Asianet Suvarna News Asianet Suvarna News

ಹಿಮಾಚಲ ಪ್ರವಾಹ: ರಕ್ಷಣಾ ಕಾರ್ಯಕ್ಕಾಗಿ 3 ಟನ್‌ನ ಜೆಸಿಬಿ ಏರ್‌ಲಿಫ್ಟ್ ಮಾಡಿದ ಚಿನೂಕ್‌ ಕಾಪ್ಟರ್‌

ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿರುವ ಹಿಮಾಚಲ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯ ವೇಳೆ ಭಾರತೀಯ ಸೇನೆಯ ಚಿನೂಕ್‌ ಹೆಲಿಕಾಪ್ಟರ್‌ 3 ಟನ್‌ನ ಮಿನಿ ಬುಲ್ಡೋಜರ್‌ ಹಾಗೂ 18 ಮಂದಿ ಸೈನಿಕರನ್ನು ಒಂದೇ ಬಾರಿಗೆ ಏರ್‌ಲಿಫ್ಟ್ ಮಾಡಿದೆ.

Himachal flood: 3 tonne JCB airlifted Chinook helicopter for rescue work akb
Author
First Published Aug 17, 2023, 11:10 AM IST

ಶಿಮ್ಲಾ: ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿರುವ ಹಿಮಾಚಲ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯ ವೇಳೆ ಭಾರತೀಯ ಸೇನೆಯ ಚಿನೂಕ್‌ ಹೆಲಿಕಾಪ್ಟರ್‌ 3 ಟನ್‌ನ ಮಿನಿ ಬುಲ್ಡೋಜರ್‌ ಹಾಗೂ 18 ಮಂದಿ ಸೈನಿಕರನ್ನು ಒಂದೇ ಬಾರಿಗೆ ಏರ್‌ಲಿಫ್ಟ್ ಮಾಡಿದೆ.  ಪಶ್ಚಿಮ ಏರ್‌ ಕಮಾಂಡ್‌ಗೆ ಸೇರಿದ ಚಿನೂಕ್‌ ಹೆಲಿಕಾಪ್ಟರ್‌ ಪ್ರವಾಹ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ 18 ಮಂದಿ ಸೈನಿಕರು ಹಾಗೂ 3 ಟನ್‌ ತೂಕದ ಮಿನಿ ಬುಲ್ಡೋಜರನ್ನು ಏರ್‌ಲಿಫ್ಟ್‌ ಮಾಡಿದೆ ಎಂದು ಪಾಲಮ್‌ ಏರ್‌ಬೇಸ್‌ನ ಪಿಆರ್‌ಒ ಟ್ವೀಟ್‌ ಮಾಡಿದ್ದಾರೆ. ಮೇಘಸ್ಫೋಟದಿಂದಾಗಿ ಹಿಮಾಚಲ ಪ್ರದೇಶದಲ್ಲಿ ಭಾರಿಮಳೆ ಸುರಿಯುತ್ತಿದ್ದು, ಹಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಎನ್‌ಡಿಆರ್‌ಎಫ್‌, ಭಾರತೀಯ ಸೇನೆ ಹಾಗೂ ವಾಯುಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಹಿಮಾಚಲ ನೆರೆಯಿಂದ 10 ಸಾವಿರ ಕೋಟಿ ರು. ಹಾನಿ

ಶಿಮ್ಲಾ/ ಡೆಹ್ರಾಡೂನ್‌: ಭಾರಿ ಮಳೆಯಿಂದ ತತ್ತರಿಸಿರುವ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ರಕ್ಷಣಾ ಕಾರ್ಯಗಳು ಬುಧವಾರ ಕೂಡ ಮುಂದುವರಿದಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಹೆಲಿಕಾಪ್ಟರ್‌ (Helicoptor) ಮೂಲಕ ರಕ್ಷಿಸುವ ಕಾರ್ಯ ನಡೆದಿದೆ. ಈ ನಡುವೆ, ನೆರೆಹಾವಳಿಯಿಂದ 10 ಸಾವಿರ ಸಾವಿರ ಕೋಟಿ ರು. ಹಾನಿ ಆಗಿದ್ದು, ಪರಿಸ್ಥಿತಿ ಮೊದಲಿನಂತೆ ಆಗಲು 1 ವರ್ಷವೇ ಬೇಕು ಎಂದು ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಪ್ರವಾಹಕ್ಕೆ 9600 ಮನೆಗಳು ಕುಸಿತ

ಈ ನಡುವೆ, ಮಳೆ ನಿಯಂತ್ರಣದಲ್ಲಿದ್ದರೂ ಮುಂದಿನ 2 ದಿನಗಳ ಕಾಲ ಎರಡೂ ರಾಜ್ಯಗಳಲ್ಲಿ ಭಾರಿ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ಬುಧವಾರವೂ ಶಾಲೆ-ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಹಿಮಾಚಲ ಪ್ರದೇಶದಲ್ಲಿ ಈವರೆಗೆ ಮಳೆಗೆ 60 ಜನ ಹಾಗೂ ಉತ್ತರಾಖಂಡದಲ್ಲಿ 8 ಮಂದಿ ಬಲಿಯಾಗಿದ್ದಾರೆ. ಮಂಗಳವಾರ ರಾತ್ರಿ ಕೃಷ್ಣಾನಗರದಲ್ಲಿ ಭೂಕುಸಿತ ಸಂಭವಿಸುವುದರೊಂದಿಗೆ ಹಿಮಾಚಲ ಪ್ರದೇಶದಲ್ಲಿ ಸಾವಿನ ಸಂಖ್ಯೆ 60ಕ್ಕೆ ಏರಿತ್ತು.

ಹೆಲಿಕಾಪ್ಟರ್‌ ಬಳಸಿ ರಕ್ಷಣೆ:

ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಸಿಲುಕಿದ್ದ 100 ಜನರ ಪೈಕಿ ಅನೇಕರನ್ನು ಬುಧವಾರ ಹೆಲಿಕಾಪ್ಟರ್‌ ಬಳಸಿ ಏರ್‌ಲಿಫ್ಟ್ (Airlift) ಮಾಡಲಾಗಿದೆ. ಇನ್ನು ಉತ್ತರಾಖಂಡದ ರುದ್ರಪ್ರಯಾಗದ (Rudra Prayag) ಮದ್ಮಹೇಶ್ವರ ಎಂಬಲ್ಲಿ ಸಿಲುಕಿದ್ದ 70 ಯಾತ್ರಿಕರನ್ನು ಹೆಲಿಕಾಪ್ಟರ್‌ ಬಳಸಿ ಏರ್‌ಲಿಫ್ಟ್ (Airlift) ಮಾಡಲಾಗಿದೆ.

ದೇವಭೂಮಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 60ಕ್ಕೆ ಏರಿಕೆ

ದಿಲ್ಲಿಯಲ್ಲಿ ಯುಮನೆ ನಿಯಂತ್ರಣದಲ್ಲಿ:

ದಿಲ್ಲಿಯಲ್ಲಿ 205.33 ಮೀ.ನಷ್ಟು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಯಮುನಾ (River Yamuna) ನದಿ ಬುಧವಾರ ನಿಯಂತ್ರಣಕ್ಕೆ ಬಂದಿದೆ. ಬುಧವಾರ ನೀರಿನ ಮಟ್ಟ205.14 ಮೀ.ಗೆ ಇಳಿದಿದೆ.

 

Follow Us:
Download App:
  • android
  • ios