ಸನಾತನ ಧರ್ಮದ ರಕ್ಷಣೆಯೇ ನಾವು ಮಾಡಲಿಲ್ಲ ಅಂದ್ರೆ, ಹಿಂದೂ ಆಗಿ ಏನು ಪ್ರಯೋಜನ: ಮಾಧವಿ ಲತಾ
ಸಮಾಜದ ಹೆಣ್ಣು ಜಾಗೃತವಾದಲ್ಲಿ ದುಷ್ಟ ಶಕ್ತಿಗಳು ನಮ್ಮತ್ತ ಸುಳಿಯುವುದಿಲ್ಲ. ದುರ್ಗೆಯ ರೂಪದಲ್ಲಿ ಶಸ್ತ್ರವನ್ನು ಹಿಡಿದು ನಿಂತಾಗ ಮಾತ್ರ ಕೆಟ್ಟ ಸಮಾಜವನ್ನು ಎದುರಿಸಬಹುದು. ಹೀಗಾಗಿ, ಹಿಂದೂ ಸಮಾಜ ಜಾಗೃತವಾಗಲಿ: ಚಿಂತಕಿ ಮಾಧವಿ ಲತಾ
ಕಲಬುರಗಿ(ಸೆ.26): ದೇಶದ ನಾರಿ ಶಕ್ತಿ ಜಾಗೃತವಾದಲ್ಲಿ ನಮ್ಮನ್ನು ಎದುರು ಹಾಕಿಕೊಳ್ಳುವ ಶಕ್ತಿ ಯಾವ ಕಾಲಕ್ಕೂ ಬರುವುದಿಲ್ಲ. ಹಿಂದುತ್ವದ ರಕ್ಷಣೆ ನಮ್ಮ ಆಚಾರ ವಿಚಾರಗಳಲ್ಲಿ ಅಡಗಿದೆ. ಇದರ ಸಂರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯತೆಯಾಗಬೇಕು ಎಂದು ಹೈದರಾಬಾದ್‌ನ ಪ್ರಖರ ಹಿಂದೂ ಚಿಂತಕಿ ಮಾಧವಿ ಲತಾ ಕರೆ ನೀಡಿದರು.
ನಗರದ ಕೋಟೆಯ ಮುಂಭಾಗದಲ್ಲಿ ಹಿಂದೂ ಮಹಾ ಗಣಪತಿಯ ಸಮಿತಿ ವತಿಯಿಂದ ಆಯೋಜಿಸಿದ್ದ ಹಿಂದುತ್ವದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದ ಅವರು, ನಮ್ಮ ಸನಾತನ ಧರ್ಮದ ಸಂರಕ್ಷಣೆ ಮಾಡುವುದರಿಂದ ಮಾತ್ರ ನಮ್ಮ ಧರ್ಮ ಸುರಕ್ಷಿತವಾಗಿ ಇರಲಿದೆ ಎಂದರು.
'ಪ್ಯಾಲೆಸ್ತೇನ್ ಧ್ವಜ ಹಿಡಿದ್ರೆ ತಪ್ಪೇನಿಲ್ಲ..' ಚರ್ಚೆಗೆ ಗ್ರಾಸವಾದ ಸಚಿವ ಜಮೀರ್ ಸಮರ್ಥನೆ!
ಸನಾತನ ಹಿಂದೂ ಧರ್ಮದ ರಕ್ಷಣೆಯೇ ನಾವು ಮಾಡಲಿಲ್ಲ ಅಂದ್ರೆ, ಹಿಂದೂ ಆಗಿ ಏನು ಪ್ರಯೋಜನ. ರಾಜಕೀಯದಲ್ಲಿ ಒಂದು ಮತದ ಮಹತ್ವ ಬಹಳಷ್ಟಿದೆ. ನಮ್ಮ ನಿಮ್ಮ ಹೆಣ್ಣು ಮಕ್ಕಳು ಹಾಗೂ ನಮ್ಮ ಸಮಾಜ ಸುರಕ್ಷಿತವಾಗಿ ಇರಬೇಕಾದಲ್ಲಿ ನಾವೆಲ್ಲರೂ ಜಾಗೃತರಾಗುವುದು ಅವಶ್ಯಕವಾಗಿದೆ ಎಂದರು.
ನಾವೆಲ್ಲರೂ ಭಾರತ ಮಾತೆಯ ಜೈಕಾರ ಹಾಕುತ್ತೇವೆ. ಆದರೆ, ಆಕೆಯ ಕಣ್ಣೀರು ನೋಡುತ್ತಿಲ್ಲ. ಅವಳ ನೋವು ಕೇಳಿಸಿಕೊಳ್ಳುತ್ತಿಲ್ಲ. ಶಿವರಾತ್ರಿ ಮುಗಿದ ಮೇಲೆ ಶಿವನಿಗೆ ಮರೆಯುತ್ತೇವೆ. ಹೀಗೆ ಮಾಡೋದ್ರಿಂದ ದೇವರಿಗೂ ಅನಿಸುತ್ತೆ ಅವಶ್ಯಕತೆ ಇದ್ದಾಗ ಮಾತ್ರ ನನಗೆ ನೆನಪು ಮಾಡಿಕೊಳ್ಳುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ನಾಗೇಂದ್ರ ಕಾಬಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಡಗಂಚಿ ಮಠದ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯರು, ಸುಕ್ಷೇತ್ರ ಮಾಶ್ಯಾಳಿನ ಶ್ರೀ ಷ.ಬ್ರ.ಮರುಳಾಧ್ಯ ಶಿವಾಚಾರ್ಯರು ಮಾತನಾಡಿದರು.
ಕಾರ್ಯಕರ್ತರೇ ಬಿಜೆಪಿ ಪಕ್ಷದ ನಿಜವಾದ ಆಸ್ತಿ: ಬಿ.ವೈ.ವಿಜಯೇಂದ್ರ
ಶಾಸಕ ಬಸವರಾಜ ಮತ್ತಿಮಡು, ಸಮಿತಿಯ ಗೌರವಾಧ್ಯಕ್ಷ ಸುರೇಶ್ ಟೆಂಗಳಿ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಅಮರನಾಥ ಪಾಟೀಲ್, ಸುಧಾ ಹಾಲಕಾಯಿ, ಮಲ್ಲಿಕಾರ್ಜುನ ಗಂಗಾ, ಸುರೇಶ್ ಹೆರೂರ್, ಸುಮಂಗಲಾ ಚಕ್ರವರ್ತಿ, ಚಂದು ಪಾಟೀಲ್, ನಿತೀನ್ ಗುತ್ತೇದಾರ್, ಸಿದ್ದಾಜಿ ಪಾಟೀಲ್, ಜಯಶ್ರೀ ಬಸವರಾಜ ಮತ್ತಿಮಡು, ಭಾಗೀರಥಿ ಗುನ್ನಾಪುರ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.
ಸಮಾಜದ ಹೆಣ್ಣು ಜಾಗೃತವಾದಲ್ಲಿ ದುಷ್ಟ ಶಕ್ತಿಗಳು ನಮ್ಮತ್ತ ಸುಳಿಯುವುದಿಲ್ಲ. ದುರ್ಗೆಯ ರೂಪದಲ್ಲಿ ಶಸ್ತ್ರವನ್ನು ಹಿಡಿದು ನಿಂತಾಗ ಮಾತ್ರ ಕೆಟ್ಟ ಸಮಾಜವನ್ನು ಎದುರಿಸಬಹುದು. ಹೀಗಾಗಿ, ಹಿಂದೂ ಸಮಾಜ ಜಾಗೃತವಾಗಲಿ ಎಂದು ಚಿಂತಕಿ ಮಾಧವಿ ಲತಾ ತಿಳಿಸಿದ್ದಾರೆ.