ಬಿಜೆಪಿ ವಿಷ ಸರ್ಪವಿದ್ದಂತೆ, ಅದನ್ನು ರಾಜ್ಯದಿಂದ ಅಟ್ಟಾಡಿಸಿ ಓಡಿಸಬೇಕು: ಉದಯನಿಧಿ

ಸನಾತನ ಧರ್ಮ ನಿರ್ಮೂಲನೆ ಕುರಿತು ಹೇಳಿಕೆ ನೀಡಿ ದೇಶವ್ಯಾಪಿ ಟೀಕೆಗೆ ಗುರಿಯಾಗಿದ್ದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ ಇದೀಗ ಬಿಜೆಪಿಯನ್ನು ವಿಷಸರ್ಪಕ್ಕೂ ಮತ್ತು ಅದರ ಮಿತ್ರ ಪಕ್ಷ ಎಐಎಡಿಎಂಕೆಯನ್ನು ಕಸಕ್ಕೂ ಹೋಲಿಸುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

Tamil Nadu Minister Udayanidhi Stalin again did controversy by comparing the BJP to a poisonous snake and its ally AIADMK to garbage akb

ಕುಡಲೂರು: ಸನಾತನ ಧರ್ಮ ನಿರ್ಮೂಲನೆ ಕುರಿತು ಹೇಳಿಕೆ ನೀಡಿ ದೇಶವ್ಯಾಪಿ ಟೀಕೆಗೆ ಗುರಿಯಾಗಿದ್ದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ ಇದೀಗ ಬಿಜೆಪಿಯನ್ನು ವಿಷಸರ್ಪಕ್ಕೂ ಮತ್ತು ಅದರ ಮಿತ್ರ ಪಕ್ಷ ಎಐಎಡಿಎಂಕೆಯನ್ನು ಕಸಕ್ಕೂ ಹೋಲಿಸುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಇಲ್ಲಿ ನಡೆದ ಡಿಎಂಕೆ ಶಾಸಕ (DMK MLA) ಸಭಾ ರಾಜೇಂದ್ರನ್‌ (Sabha Rajendran) ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಉದಯನಿಧಿ, ‘ಸರ್ಪವೊಂದು ಕಸದತೊಟ್ಟಿಯಿಂದ ನಮ್ಮ ಮನೆಗೆ ಪ್ರವೇಶಿಸಿದೆ. ನಾವು ಸರ್ಪವನ್ನು ನಿರ್ಮೂಲನೆ ಮಾಡಬೇಕಿದ್ದರೆ, ಮೊದಲಿಗೆ ಕಸ ಇರದಂತೆ ನೋಡಿಕೊಳ್ಳಬೇಕು. ಹೀಗಾಗಿ 2024ರ ಚುನಾವಣೆಯಲ್ಲಿ ತಮಿಳುನಾಡಿನಿಂದ ಬಿಜೆಪಿ ಮತ್ತು ಎಐಎಡಿಎಂಕೆ ಎರಡನ್ನೂ ನಿರ್ಮೂಲನೆ ಮಾಡಲು ಜನ ಅಣಿಯಾಗಬೇಕು. 2021ರಲ್ಲಿ ನಾವು ಗುಲಾಮರನ್ನು ವಿಧಾನಸಭೆಯಿಂದ ಗಂಟುಮೂಟೆ ಕಟ್ಟಿಕಳುಹಿಸಿದೆವು. ಇದೀಗ 2024ರಲ್ಲಿ ಅವರ ನಾಯಕರನ್ನೂ ಮನೆಗೆ ಕಳುಹಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

ಉದಯನಿಧಿ ಸ್ಟಾಲಿನ್‌ ಹೇಳಿಕೆಯಲ್ಲಿ ತಪ್ಪೇನಿದೆ: ನಟ ಪ್ರಕಾಶ್‌ ರೈ

ಜೊತೆಗೆ ಸನಾತನ ಧರ್ಮ ಕುರಿತ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ಉದಯನಿಧಿ, ‘ಕಳೆದ 100 ವರ್ಷಗಳಿಂದಲೂ ತಮಿಳುನಾಡಿನಲ್ಲಿ (Tamilnadu) ಸನಾತನ ಧರ್ಮದ (Sanatana Dharma) ಬಗ್ಗೆ ಧ್ವನಿ ಎತ್ತುತ್ತಲೇ ಬರಲಾಗುತ್ತಿದೆ. ಮುಂದಿನ 200 ವರ್ಷಗಳ ಕಾಲವೂ ನಾವು ಅದನ್ನು ಮುಂದುವರೆಸಲಿದ್ದೇವೆ’ ಎಂದು ಹೇಳಿದರು.

ಶಾರುಖ್‌ ಖಾನ್‌ ಕೂಡ ತಿರುಪತಿಗೆ ಹೋಗ್ಬಹುದು ಇದು ನಮ್ಮ ಸನಾತನ ಎಂದ ಅಣ್ಣಾಮಲೈ! 

