Asianet Suvarna News Asianet Suvarna News

ಹಿಂದೂಗಳು ಒಬ್ಬರನ್ನು ಮದುವೆಯಾಗಿ ಮೂವರನ್ನು ಇಟ್ಕೊಂಡಿರ್ತಾರೆ, AIMIM ಶೌಕತ್ ಅಲಿ ವಿವಾದ!

ಹಿಂದೂ ವಿವಾಹ ಕುರಿತು ವಿವಾದಾತ್ಮ ಹೇಳಿಕೆ ನೀಡಿದ AIMIM ಪಕ್ಷದ ಅಧ್ಯಕ್ಷನ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಿಂದೂಗಳು ಒಬ್ಬರನ್ನು ಮದುವೆಯಾಗುತ್ತಾರೆ. ಮೂವರು ಪ್ರೇಯಸಿರನ್ನು ಇಟ್ಟುಕೊಂಡಿರುತ್ತಾರೆ. ಯಾರಿಗೂ ಗೌರವ ಕೊಡುವುದಿಲ್ಲ ಎಂದಿದ್ದಾರೆ.

Hindus marry one and have three mistresses Uttar Pradesh AIMIM leader Shaukat Ali  controversial remark on Hindu marriage ckm
Author
First Published Oct 15, 2022, 5:17 PM IST

ಲಖನೌ(ಅ.15): ಹಿಂದೂ ವಿವಾಹ ಪದ್ಧತಿ ಕುರಿತು ಉತ್ತರ ಪ್ರದೇಶ AIMIM ಪಕ್ಷದ ಅಧ್ಯಕ್ಷ ಶೌಕತ್ ಅಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಾವು ಇಬ್ಬರನ್ನು ಮದುವೆಯಾಗುತ್ತೇವೆ. ಇಬ್ಬರಿಗೂ ಸಮಾನ ಗೌರವ ನೀಡುತ್ತೇವೆ. ಇಬ್ಬರ ಜೊತೆಗೆ ಬಾಳುತ್ತೇವೆ. ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗುತ್ತಾರೆ. ಮೂವರು ಪ್ರೇಯಸಿಯರನ್ನು ಇಟ್ಟುಕೊಂಡಿರುತ್ತಾರೆ. ಹೆಂಡತಿಗೂ ಗೌರವ ಕೊಡುವುದಿಲ್ಲ. ಪ್ರೇಯಸಿರಿಗೂ ಗೌರವ ಕೊಡುವುದಿಲ್ಲ. ನಮ್ಮ ಇಬ್ಬರು ಹೆಂಡತಿಯರ ಮಕ್ಕಳ ಹೆಸರು ರೇಷನ್ ಕಾರ್ಡ್‌ನಲ್ಲಿ ದಾಖಲಾಗಿರುತ್ತದೆ ಎಂದು ಶೌಕತ್ ಅಲಿ ಹೇಳಿದ್ದಾರೆ. ಇದೇ ವೇಳೆ ಈ ದೇಶ ಹಿಂದುತ್ವ ನಿರ್ಧರಿಸುವುದಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಬಿಜೆಪಿಯಿಂದ ಭಾರತ ಹಾಳಾಗುತ್ತಿದೆ ಎಂದು ಶೌಕತ್ ಆಲಿ ಹೇಳಿದ್ದಾರೆ.

ಹಿಜಾಬ್ ಬ್ಯಾನ್ ಕುರಿತು ಪ್ರತಿಕ್ರಿಯೆ ನೀಡಿದ ಶೌಕತ್ ಆಲಿ, ಹಿಂದು ವಿವಾಹ ಪದ್ಧತಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ನಾವು ಮೂವರನ್ನು ಮದುವೆಯಾಗುತ್ತೇವೆ, ಮೂವರ ಜೊತೆಗೂ ಇರುತ್ತೇವೆ ಎಂದಿದ್ದಾರೆ. ಆದರೆ ಹಿಂದೂಗಳು ಹಾಗಲ್ಲ. ಕದ್ದು ಮುಚ್ಚಿ ಸಂಬಂಧ ಇಟ್ಟುಕೊಂಡಿರುತ್ತಾರೆ ಎಂದಿದ್ದಾರೆ. ಈ ಹೇಳಿಕೆ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಿಂದೂಗಳಲ್ಲಿ ಒಂದು ಮದುವೆಗೆ ಮಾತ್ರ ಅನುಮತಿ. ಇನ್ನೊಂದು ಮದುವೆಯಾದರೆ ಅಥವಾ ರಹಸ್ಯ ಸಂಬಂಧ ಇಟ್ಟುಕೊಂಡರೆ ಕಾನೂನು ಪ್ರಕಾರ ಶಿಕ್ಷೆ ಆಗಲಿದೆ. ಯಾವುದೇ ಹೆಣ್ಣಿಗೆ ಅನ್ಯಾಯ ಅಗದಂತೆ ಹಿಂದೂ ಧರ್ಮ ನೋಡಿಕೊಂಡಿದೆ. ಅನ್ಯಾಯ ಮಾಡುವವರಿಗೆ ಕಾನೂನಿನ ಪ್ರಕಾರ ಶಿಕ್ಷೆ ನೀಡಲು ಅವಕಾಶವಿದೆ ಎಂದು ಸಾಮಾಜಿಕ ಜಾಲಾತಣದಲ್ಲಿ ಆಕ್ರೋಶ ಹೊರಹಾಕಲಾಗಿದೆ.

ಶಾಲೆಯ ಪ್ರಿನ್ಸಿಪಲ್‌, ಟೀಚರ್‌, ಸೂಪರ್‌ವೈಸರ್‌ ಮತ್ತು ವಿದ್ಯಾರ್ಥಿನಿ ಎಲ್ಲರಿಗೂ ಒಬ್ಬನೇ ಗಂಡ!

ಪವಿತ್ರ ಹಿಂದೂ ವಿವಾಹ ಪದ್ಧತಿಯನ್ನು ಅಣಕಿಸಬೇಡಿ. ಸಂಬಂಧಗಳಿಗೆ ಹಿಂದೂಗಳಲ್ಲಿ ವಿಶೇಷ ಮಹತ್ವವಿದೆ. ಇದನ್ನು ಪಾಲಿಸದೆ ಕಾನೂನು ಬಾಹಿರವಾಗಿ ನಡೆದುಕೊಂಡರೆ ಅವರಿಗ ಶಿಕ್ಷೆಗೆ ಅದೇ ಹಿಂದೂ ಧರ್ಮ ಒತ್ತಾಯಿಸುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂ ವಿವಾಹ ಪದ್ಧತಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಶೌಕತ್ ಆಲಿ ಹಿಜಾಬ್ ಬ್ಯಾನ್ ಮಾಡಲು ಹಿಂದುತ್ವ ಅಥವಾ ಬಿಜೆಪಿಗೆ ಸಾಧ್ಯವಿಲ್ಲ. ಮುಸ್ಲಿಮರು ಯಾವ ಬಟ್ಟೆ ಧರಿಸಬೇಕು ಅನ್ನೋದು ನಮ್ಮ ಧರ್ಮ ಹೇಳುತ್ತದೆ. ಇದನ್ನು ನಿರ್ಧರಿಸುವುದು ಬಿಜೆಪಿ ಅಥವಾ ಹಿಂದುತ್ವವಲ್ಲ ಎಂದು ಶೌಕತ್ ಅಲಿ ಹೇಳಿದ್ದಾರೆ. ಬಿಜೆಪಿ ದೇಶವನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ. ಆದರೆ ಇಸ್ಲಾಂ ಒಗ್ಗಟ್ಟಾಗಿದೆ. ಬಿಜೆಪಿ ಏನೇ ಮಾಡಿದರೂ ಒಡೆಯಲು ಸಾಧ್ಯವಿಲ್ಲ ಎಂದು ಶೌಕತ್ ಆಲಿ ಹೇಳಿದ್ದಾರೆ.

Women Marriage Age: ಮಹಿಳೆಯರ ವಿವಾಹ ವಯಸ್ಸಿನ್ನು 21, ಸಂಪುಟ ಅನುಮೋದನೆ, ಇದರ ಪರಿಣಾಮವೇನು?
 

Follow Us:
Download App:
  • android
  • ios