ಭಾರತ ಸರ್ಕಾರಕ್ಕಾಗಿ ಕೆಲಸ ಮಾಡಿದ್ದೇನೆ, ಯಾವುದೇ ಕುಟುಂಬಕ್ಕೆ ಕೆಲಸ ಮಾಡಿಲ್ಲ: ಜೈರಾಮ್ ರಮೇಶ್‌ಗೆ ಉತ್ತರಿಸಿದ ಎಸ್.ಜೈಶಂಕರ್!
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಇಲಾಖೆಯ ಸಚಿವ ಎಸ್. ಜೈಶಂಕರ್, ನಾನು ಭಾರತ ಸರ್ಕಾರಕ್ಕಾಗಿ ಕೆಲಸ ಮಾಡಿದ್ದೇನೆ, ಯಾವುದೇ ಕುಟುಂಬಕ್ಕಾಗಿ ಕೆಲಸ ಮಾಡಿಲ್ಲ ಎಂದಿದ್ದಾರೆ.
ನವದೆಹಲಿ (ಜ.5): ಎಸ್. ಜೈಶಂಕರ್ ಅವರು ಎಲ್ಲಾ ರೀತಿಯ ಬೌದ್ಧಿಕ ಪ್ರಾಮಾಣಿಕತೆ ಮತ್ತು ವಸ್ತುನಿಷ್ಠತೆಯನ್ನು ಕಳೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ ಒಂದು ತಿಂಗಳ ಬಳಿಕ ಇದಕ್ಕೆ ಉತ್ತರ ನೀಡಿರುವ ವಿದೇಶಾಂಗ ವ್ಯವಹಾರಗಳ ಇಲಾಖೆಯ ಸಚಿವ, ನಾನು ಭಾರತ ಸರ್ಕಾರಕ್ಕಾಗಿ ಕೆಲಸ ಮಾಡಿದ್ದೇನೆ. ನಾನು ಯಾವುದೇ ಕುಟುಂಬಕ್ಕಾಗಿ ಕೆಲಸ ಮಾಡಿಲ್ಲ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ. ತಮ್ಮ ಹೊಸ ಪುಸ್ತಕ ‘ವೈ ಭಾರತ್ ಮ್ಯಾಟರ್ಸ್’ ಕುರಿತ ಸಂವಾದದಲ್ಲಿ ಮಾತನಾಡಿದ ಕೇಂದ್ರ ಸಚಿವರು, 'ಸರ್ಕಾರಕ್ಕಾಗಿ ಕೆಲಸ ಮಾಡಿದ ಹೆಚ್ಚಿನ ಜನರು ತಮ್ಮ ಹುದ್ದೆಗಳನ್ನು ಅರ್ಹವಾಗಿಯೇ ಗಳಿಸಿದ್ದಾರೆ ಎಂದು ಭಾವಿಸುತ್ತೇನೆ' ಎಂದು ತಿಳಿಸಿದ್ದಾರೆ. "ಆದರೆ ಒಂದು ಕುಟುಂಬಕ್ಕಾಗಿ ಕೆಲಸ ಮಾಡುವವರು, ಎಲ್ಲರೂ ಕುಟುಂಬಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಇನ್ನೂ ಭಾವಿಸುತ್ತಾರೆ" ಎಂದು ಅವರು ಹೇಳುವ ಮೂಲಕ ಜೈರಾಮ್ ರಮೇಶ್ ಹಾಗೂ ಗಾಂಧಿ ಫ್ಯಾಮಿಲಿ ಬಗ್ಗೆ ಕಿಡಿಕಾರಿದ್ದಾರೆ.
ನಾನು ಯಾವುದೇ ಸರ್ಕಾರದಲ್ಲಿ ಪಡೆದುಕೊಂಡಿರುವ ಪೋಸ್ಟ್‌ಅನ್ನು ನಾನು ಅರ್ಹವಾಗಿ ಪಡೆದುಕೊಂಡಿದ್ದೇನೆ. ಯಾವುದೇ ಕುಟುಂಬಕ್ಕೆ ಸೇವೆ ಮಾಡಿ ಈ ಹುದ್ದೆ ಪಡೆದುಕೊಂಡಿಲ್ಲ ಎಂದಿದ್ದಾರೆ. ಜನವರಿ 4 ರಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದ ಗ್ರೆಸ್ ಪಕ್ಷದ ಸಂವಹನದ ಪ್ರಧಾನ ಕಾರ್ಯದರ್ಶಿ ರಮೇಶ್, ಜೈಶಂಕರ್ ಅವರು, ನೆವರು ಅವರನ್ನು ಟೀಕೆ ಮಾಡುವ ನಿಟ್ಟಿನಲ್ಲಿ ಪ್ರಧಾನಿಗಿಂತ ಹೆಚ್ಚಿನ ಮಟ್ಟದಲ್ಲಿ ಜೈಶಂಕರ್ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
"ಪ್ರತಿ ಬಾರಿಯೂ ನಾನು ನೆಹರೂ ಕುರಿತು ವಿದ್ವತ್ಪೂರ್ಣ ಮತ್ತು ದಡ್ಡ ವಿದೇಶಾಂಗ ವ್ಯವಹಾರಗಳ ಸಚಿವರು ನೀಡಿದ ಹೇಳಿಕೆಗಳನ್ನು ಓದಿದಾಗ, ಅವರು ತಮ್ಮ ಐಷಾರಾಮಿ ಪೋಸ್ಟಿಂಗ್‌ಗಳಿಗಾಗಿ ನೆಹರೂ ಕುಟುಂಬದ ಸುತ್ತಲೂ ಮಾಡಿದ ಹಲವಾರು ಕೆಲಸಗಳನ್ನು ಮಾತ್ರ ನಾನು ನೆನಪಿಸಿಕೊಳ್ಳುತ್ತೇನೆ. ಅವರು ಪ್ರಧಾನಿಯಿಂದ ಇನ್ನಷ್ಟು ಕೃತಜ್ಞತೆ ಪಡೆಯಲು ನೆಹರೂ ಟೀಕೆಯಲ್ಲಿ ತೊಡಗಿಸಿಕೊಳ್ಳಬೇಕಾದ ನವ-ಮತಾಂತರ ಎಂದು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಹಾಗೆ ಮಾಡುವಾಗ, ಅವರು ಎಲ್ಲಾ ಬೌದ್ಧಿಕ ಪ್ರಾಮಾಣಿಕತೆ ಮತ್ತು ವಸ್ತುನಿಷ್ಠತೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದರು. ಅವರು ಬಾಗುತ್ತಾರೆ ಎಂದು ನಿರೀಕ್ಷೆ ಮಾಡಿದ್ದೇವೆ. ಅವರು ಈಗ ತೆವಳುತ್ತಿದ್ದಾರೆ. ಪ್ರಾಮಾಣಿಕತೆ ಎನ್ನುವುದು ಕುಗ್ಗುತ್ತಿದೆ. ನೋಡಲು ಬೇಸರವಾಗುತ್ತದೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದರು.
ಬೆಂಗಳೂರು ದಕ್ಷಿಣ ಲೋಕಸಭಾ ಕದನ: ಬಿಜೆಪಿ ಟಿಕೆಟ್‌ಗೆ ತೇಜಸ್ವಿ, ಜೈಶಂಕರ್ ಪೈಪೋಟಿ?
ಸಂದರ್ಶನದಲ್ಲಿ, ವಿದೇಶಾಂಗ ಸಚಿವರು ವಿದೇಶಾಂಗ ನೀತಿ ವಿಷಯಗಳ ಬಗ್ಗೆ ಮಾತನಾಡಿದ್ದಯ, ಭಾರತ-ಮಾಲ್ಡೀವ್ಸ್ ನಡುವಿನ ವಿವಾದ, ಚೀನಾ, ಪಾಕಿಸ್ತಾನ ಮತ್ತು ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಮರಳುವ ಸಾಧ್ಯತೆಯ ಬಗ್ಗೆಯೂ ಮಾತನಾಡಿದ್ದಾರೆ.
ಭಾರತದ ವಿದೇಶಾಂಗ ನೀತಿಗೆ ಹ್ಯಾಟ್ಸಾಫ್: ಮತ್ತೆ ಮೋದಿ ಹಾಡಿ ಹೊಗಳಿದ ರಷ್ಯಾ ಅಧ್ಯಕ್ಷ ಪುಟಿನ್