ಸನಾತನ ಧರ್ಮ ಕೊರೋನಾ, ಮಲೇರಿಯಾ, ಡೆಂಗ್ಯೂ ಇದ್ದಂತೆ. ಅದನ್ನು ವಿರೋಧ ಮಾಡಬಾರದು, ಸಂಪೂರ್ಣವಾಗಿ ನಾಶಪಡಿಸಬೇಕು ಎಂದು ಈ ಹಿಂದೆ ಉದಯನಿಧಿ ಮಾರನ್ ಹೇಳಿದ್ದು, ಇದು ವಿವಾದದ ಕಿಡಿ ಹಚ್ಚಿದೆ. ಇತ್ತ ಉದಯನಿಧಿ ಸ್ಟಾಲಿನ್ ಹಿಂದೂ ವಿರೋಧಿ ಹೇಳಿಕಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ  ವ್ಯಕ್ತವಾಗಿದೆ. ಬಿಜೆಪಿಯೂ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಈ ಹೇಳಿಕೆ ಮೂಲಕ ಉದಯನಿಧಿ ಸ್ಟಾಲಿನ್ ಹಿಂದೂಗಳ ಹತ್ಯಾಕಾಂಡಕ್ಕೆ ಕರೆ ನೀಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.  ಅಲ್ಲದೇ ಈ ಹೇಳಿಕೆಯನ್ನು ಖಂಡಿಸದೇ ಮೌನಕ್ಕೆ ಶರಣಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು (Rahul Gandhi) ಹಿಂದೂ ವಿರೋಧಿ ಎಂದು ಜರೆದಿದೆ. 

ಪ್ರತಿಯೊಬ್ಬರೂ ಎಲ್ಲಾ ಧರ್ಮಗಳನ್ನು ಗೌರವಿಸಬೇಕು,  ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಜನರಿಗೆ ಇದೆ ಎಂದು ಕಾಂಗ್ರೆಸ್ ಹೇಳಿದ್ದರೆ ಅತ್ತ, ಕಾಂಗ್ರೆಸ್‌ನ ಯುವ ನಾಯಕರಾದ ಪ್ರಿಯಾಂಕ್ ಖರ್ಗೆ (Priyank Kharge) ಮತ್ತು ಕಾರ್ತಿ ಚಿದಂಬರಂ (Karti Chidambaram) ಅವರು ಸ್ಟಾಲಿನ್ ಜೂನಿಯರ್ ಉದಯನಿಧಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಸಿಪಿಎಂನ ಡಿ ರಾಜಾ (D Raja) ಕೂಡ ಉದಯನಿಧಿ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ.

ಉದಯನಿಧಿ ವಿರುದ್ಧ ಕ್ರಮ ಕೋರಿ ಸಿಜೆಐಗೆ 260 ಗಣ್ಯರ ಪತ್ರ

ನವದೆಹಲಿ: ತಮಿಳುನಾಡು ಸಚಿವ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್‌ ಅವರ ಸನಾತನ ಧರ್ಮ ನಿರ್ಮೂಲನೆ ಹೇಳಿಕೆಯನ್ನು ದ್ವೇಷ ಭಾಷಣ ಎಂದು ಪರಿಗಣಿಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿ ನಿವೃತ್ತ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಸೇರಿದಂತೆ 260 ಕ್ಕೂ ಹೆಚ್ಚು ಪ್ರಖ್ಯಾತ ನಾಗರಿಕರು ಭಾರತದ ಮುಖ್ಯ ನ್ಯಾಯಾಧೀಶ ನ್ಯಾ. ಡಿ.ವೈ. ಚಂದ್ರಚೂಡ ಅವರಿಗೆ ಪತ್ರ ಬರೆದಿದ್ದಾರೆ. ದಿಲ್ಲಿ ಹೈಕೋರ್ಟ್ ನಿವೃತ್ತ ನ್ಯಾ. ಎಸ್‌.ಎನ್‌. ಧಿಂಗ್ರಾ ಸೇರಿ ಅನೇಕರು ಸಹಿ ಮಾಡಿದ್ದು, ಉದಯನಿಧಿ ದ್ವೇಷ ಭಾಷಣ ಮಾಡಿದ್ದಲ್ಲದೆ, ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. ಇದು ದೊಡ್ಡ ಜನಸಂಖ್ಯೆಯ ವಿರುದ್ಧ ದ್ವೇಷ ಭಾಷಣ ಎನ್ನಬಹುದು. ಜಾತ್ಯತೀತ ಭಾರತದ ಕಲ್ಪನೆಯನ್ನು ಜನರ ಮುಂದೆ ಇರಿಸುವ ಭಾರತದ ಸಂವಿಧಾನದ ತಿರುಳನ್ನು ಇಂಥ ಹೇಳಿಕೆ ಅಳಿಸಿ ಹಾಕುತ್ತದೆ  ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ದೇಶದ ಜಾತ್ಯತೀತ ಸ್ವರೂಪ ರಕ್ಷಿಸಲು ಅವರ ವಿರುದ್ಧ ಕ್ರಮ ಅಗತ್ಯ ಎಂದು ಆಗ್ರಹಿಸಿದ್ದಾರೆ. 14 ನಿವೃತ್ತ ನ್ಯಾಯಾಧೀಶರು, 130 ನಿವೃತ್ತ ಅಧಿಕಾರಿಗಳು ಮತ್ತು 118 ನಿವೃತ್ತ ಸಶಸ್ತ್ರ ಪಡೆಗಳ ಅಧಿಕಾರಿಗಳು ಸೇರಿದಂತೆ 262 ಜನರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

Latest Videos
Follow Us:
Download App:
  • android
  • ios