Asianet Suvarna News Asianet Suvarna News

ಮಾಂಗಲ್ಯ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗಲು ಹಿಂದೂಗಳಿಗೆ ಸೂಚನೆ, ಬುರ್ಖಾ ಧರಿಸಿದ ಮುಸ್ಲಿಮರಿಗೆ ಅವಕಾಶ!

ಹಿಜಾಬ್ ಧರಿಸುವ ಕುರಿತ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಇದರ ಜೊತೆಗೆ ಜಾತ್ಯಾತೀತರೆ ಒಂದು ಧರ್ಮಕ್ಕೆ ಮಾತ್ರ ಸೀಮಿತವೇ ಅನ್ನೋ ವಾದವೂ ಬಲವಾಗುತ್ತಿದೆ. ಇದರ ನಡುವೆ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಲೋಕಸೇವಾ ಪರೀಕ್ಷೆಯಲ್ಲಿ ಹಿಂದೂ ಮಹಿಳೆಯರು ತಮ್ಮ ಮಾಂಗಲ್ಯ ತೆಗೆದಿಟ್ಟು ಪರೀಕ್ಷೆ ಬರೆಯಲು ಸೂಚಿಸಲಾಗಿದೆ 
 

Hindu women were asked to remove Mangalsutras to write exam but Muslims allowed with burqa new controversy in Telangana ckm
Author
First Published Oct 19, 2022, 7:20 PM IST

ತೆಲಂಗಾಣ(ಅ.19):  ಹಿಜಾಬ್, ಹಲಾಲ್ ಸೇರಿದಂತೆ ಹಲವು ವಿವಾದಗಳು ಈಗಾಗಲೇ ರಾಜ್ಯ ಹಾಗೂ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದರೊಂದಿಗೆ ಹಿಂದು ಮುಸ್ಲಿಮ್ ಸಮುದಾಯದ ನಡುವಿನ ಕಂದಕ ಹೆಚ್ಚಿಸುವ ಆತಂಕದ ಪರಿಸ್ಥಿತಿಯನ್ನೂ ನಿರ್ಮಾಣ ಮಾಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ತೆಲಂಗಾಣದಲ್ಲಿ ಹೊಸ ವಿವಾದ ಶುರುವಾಗಿದೆ. ಲೋಕಸೇವಾ ಪರೀಕ್ಷೆಯಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ಒಂದು ನೀತಿ, ಮುಸ್ಲಿಮ್ ಹೆಣ್ಣುಮಕ್ಕಳಿಗೆ ಒಂದು ನೀತಿ ಅನುಸರಿಸಿದ ದೂರು ಕೇಳಿಬಂದಿದೆ. ಪರೀಕ್ಷಾ ಕೊಠಡಿಗೆ ಪ್ರವೇಶಿಸರು ಹಿಂದೂ ಹೆಣ್ಣುಮಕ್ಕಳನು ತಮ್ಮ ಬಳೆ, ಕಿವಿಯೋಲೆ, ಗೆಜ್ಜೆ, ಕಾಲು ಬೆರಳಿನ ಉಂಗುರ, ಸರ ಇಷ್ಟೇ ಅಲ್ಲ ಮಂಗಳೂತ್ರವನ್ನೂ ತೆಗೆದು ಪರೀಕ್ಷೆ ಬರೆಯಲು ಸೂಚಿಸಿದ್ದಾರೆ. ಆದರೆ ಬುರ್ಖಾ ಧರಿಸಿದ ಬಂದ ಮುಸ್ಲಿಮ್ ಹೆಣ್ಣುಮಕ್ಕಳನ್ನು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ದೂರು ಕೇಳಿ ಬಂದಿದೆ. ಈ ಕುರಿತು ಬಿಜೆಪಿ ನಾಯಕಿ ಪ್ರೀತಿ ಗಾಂಧಿ ವಿಡಿಯೋ ಹಂಚಿಕೊಂಡಿದ್ದಾರೆ.

ಆದಿಲಾಬಾದ್ ಪದವಿಪೂರ್ವ ಕಾಲೇಜಿನಲ್ಲಿ ತೆಲಂಗಾಣ ರಾಜ್ಯ ಸಾರ್ವಜನಿಕ ಸೇವಾ ಆಯೋಗ ಅಕ್ಟೋಬರ್ 16 ರಂದು ಗ್ರೂಪ್-1 ಪ್ರಾಥಮಿಕ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆ ವೇಳೆ ವಿವಾದ ಸೃಷ್ಟಿಯಾಗಿದೆ. ಹಿಂದೂ ಹೆಣ್ಣುಮಕ್ಕಳು ಈ ಕುರಿತು ಅಳಲು ತೋಡಿಕೊಂಡಿದ್ದಾರೆ. ಇದು ಯಾವ ನೀತಿ ಎಂದು ಪ್ರಶ್ನಿಸಿದ್ದಾರೆ. ಇವರ ಬೆಂಬಲಕ್ಕೆ ನಿಂತ ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

 

ಬುರ್ಖಾ ನಿಷೇಧ, ಸ್ವಿಸ್ ನಿಯಮ ಉಲ್ಲಂಘಿಸಿದರೆ 83,000 ರೂ ದಂಡ!

