Asianet Suvarna News Asianet Suvarna News

ಹಿಂದುತ್ವ ಎನ್ನುವುದು ಎಡವೂ ಅಲ್ಲ, ಬಲವೂ ಅಲ್ಲ: ದತ್ತಾತ್ರೇಯ ಹೊಸಬಾಳೆ!

-ತರಬೇತಿ ಶಿಬಿರಗಳಲ್ಲಿ ನಾವು ಬಲಪಂಥೀಯರು ಎಂದು ಯಾವತ್ತೂ ಹೇಳಿಲ್ಲ
-ಹಿಂದುತ್ವದ ಸಿದ್ಧಾಂತ ಎಡವೂ ಅಲ್ಲ, ಬಲವೂ ಅಲ್ಲ  
-ನಮ್ಮ ವ್ಯವಸ್ಥೆಯ ಭಾರತೀಕರಣ ಅತ್ಯವಶ್ಯ : ದತ್ತಾತ್ರೇಯ ಹೊಸಬಾಳೆ

Hindutva Is Neither Left Nor Right said Senior RSS Leader Dattatreya Hosabale
Author
Bengaluru, First Published Oct 23, 2021, 12:02 PM IST

ನವದೆಹಲಿ (ಅ. 22 ) : 'ನಮ್ಮ ತರಬೇತಿ ಶಿಬಿರಗಳಲ್ಲಿ ಆರ್‌ಎಸ್‌ಎಸ್ (RSS) ಬಲಪಂಥೀಯ ಎಂದು ಯಾವತ್ತೂ ಹೇಳಿಲ್ಲ. ಹಿಂದುತ್ವದ ಸಿದ್ಧಾಂತ ಎಡವೂ ಅಲ್ಲ, ಬಲವೂ ಅಲ್ಲ' ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ (Dattatreya Hosabale) ಹೇಳಿದ್ದಾರೆ.  ಶುಕ್ರವಾರ ಆರ್‌ಎಸ್‌ಎಸ್ ಮುಖಂಡ ರಾಮ್‌ ಮಾಧವ್‌ರವರ (Ram Madhav) 'The Hindutva Paradigm: Integral Humanism and Quest for a Non-Western Worldview'ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಒಂದು ರಾಷ್ಟ್ರದ ದೀರ್ಘಾಯುಷ್ಯಕ್ಕಾಗಿ ಸಾಂಸ್ಕೃತಿಕ ಒಗ್ಗಟ್ಟು (Cultural Cohesion) ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆ (Cultural Nationalism) ಅತ್ಯಗತ್ಯ. ಯಾವುದೇ ಬಲವಂತದ ವಿಭಜನೆ ಅಥವಾ ರಾಷ್ಟ್ರಗಳ ಏಕೀಕರಣವು  ದೀರ್ಘ ಕಾಲ ಉಳಿಯುವುದಿಲ್ಲ ಎಂದು ಅವರು ಹೇಳಿದ್ದಾರೆ. 

ಇಂದಿನಿಂದ ಅಮಿತ್‌ ಶಾ 3 ದಿನದ ಕಾಶ್ಮೀರ ಪ್ರವಾಸ!

ಹಿಂದುತ್ವದ ಸಿದ್ಧಾಂತ ಎಡವೂ ಅಲ್ಲ, ಬಲವೂ ಅಲ್ಲ!

ಜಗತ್ತು ಎಡಕ್ಕೆ ಹೋಗಿದೆ..ಅಥವಾ ಅದನ್ನು ಬಲವಂತವಾಗಿ ಎಡಕ್ಕೆ ಹೋಗುವಂತೆ ಮಾಡಲಾಗಿದೆ. ಆದರೆ ಈಗ ಪರಿಸ್ಥಿತಿ ಬೇರೆಯಾಗಿದೆ. ಜಗತ್ತು ಮತ್ತೆ ಬಲಕ್ಕೆ ಬರುತ್ತಿದೆ. ಹಾಗಾಗಿ ಜಗತ್ತು ಈಗ ಕೇಂದ್ರದಲ್ಲಿದೆ. ಇದುವೇ ಹಿಂದುತ್ವದ ಸಿದ್ಧಾಂತವಾಗಿದೆ. ಹಾಗಾಗಿ ಹಿಂದುತ್ವ ಎಂಬುದು ಎಡವೂ ಅಲ್ಲ, ಬಲವೂ ಅಲ್ಲ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ನಾನು ಆರ್‌ಎಸ್‌ಎಸ್ ಮೂಲದಿಂದ ಬಂದವನು. ನಮ್ಮ ತರಬೇತಿ ಶಿಬಿರಗಳಲ್ಲಿ ಆರ್‌ಎಸ್‌ಎಸ್ ಬಲಪಂಥೀಯ ಎಂದು ಯಾವತ್ತೂ ಹೇಳಿಲ್ಲ. ನಮ್ಮ ಬಹುತೇಕ ಅಭಿಪ್ರಾಯಗಳು  ಎಡಪಂಥೀಯ ಕೂಡ ಆಗಿರುತ್ತವೆ. ಇವೆಲ್ಲವೂ ಮಾನವರ ಅನುಭವಗಳೇ ಅಗಿರುವುದರಿಂದ, ಎಡಪಂಥೀಯ ಮತ್ತು ಬಲಪಂಥೀಯ ಎರಡೂ ಸಿದ್ಧಾಂತಗಳಿಗೆ ಇಲ್ಲಿ ಅವಕಾಶವಿದೆ. 

ನಮ್ಮ ವ್ಯವಸ್ಥೆಯ ಭಾರತೀಕರಣ ಅತ್ಯವಶ್ಯ!

ಪೂರ್ವ ಹಾಗೂ ಪಶ್ಚಿಮದ  ಭೌಗೋಳಿಕ ಮತ್ತು ರಾಜಕೀಯ (Geographical and Political) ವಿಭಜನೆ, ಜಗತ್ತಿನಲ್ಲಿ  ಖಾಸಗೀಕರಣ (Privatisation) ಉದಾರೀಕರಣ (Liberalisation) ಮತ್ತು ಜಾಗತೀಕರಣದ (Globalisation) ನಂತರ ಇಲ್ಲದಂತಾಗಿದೆ. ಭಾರತೀಯ ಆಡಳಿತ ವ್ಯವಸ್ಥೆ ಮೇಲೆ ಬ್ರೀಟಿಷ ಮತ್ತು ಇತರರ ಆಡಳಿತದ ಪರಿಣಾಮದ ಬಗ್ಗೆ ಮಾತಾನಾಡುತ್ತಾ ಆ ವ್ಯವಸ್ಥೆ ಪ್ರಸ್ತುತತೆಯನ್ನು ಕಳೆದುಕೊಂಡಿದ್ದರು ಭಾರತದಲ್ಲಿ ಅದು ಇನ್ನೂ ಜೀವಂತವಾಗಿದೆ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದರು.

ಒಂದಾದ ದೇಶ, ಕಣ್ಣಿಗೆ ಕಾಣದ ವೈರಿ ವಿರುದ್ಧ ಹೋರಾಟ: ಜಾಗತಿಕ ದಾಖಲೆ ಮಾಡಿದ ಭಾರತ!

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ (N V Ramana) ಅವರು ಇತ್ತೀಚೆಗೆ "ನಮ್ಮ ಕಾನೂನು ವ್ಯವಸ್ಥೆಯ ಭಾರತೀಕರಣ" ದ ಕುರಿತು ನೀಡಿದ ಹೇಳಿಕೆಯನ್ನು ಕೂಡ ಅವರು ಉಲ್ಲೇಖಿಸಿದ್ದಾರೆ. ನಮ್ಮ ವ್ಯವಸ್ಥೆಯ ಭಾರತೀಕರಣ ಆಗುವವರೆಗೂ ನಮಗೆ ಪೂರ್ಣ ಸ್ವಾತಂತ್ರ್ಯ ಸಿಗುವುದಿಲ್ಲ ಎಂದು ಹೇಳಿದ ಅವರು ಮಹಾತ್ಮ ಗಾಂಧಿಯವರ (Mahatma Gandhi) ಹಿಂದ್ ಸ್ವರಾಜ್ ಅನ್ನು ಉಲ್ಲೇಖಿಸಿದರು ಮತ್ತು ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ (Ram Manohar Lohiya) ಅವರನ್ನು ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಆರ್ಟಿಕಲ್ 370 ಮೂಲಕ ಭಯೋತ್ಪಾದನೆ ಬಿತ್ತಿದ್ದೇ ಕಾಂಗ್ರೆಸ್; 1952ರ ಘಟನೆ ನೆನೆಪಿಸಿದ ಯೋಗಿ!

ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಿ

ತಮ್ಮ ಪುಸ್ತಕದ ಕುರಿತು ಮಾತನಾಡಿದ ರಾಮ್ ಮಾಧವ್, ಪುಸ್ತಕವು ಪಾಶ್ಚಿಮಾತ್ಯ-ವಿರೋಧಿ ದೃಷ್ಟಿಕೋನವನ್ನು ಪ್ರಸ್ತುತಪಡಿಸುವುದಿಲ್ಲ ಮತ್ತು ಭಾರತದ ಉಲ್ಲೇಖದ ದೃಷ್ಟಿಕೋನದಿಂದ ವಿಶ್ವ ದೃಷ್ಟಿಕೋನವನ್ನು ಅನ್ವೇಷಿಸುವ ಸಮಯ ಬಂದಿದೆ ಎಂದು ಹೇಳಿದರು. ಅಲ್ಲದೇ ಪ್ರತಿಯೊಬ್ಬರು ಹೊಸ ದೃಷ್ಟಿಕೋನ ಮತ್ತು ಆಲೋಚನೆಗಳಿಗೆ ತೆರೆದುಕೊಳ್ಳಬೇಕು ಎಂದು ಸಲಹೆ ನೀಡಿದರು. "ನಾವು ಹೊರಗಿನಿಂದ ಪಡೆದ ಆಲೋಚನೆಗಳನ್ನು ಸ್ವೀಕರಿಸಿ ಅವುಗಳನ್ನು ಕಾರ್ಯಗತಗೊಳಿಸಬೇಕು, ಆದರೆ ಈ ನೆಲವೂ ಕೊಡುಗೆ ನೀಡಿದ ಕೆಲವು ವಿಚಾರಗಳಿವೆ ಮತ್ತು ಅವುಗಳ ಕಡೆಗೆ ತಿರುಗಬೇಕು" ಎಂದು ಹೇಳಿದರು.

Follow Us:
Download App:
  • android
  • ios