Asianet Suvarna News Asianet Suvarna News

ಇಂಡಿಯಾ ಮಾತ್ರವಲ್ಲ, ರಾಹುಲ್‌ ಗಾಂಧಿಯೂ ತನ್ನ ಹೆಸರು ಬದಲಿಸಬೇಕು: ‘ರಾಗಾ’ಗೆ ಅಸ್ಸಾಂ ಸಿಎಂ ಟಾಂಗ್

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ಹೆಸರಿನ ಗಾಂಧಿ ಪಟ್ಟವನ್ನು ಬಿಟ್ಟುಕೊಡಬೇಕು. ಈ ಗಾಂಧಿ ಕುಟುಂಬವು "ನಕಲಿಗಳ ಸರದಾರ" ಎಂದು ಹೇಳಿದ ಅಸ್ಸಾಂ ಮುಖ್ಯಮಂತ್ರಿ ಅವರು "ಹಲವಾರು ಹಗರಣಗಳನ್ನು" ಮಾಡಿದ್ದಾರೆ ಎಂದೂ ಆರೋಪಿಸಿದರು. 

himanta sarma wants name change for rahul gandhi should give away gandhi title ash
Author
First Published Sep 11, 2023, 10:48 AM IST

ಗುವಾಹಟಿ (ಸೆಪ್ಟೆಂಬರ್ 11, 2023): ಗಾಂಧಿ ಕುಟುಂಬವು "ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ" ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತೆ ಕಿಡಿ ಕಾರಿದ್ದಾರೆ. ಅಲ್ಲದೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ಹೆಸರನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ಹೆಸರಿನ ಗಾಂಧಿ ಪಟ್ಟವನ್ನು ಬಿಟ್ಟುಕೊಡಬೇಕು ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಒತ್ತಾಯಿಸಿದ್ದಾರೆ. ಈ ಗಾಂಧಿ ಕುಟುಂಬವು "ನಕಲಿಗಳ ಸರದಾರ" ಎಂದು ಹೇಳಿದ ಅಸ್ಸಾಂ ಮುಖ್ಯಮಂತ್ರಿ ಅವರು "ಹಲವಾರು ಹಗರಣಗಳನ್ನು" ಮಾಡಿದ್ದಾರೆ ಎಂದೂ ಆರೋಪಿಸಿದರು. 

ಇದನ್ನು ಓದಿ: ಬಿಜೆಪಿಗರ ಸಾಮಾಜಿಕ ಮಾಧ್ಯಮ ಪ್ರೊಫೈಲಿಂದ ‘ಇಂಡಿಯಾ’ ಮಾಯ: ಭಾರತ ಎಂದು ಬದಲಿಸಿಕೊಂಡ ಅಸ್ಸಾಂ ಸಿಎಂ

ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಮಂತ, "ಅವರ ಮೊದಲ ಹಗರಣ ಗಾಂಧಿ ಪಟ್ಟದಿಂದ ಪ್ರಾರಂಭವಾಯಿತು. ಅವರು ಕೇವಲ ಪರಿವಾರದ ಮತ್ತು ದೇಶವನ್ನು ಒಡೆಯುವ ಕೆಲಸ ಮಾಡಿದರು. ಗಾಂಧಿ ಪಟ್ಟವನ್ನು ಬಿಟ್ಟುಕೊಡುವಂತೆ ನಾನು ರಾಹುಲ್ ಗಾಂಧಿಗೆ ವಿನಂತಿಸುತ್ತೇನೆ" ಎಂದು ಹೇಳಿದ್ದಾರೆ. 

ಈ ಮಧ್ಯೆ, ದೆಹಲಿಯಲ್ಲಿ ನಡೆದ ಜಿ 20 ನಾಯಕರ ಶೃಂಗಸಭೆಯಲ್ಲಿ ಅಂಗೀಕರಿಸಲಾದ 'ದೆಹಲಿ ಘೋಷಣೆ'ಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶ್ಲಾಘಿಸಿದರು ಮತ್ತು ಇದು ಅವರಿಂದಲೇ ಸಂಭವಿಸಿದೆ ಎಂದು ಹೇಳಿದರು. "ಕಾಮಾಖ್ಯ ಕಾರಿಡಾರ್ ಇನ್ನೆರಡು ವರ್ಷಗಳಲ್ಲಿ ವಾಸ್ತವಕ್ಕೆ ಬರಲಿದೆ. ಪ್ರಧಾನಿ ಮೋದಿಯವರಿಂದ ಮಾತ್ರ ಉಕ್ರೇನ್, ರಷ್ಯಾ ಯುದ್ಧದ ನಡುವೆ ದೆಹಲಿ ಘೋಷಣೆಯಾಗಿದೆ. ಕಾಂಗ್ರೆಸ್ ದೇಶಕ್ಕೆ 25 ವರ್ಷ ಅಥವಾ 50 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಲಿಲ್ಲ. ಆದರೆ, ಮೋದಿ ಜೀ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಿದರು ಮತ್ತು ಪ್ರತಿಯೊಬ್ಬರೂ ನಾವು ಭಾರತೀಯರು ಎಂದು ಭಾವಿಸುತ್ತಾರೆ. ಮಹಾನ್ ಸುಧಾರಕ ಮಹಾಪುರುಷ ಶಂಕರದೇವ ಅವರು 500 ವರ್ಷಗಳ ಹಿಂದೆ ಭಾರತ ಭೂಮಿಯ ಬಗ್ಗೆ ಬರೆದಿದ್ದಾರೆ, ಇದು ನಮ್ಮ ಭಾರತ ಭೂಮಿ’’ ಎಂದೂ ಅಸ್ಸಾಂ ಸಿಎಂ ಹೇಳಿದರು.

ಇದನ್ನೂ ಓದಿ: ತರಕಾರಿ ಬೆಲೆ ಏರಿಕೆಗೆ ''ಮಿಯಾ'' ಮುಸ್ಲಿಂ ವ್ಯಾಪಾರಿಗಳೇ ಕಾರಣ: ಅಸ್ಸಾಂ ಸಿಎಂ

ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ ಎಂದೂ ಶ್ಲಾಘಿಸಿದರು. "ನಿನ್ನೆ ಮೋದಿಜೀಯವರು ಜಾಗತಿಕ ನಾಯಕರೊಂದಿಗೆ ಮಾತನಾಡುವುದನ್ನು ನೋಡಿದಾಗ ನನಗೆ ಭಾರತವು ಈಗ ವಿಶ್ವಗುರುವಾಗಿದೆ ಎಂದು ನನಗೆ ಅನಿಸಿತು. ಮಹಿಳೆಯರು ಈಗ ದೇಶವನ್ನು ಮುನ್ನಡೆಸುತ್ತಿದ್ದಾರೆ. ಪ್ರಧಾನಿ ಮೋದಿಯವರು ನಾರಿ ಶಕ್ತಿ, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಗಮನ ನೀಡುತ್ತಾರೆ’’ ಎಂದೂ ಹಿಮಂತ ಬಿಸ್ವಾ ಶರ್ಮಾ ಶ್ಲಾಘಿಸಿದ್ದಾರೆ. 

ಇನ್ನೊಂದೆಡೆ, ಕೆಲವು ದಿನಗಳ ಹಿಂದೆ ನಾವು ಬಾಲ್ಯವಿವಾಹದ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಿದ್ದೇವೆ. ಒಂಬತ್ತು ವರ್ಷಕ್ಕೆ ಮದುವೆಯಾಗುವುದು ಮತ್ತು 12 ವರ್ಷಕ್ಕೆ ಜನ್ಮ ನೀಡುವುದು ಅಸ್ಸಾಂನ ಒಂದು ನಿರ್ದಿಷ್ಟ ಸಮುದಾಯದಲ್ಲಿ ಸಾಮಾನ್ಯವಾಗಿದೆ. ಯಾವುದೇ ಹಿಂದೂ ಜಾತಿಪದ್ಧತಿಯನ್ನು ಅನುಮೋದಿಸುವುದಿಲ್ಲ. ಆದರೆ ಒಬ್ಬ ತಮಿಳುನಾಡು ಸಚಿವರು ಹಿಂದೂಗಳ ವಿರುದ್ಧ ಮಾತನಾಡಿದ್ದಾರೆ" ಎಂದು ಅಸ್ಸಾಂ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ವಿರುದ್ಧ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಕಿರುಕುಳ ವಿಚಾರ: ಭಾರತ​ದಲ್ಲಿನ ‘ಹುಸೇನ್‌ ಒಬಾಮ’ಗಳ ಮೇಲೆ ಕ್ರಮ; ಅಸ್ಸಾಂ ಸಿಎಂ ಪ್ರತಿಕ್ರಿಯೆ

Follow Us:
Download App:
  • android
  • ios