ತೆಲಂಗಾಣ ಸರ್ಕಾರ ಅಲ್ಪಸಂಖ್ಯಾತರ ಒಲೈಕೆ ರಾಜಕಾರಣ ಮಾಡುತ್ತಿದೆ.  ತಪಾಸಣೆ ನಡೆಸುವುದು ಬೇಡ ಎಂದು ಯಾರು ಹೇಳಿಲ್ಲ. ಆದರೆ ಮಂಗಳೂಸೂತ್ರವನ್ನು ತೆಗೆದಿಟ್ಟು ಬರವಂತೆ ಆಜ್ಞೆ ಮಾಡುವುದು ಎಷ್ಟು ಸರಿ. ಮಂಗಳಸೂತ್ರ ತೆಗೆದು ಪರೀಕ್ಷೆ ಬರೆಯಬೇಕು ಎಂಬ ನಿಯಮವೇನು ಇಲ್ಲ. ಮಂಗಳಸೂತ್ರ ಸೇರಿದಂತೆ ಹೆಣ್ಣುಮಕ್ಕಳ ಬಳೆ, ಸರದಿಂದ ಪರೀಕ್ಷೆಗೆ ಯಾವುದೇ ತೊಡಗಾವುದಿಲ್ಲ. ಇದು ತೆಲಂಗಾಣ ಸರ್ಕಾರದ ಒಲೈಕೆ ರಾಜಕಾರಣ ಎಂದು ಪ್ರೀತಿ ಗಾಂಧಿ ಆರೋಪಿಸಿದ್ದಾರೆ.

ವಿವಾದ ಜೋರಾಗುತ್ತಿದ್ದಂತೆ ಅದಿಲ್‌ಬಾದ್ ಪೊಲೀಸ್ ಉದಯ್ ಕುಮಾರ್ ರೆಡ್ಡಿ ಮಧ್ಯಪ್ರವೇಶಿಸಿದ್ದಾರೆ. ಪರೀಕ್ಷಾ ಕೇಂದ್ರದ ತಪ್ಪಿನಿಂದಾಗಿ ಮೊದಲು ಮಂಗಳಸೂತ್ರ ತೆಗೆಯುವಂತೆ ನಿರ್ದೇಶ ನೀಡಲಾಗಿತ್ತು. ತಕ್ಷಣವೇ ಸರಿಪಡಿಸಲಾಗಿದೆ. ಹೆಣ್ಣುಮಕ್ಕಳಿಗೆ ಮಂಗಳಸೂತ್ರ, ಬಳೆ, ಸರ, ಕಾಲುಂಗುರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಎಂದು ಉದಯ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ನಿಯಮದಲ್ಲೇ ಇಲ್ಲದ ನಿಯಮವನ್ನು ನಿರ್ದೇಶಿಸಿದ್ದು ಯಾಕೆ? ಇದು ಸಿಬ್ಬಂದಿಗಳಿಗ ನಿರ್ಧಾರವಾಗಿತ್ತಾ? ಇದರ ಹಿಂದೆ ಸರ್ಕಾರದ ಕೈವಾಡ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಹಿಂದೂ ಹೆಣ್ಣುಮಕ್ಕಳು ಈ ಕುರಿತು ವಿರೋಧ ವ್ಯಕ್ತಪಡಿಸಿದ ಕಾರಣ ಈ ಪ್ರಕರಣ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲ ಮಂಗಳಸೂತ್ರ ಧರಿಸಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಆದರೆ ಯಾವುದೇ ನಿಯಮದಲ್ಲಿ ಈ ರೀತಿ ಇಲ್ಲ. ಹೀಗಾಗಿ ಇದನ್ನು ಜಾರಿಗೊಳಿಸಲು ಸಿಬ್ಬಂದಿಗೆ ಹೇಳಿದ್ದು ಯಾರು? ಎಂದು ಬಿಜೆಪಿ ಪ್ರಶ್ನಿಸಿದೆ.

ರಾಜಾ ಸಿಂಗ್‌ರನ್ನು ಕಂಡಕಂಡಲ್ಲಿ ಥಳಿಸಿ, ಮುಸ್ಲಿಮರಿಗೆ ತೆಲಂಗಾಣ ಕಾಂಗ್ರೆಸ್‌ ನಾಯಕನ ಆರ್ಡರ್‌!

ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ತೆಲಂಗಾಣ ಕೆ ಚಂದ್ರಶೇಖರ್ ರಾವ್, ಒಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರ ಮತ ಸೆಳೆಯಲು ಹಲವು ಯತ್ನಗಳನ್ನು ನಡೆಸುತ್ತಿದ್ದಾರೆ.  ಇದರ ಅಂಗವಾಗಿ ತೆಲಂಗಾಣ ಸರ್ಕಾರ ಈ ರೀತಿಯ ಒಂದೊಂದೇ ವಿವಾದವನ್ನು ಸೃಷ್ಟಿಸುತ್ತಿದೆ ಎಂದು ಬಿಜೆಪಿ ಹೇಳಿದೆ. ಆದರೆ ಈ ರೀತಿ ನಡೆದಿಲ್ಲ  ಎಂದು ಟಿಆರ್‌ಎಸ್ ಪಕ್ಷ ಸ್ಪಷ್ಟನೆ ನೀಡಿದೆ. ಆದರೆ ಪೊಲೀಸ್ ಅಧೀಕ್ಷಕರೇ ಸ್ಪಷ್ಟನೆ ನೀಡಿರುವ ಕಾರಣ ಇದೀಗ ಟಿಆರ್‌ಎಸ್ ಮೇಲಿನ ಅನುಮಾನಗಳು ಹೆಚ್ಚಾಗಿದೆ.

Follow Us:
Download App:
  • android
  • ios