಅನಿವಾರ್ಯ. ಇದು ದೇಶದ ಜನರ ಗ್ಯಾರಂಟಿ ಎಂದು ಪ್ರತಿಕ್ರಿಯಿಸಿದೆ.

ನವದೆಹಲಿ: ‘ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್‌ನ ಛಾಯೆ ಕಾಣುತ್ತಿದೆ’ ಎಂಬ ಹಾಗೂ ‘ಮೋದಿ ಗ್ಯಾರಂಟಿ ನೋಡಿ ಇಂಡಿಯಾ ಕೂಟಕ್ಕೆ ನಡುಕ ಶುರುವಾಗಿದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ‘ನಮ್ಮ ಗ್ಯಾರಂಟಿ ಯೋಜನೆ ನೋಡಿ ಮೋದಿ ತತ್ತರಿಸಿ ಹೋಗಿದ್ದಾರೆ. ಹೀಗಾಗಿಯೇ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್‌ ವಿರುದ್ಧ ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆ’ ಎಂದು ಹೇಳಿದೆ. ಅಲ್ಲದೆ ಜೂ.4ರ ಬಳಿಕ ಮೋದಿ ರಜೆಯ ಮೇಲೆ ತೆರಳುವುದು ಅನಿವಾರ್ಯ. ಇದು ದೇಶದ ಜನರ ಗ್ಯಾರಂಟಿ ಎಂದು ಹೇಳಿದೆ.

ಭಾನುವಾರ ಪ್ರತಿಕ್ರಿಯೆ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ದೇಶದ ಜನತೆ ಇದೀಗ ಮೋದಿಯ ಸುಳ್ಳುಗಳಿಂದ ಬೇಸತ್ತು ಹೋಗಿದ್ದಾರೆ. ಕಳೆದ 10 ವರ್ಷಗಳಿಂದ ನಡೆದ ಅನ್ಯಾಯಕ್ಕೆ ಒಳಗಾಗಿದ್ದ ಜನರಲ್ಲಿ ಇದೀಗ ಕಾಂಗ್ರೆಸ್‌ ಘೋಷಿಸಿರುವ ಪಂಚ ನ್ಯಾಯ ಮತ್ತು ಪಚ್ಚೀಸ್‌ ಗ್ಯಾರಂಟಿ ಭರವಸೆ ಹೊಸ ಆಶಾಭಾವನೆ ಮೂಡಿಸಿದೆ. ಕಾಂಗ್ರೆಸ್‌ನ ಗ್ಯಾರಂಟಿ, ಈ ಹೊತ್ತಿನ ಜನರ ಅಗತ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಸಂಕಷ್ಟದಲ್ಲಿರುವ ದೇಶದ ಜನರ ಧ್ವನಿಯಾಗಿದೆ’ ಎಂದು ಹೇಳಿದ್ದಾರೆ.

ತರಗತಿ ಚುನಾವಣೆಗೂ ನಿಲ್ಲದವರು ಕಾಂಗ್ರೆಸ್ ಮುನ್ನಡೆಸುತ್ತಿದ್ದಾರೆ, ಜೈರಾಮ್‌ಗೆ ಗೌರವ್ ಟಾಂಗ್!

ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಅನಿಸಿಕೆ ತಿಳಿಸಿ: ಜನತೆಗೆ ರಾಹುಲ್ ಮನವಿ

ನವದೆಹಲಿ: ಕಾಂಗ್ರೆಸ್‌ ಪ್ರಣಾಳಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಮಾಡಿದ್ದು, ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಪ್ರತಿಯೊಬ್ಬ ಭಾರತೀಯರ ಧ್ವನಿಯಾಗಿದೆ. ಆದ್ದರಿಂದ ಸಾರ್ವಜನಿಕರು ಪ್ರಣಾಳಿಕೆಗಳ ಬಗ್ಗೆ ಏನಂದುಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಈ ಪ್ರತಿಕ್ರಿಯೆಗಳನ್ನು ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ. 25 ಗ್ಯಾರಂಟಿಗಳ ಪ್ರಣಾಳಿಕೆಯನ್ನು ಕಾಂಗ್ರೆಸ್ ಮೊನ್ನೆ ಬಿಡುಗಡೆ ಮಾಡಿತ್ತು.

ಚುನಾವಣೆಯಲ್ಲಿ ಸೋತರೆ ರಾಹುಲ್‌ ಹಿಂದೆ ಸರಿಯಲಿ: ಪ್ರಶಾಂತ್‌ ಕಿಶೋರ್‌

ನವದೆಹಲಿ: ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸೋಲು ಕಂಡರೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಾಯಕತ್ವದಿಂದ ಹಿಂದಕ್ಕೆ ಸರಿಯಬೇಕು ಎಂದು ರಾಜಕೀಯ ತಜ್ಞ ಪ್ರಶಾಂತ್‌ ಕಿಶೋರ್‌ ಆಗ್ರಹಿಸಿದ್ದಾರೆ.

ಪಿಟಿಐನ ಸಂಪಾದಕರೊಂದಿಗೆ ನಡೆದ ಸಂವಾದದಲ್ಲಿ ಮಾತಾನಾಡಿದ ಅವರು, ಈ ಹತ್ತು ವರ್ಷಗಳಲ್ಲಿ ಕಾಂಗ್ರೆಸ್‌ ಮಾಡಿದ ಕಾರ್ಯಗಳಿಂದ ಯಶ ಕಾಣದಿದ್ದರೆ ಪಕ್ಷದ ಮತ್ತು ನಾಯಕರ ಅಸಮರ್ಥತೆಯನ್ನು ಸೂಚಿಸುತ್ತದೆ. ಆದ್ದರಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲದಿದ್ದರೆ ರಾಹುಲ್‌ ಗಾಂಧಿ ಅವರು ತಮ್ಮ ನಾಯಕತ್ವ ಸ್ಥಾನದಿಂದ ಸರಿಯಬೇಕು ಎಂದರು.

ಭಾರತ ಸರ್ಕಾರಕ್ಕಾಗಿ ಕೆಲಸ ಮಾಡಿದ್ದೇನೆ, ಯಾವುದೇ ಕುಟುಂಬಕ್ಕೆ ಕೆಲಸ ಮಾಡಿಲ್ಲ: ಜೈರಾಮ್‌ ರಮೇಶ್‌ಗೆ ಉತ್ತರಿಸಿದ ಎಸ್‌.ಜೈಶಂಕರ್‌!

ಇದರಿಂದ ಬೇರೆಯವರಿಗೆ ಅವಕಾಶ ನೀಡಿದಂತಾಗುತ್ತದೆ. 1991ರಲ್ಲಿ ರಾಜೀವ್‌ ಗಾಂಧಿ ಅವರ ಮರಣದ ನಂತರ ಸೋನಿಯಾ ಗಾಂಧಿ ಅವರು ತಮ್ಮ ನಾಯಕತ್ವವನ್ನು ಪಿ.ವಿ. ನರಸಿಂಹರಾವ್‌ ಅವರಿಗೆ ವಹಿಸಿದ್ದರು. ಇದರಂತೆ ರಾಹುಲ್‌ ಗಾಂಧಿ ಕೂಡ ನಾಯಕತ್ವವನ್ನು ಬೇರೆಯವರಿಗೆ ಬಿಟ್ಟು ಕೊಡಬೇಕು ಎಂದು ಸಲಹೆ ನೀಡಿದರು.