ತರಗತಿ ಚುನಾವಣೆಗೂ ನಿಲ್ಲದವರು ಕಾಂಗ್ರೆಸ್ ಮುನ್ನಡೆಸುತ್ತಿದ್ದಾರೆ, ಜೈರಾಮ್‌ಗೆ ಗೌರವ್ ಟಾಂಗ್!
ಬಿಜೆಪಿ ಸೇರಿಕೊಂಡ ಬೆನ್ನಲ್ಲೇ ಗೌರವ್ ವಲ್ಲಬ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ಜೈರಾಮ್ ರಮೇಶ್ ಉದ್ದೇಶಿಸಿ ಪರೋಕ್ಷ ಟಾಂಗ್ ನೀಡಿರುವ ವಲ್ಲಬ್, ಶಾಲಾ ತರಗತಿ ಸ್ಥಾನಕ್ಕೂ ಸ್ಪರ್ಧಿಸದ ಕೆಲ ನಾಯಕರು ಕಾಂಗ್ರೆಸ್ ಪಕ್ಷ ಮುನ್ನಡೆಸುತ್ತಿದ್ದಾರೆ ಎಂದಿದ್ದಾರೆ.
ನವದೆಹಲಿ(ಏ.07) ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ನಾಯಕ ಗೌರವ್ ವಲ್ಲಬ್ ನೀಡಿದ ಹೇಳಿಕೆ ಭಾರಿ ಸಂಚಲನ ತಂದಿದೆ. ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಗೌರವ್ ವಲ್ಲಬ್, ಕಾಂಗ್ರೆಸ್ ಪಕ್ಷ ಹೀನಾಯ ಸ್ಥಿತಿಗೆ ತಲುಪಲು ಅಲ್ಲಿರುವ ನಾಯಕರೇ ಕಾರಣ ಎಂದಿದ್ದಾರೆ. ಕೆಲ ನಾಯಕರು ಕನಿಷ್ಠ ತಮ್ಮ ಶಾಲಾ ಜೀವನದಲ್ಲಿ ತರಗತಿ ಮಾನಿಟರ್ ಸ್ಥಾನಕ್ಕೂ ಸ್ಪರ್ಧಿಸಿಲ್ಲ. ಇಂತವರು ಕಾಂಗ್ರೆಸ್ ಪಾರ್ಟಿಯನ್ನು ಮುನ್ನಡೆಸುತ್ತಿದ್ದಾರೆ ಎಂದು ಗೌರವ್ ವಲ್ಲಬ್ ಹೇಳಿದ್ದಾರೆ. ಗೌರವ್ ಪರೋಕ್ಷವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಾರ್ಟಿಗೆ ಸೇರಿಕೊಂಡಾಗ ಪಕ್ಷದಲ್ಲಿ 42 ಸಂಸದರಿದ್ದರು. ತಮ್ಮ ಆಲೋಚನೆ, ಅಭಿಪ್ರಾಯಗಳನ್ನು ಕಾಂಗ್ರೆಸ್ ಪಾರ್ಟಿ ಗೌರವಿಸಲಿದೆ ಎಂದು ಭಾವಿಸಿದ್ದರು. ಆದರೆ ಹಾಗಾಗಲಿಲ್ಲ ಎಂದು ಗೌರವ್ ವಲ್ಲಬ್ ಹೇಳಿದ್ದಾರೆ. ಉದಾಹರಣೆಗೆ ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪ್ರಣಾಳಿಕೆಯನ್ನು ಒಬ್ಬ ನಾಯಕ ಮಾಡುತ್ತಿದ್ದಾರೆ. ಈ ನಾಯಕರ ಆಲೋಚನೆ, ಅಭಿಪ್ರಾಯ, ದೇಶದ ಪ್ರಗತಿಬೇಕಾದ ಉತ್ತಮ ಐಡಿಯಾಗಳಿದ್ದರೆ, ಪಕ್ಷ ಯಾಕೆ ಈ ಪರಿಸ್ಥಿತಿಯಲ್ಲಿರುತ್ತಿತ್ತು ಎಂದು ಗೌರವ್ ಪ್ರಶ್ನಿಸಿದ್ದಾರೆ.
'ಸನಾತನ ವಿರೋಧಿ ಘೋಷಣೆ ಕೂಗಲಾರೆ..' ಖರ್ಗೆಗೆ ರಾಜೀನಾಮೆ ಪತ್ರ ಸಲ್ಲಿಸಿ ಬಿಜೆಪಿ ಸೇರಿದ ಗೌರವ್ ವಲ್ಲಭ್!
