ನವದೆಹಲಿ (ಫೆ.  20)    ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಪಡೆದುಕೊಂಡಿರುವ ಇ  ಶ್ರೀಧರನ್ ಬಿಜೆಪಿ ಸೇರಲು ವೇದಿಕೆ ಸಿದ್ಧ ಮಾಡಿಕೊಂಡಿದ್ದಾರೆ.

ಈ ನಡುವೆ ಲವ್ ಜಿಹಾದ್ ಬಗ್ಗೆ ಮಾತನಾಡಿದ್ದಾರೆ.  ಕೇರಳ ಸೇರಿದಂತೆ ವಿವಿಧ ಕಡೆಯ ಹೆಣ್ಣು ಮಕ್ಕಳನ್ನು ಮದುವೆ ಎಂಬ ಜಾಲ ಬಳಸಿ ಲವ್ ಜಿಹಾದ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆ ನಡೆಯಲಿದ್ದು ಶ್ರೀಧರನ್ ಬಿಜೆಪಿಯಿಂದ ಅಖಾಡಕ್ಕೆ ಇಳಿಯುವುದು ಬಹುತೇಕ ನಿಶ್ಚಿತವಾಗಿದೆ.

ಬಾಗಲಕೋಟೆ; ಯುವತಿ ಹತ್ಯೆ ಮಾಡಿ ನದಿಗೆ ಎಸೆದ, ಲವ್ ಜಿಹಾದ್ ಅನುಮಾನ

88 ವರ್ಷದ ಶ್ರೀಧರನ್ ಅವರು, ಇಂದು ಕೇರಳದಲ್ಲಿನ ಲವ್ ಜಿಹಾದ್ ಕುರಿತಂತೆ ಮಾತನಾಡಿದ್ದು, ಮದುವೆ ಎಂಬ ತಂತ್ರಗಾರಿಕೆಯನ್ನು ಬಳಸಿಕೊಂದು ಹಿಂದೂ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಗೆ ದೂಡಲಾಗುತ್ತಿದೆ ಎಂದು ಹೇಳಿದ್ದಾರೆ. 

ಕೇರಳದಲ್ಲಿ ಏನಾಗುತ್ತಿದೆ ಎಂಬುದನ್ನು ನಾನು ನೋಡುತ್ತಿದ್ದೇನೆ. ಮದುವೆ ಹೆಸರಿನಲ್ಲಿ ಹಿಂದೂಗಳನ್ನು ಹೇಗೆ ಮೋಸಗೊಳಿಸಲಾಗುತ್ತಿದೆ. ಹಿಂದೂ ಮತ್ತು ಕ್ರಿಶ್ಚೀಯನ್ ಹುಡುಗಿರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

 ಉತ್ತರ ಪ್ರದೇಶ, ಮಧ್ಯ ಪ್ರದೇಶ ಸರ್ಕಾರಗಳು ಈಗಾಗಲೇ ಲವ್ ಜಿಹಾದ್ ನಿಯಂತ್ರಣಕ್ಕೆ ಕಾನೂನು ತಂದಿದ್ದು, ವಂಚನೆ, ಬಲಾತ್ಕಾರ ಅಥವಾ ವಿವಾಹದ ಮೂಲಕ ಮತಾಂತರಗಳನ್ನು ನಿಷೇಧಿಸಿವೆ. ಕೇರಳದಲ್ಲಿಯೂ ಅಂತ ಅಗತ್ಯ ಇದೆ ಎಂದು ಪ್ರತಿಪಾದಿಸಿದ್ದಾರೆ.

ಈ ಬಾರಿಯ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃಥ್ವವನ್ನು ಶ್ರೀಧರನ್ನ  ವಹಿಸಿಕೊಳ್ಳುವುದು ಪಕ್ಕಾ ಆಗಿದೆ.