ಕಾಂಗ್ರೆಸ್ ಪಕ್ಷದಲ್ಲಿ ವಕ್ತಾರನಾಗಿದ್ದ ಗೌರವ್ ವಲ್ಲಬ್, ಟಿವಿ ಚರ್ಚೆಯಲ್ಲಿ ಪ್ರತಿ ದಿನ ಪಾಲ್ಗೊಳ್ಳುತ್ತಿದದ್ ಗೌರವ್ ವಲ್ಲಬ್ ಪಕ್ಷವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಈ ಕುರಿತು ಮಾತನಾಡಿದ ಗೌರವ್, ಕಾಂಗ್ರೆಸ್ ಆಲೋಚನೆ ಹಾಗೂ ಅವರ ನಡೆ ಅಸಮಾಧಾನಕ್ಕೆ ಕಾರಣಾಗಿತ್ತು. ಬಜೆಟ್ ವಿರುದದ್ಧ ಸುದ್ದಿಗೋಷ್ಠಿ ನಡೆಸುವಂತೆ ಕಾಂಗ್ರೆಸ್ ಸೂಚಿಸಿತ್ತು. ಆದರೆ ನಾನು ಮಾಡಲಿಲ್ಲ. ಕಾಂಗ್ರೆಸ್ ನಾಯಕರು ಆಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡುವವರೆಗೂ ಸುದ್ದಿಗೋಷ್ಠಿ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೆ. ಆದರೂ ಕಾಂಗ್ರೆಸ್ ನಾಯಕರು ಪಾಠ ಕಲಿಯಲಿಲ್ಲ ಎಂದು ಗೌರವ್ ಹೇಳಿದ್ದಾರೆ.
ಅದಾನಿ ವಿರುದ್ದ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದ್ದೆ. ಆದರೆ ಸೆಬಿ ಕ್ಲಿನ್ ಚಿಟ್ ನೀಡಿದ ಬಳಿಕ ಸುದ್ದಿಗೋಷ್ಠಿ ಮಾಡಿಲ್ಲ. ಕಾಂಗ್ರೆಸ್ ಪಕ್ಷವನ್ನು ನಾಯಕರ ಪರ್ಸನಲ್ ಅಸಿಸ್ಟೆಂಟ್ ಮುನ್ನಡೆಸುತ್ತಿದ್ದಾರೆ. ಈ ಅಸಿಸ್ಟೆಂಟ್ ತಮ್ಮ ಜೀವಮಾನದಲ್ಲಿ ಒಂದೇ ಒಂದು ಚುನಾವಣೆ ನಿಂತಿಲ್ಲ, ಗೆದ್ದಿಲ್ಲ. ಈ ನಾಯಕರಿಗೆ ಉತ್ತರ ಪ್ರದೇಶ ಹಾಗೂ ಬಿಹಾರ ಎರಡೂ ಬೇರೆ ಬೇರೆ ರಾಜ್ಯ ಅನ್ನೋದೇ ಗೊತ್ತಿಲ್ಲ ಎಂದು ಗೌರವ್ ವಲ್ಲಬ್ ಹೇಳಿದ್ದಾರೆ.
Lok Sabha Election 2024: ಬಿಜೆಪಿಯಲ್ಲಿ ಮೋದಿ ಬಿಟ್ಟರೆ ಬೇರೆ ನಾಯಕರಿಲ್ಲ: ನಾಡಗೌಡ
ನಾನು ಕಾಲೇಜು ದಿನಗಳಲ್ಲಿ ಕಾಂಗ್ರೆಸ್ ವಕ್ತಾರರಾಗಿದ್ದ ಒರ್ವ ನಾಯಕ ಇದೀಗ ಸಂವಹನ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇದೀಗ ಕಾಂಗ್ರೆಸ್ ಪಾರ್ಟಿಯನ್ನೇ ಮುನ್ನಡೆಸುತ್ತಿದ್ದಾರೆ. ಕಾಂಗ್ರೆಸ್ ಸಿದ್ಧಾಂತಗಳಲ್ಲಿ ಅವರಿಗೆ ಆಸಕ್ತಿ ಇಲ್ಲ, ಕೇವಲ ರಾಜ್ಯಸಭೆ ಸ್ಥಾನದ ಮೇಲೆ ಮಾತ್ರ ಅವರ ದೃಷ್ಠಿ ಎಂದು ಗೌರವ್ ವಲ್ಲಬ್ ಜೈರಾಮ್ ರಮೇಶ್ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ.