Asianet Suvarna News Asianet Suvarna News

ದೇವಭೂಮಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 60ಕ್ಕೆ ಏರಿಕೆ

ಮಳೆ ಅಬ್ಬರದಿಂದ ತತ್ತರಿಸಿರುವ ಹಿಮಾಚಲ ಪ್ರದೇಶದಲ್ಲಿ ಸಾವಿನ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಇನ್ನು ಉತ್ತರಾಖಂಡದಲ್ಲೂ ಧಾರಾಕಾರ ಮಳೆಗೆ ಈಗಾಗಲೇ ನಾಲ್ವರು ಸಾವನ್ನಪ್ಪಿದ್ದು, ಸುಮಾರು 9 ಜನರು ನಾಪತ್ತೆಯಾಗಿದ್ದಾರೆ.

Uttarakhand and Himachal floods death toll rises to 60, red  alert announced in two states akb
Author
First Published Aug 16, 2023, 7:28 AM IST

ಶಿಮ್ಲಾ/ಡೆಹ್ರಾಡೂನ್‌: ಮಳೆ ಅಬ್ಬರದಿಂದ ತತ್ತರಿಸಿರುವ ಹಿಮಾಚಲ ಪ್ರದೇಶದಲ್ಲಿ ಸಾವಿನ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಇನ್ನು ಉತ್ತರಾಖಂಡದಲ್ಲೂ ಧಾರಾಕಾರ ಮಳೆಗೆ ಈಗಾಗಲೇ ನಾಲ್ವರು ಸಾವನ್ನಪ್ಪಿದ್ದು, ಸುಮಾರು 9 ಜನರು ನಾಪತ್ತೆಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಮೇಘಸ್ಫೋಟಕ್ಕೆ ತತ್ತರಿಸುತ್ತಿರುವ ಎರಡೂ ರಾಜ್ಯಗಳ ಹಲವು ಪ್ರದೇಶಗಳಿಗೆ ಭಾರತೀಯ ಹವಾಮಾನ ಇಲಾಖೆಯು 'ರೆಡ್‌ ಅಲರ್ಟ್‌' ಘೋಷಿಸಿದೆ. ಅಲ್ಲದೇ ಮುಂದಿನ 24 ಗಂಟೆಗಳವರೆಗೂ ತೀವ್ರ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ಎರಡೂ ರಾಜ್ಯಗಳಲ್ಲಿ ನಿರಂತರ ಮಳೆಯಿಂದ ಭೂಕುಸಿತ, ಪ್ರವಾಹ ಸಂವಿಸುತ್ತಿದ್ದು, ಆಸ್ತಿಪಾಸ್ತಿ ನಾಶವಾಗಿವೆ. ಉತ್ತರಾಖಂಡದಲ್ಲಿ ಮಳೆಯಿಂದಾಗಿ ಸೋಮವಾರ ವಿವಿಧೆಡೆ ಭೂಕುಸಿತಗಳು ಸಂಭವಿಸಿದ್ದು, ನಾಪತ್ತೆಯಾಗಿರುವ 9 ಜನರನ್ನು ಹುಡುಕುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭೂಕುಸಿತದಿಂದ ಹುದುಗಿರುವ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸುವ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಉತ್ತರಾಖಂಡದ ಮೋಹನ್‌ಚಟ್ಟಿಯಲ್ಲಿ ರೆಸಾರ್ಟ್‌ನ ಮೇಲೆ ಭೂಕುಸಿತ ಸಂಭವಿಸಿದ್ದು ಆರು ಜನರು ಸೇರಿ ವಿವಿಧೆಡೆ 9 ಜನರು ನಾಪತ್ತೆಯಾಗಿದ್ದಾರೆ.

ದೇವಭೂಮಿಯಲ್ಲಿ ವರುಣಾರ್ಭಟ: ಶಿವ ದೇಗುಲ ಕುಸಿದು 9 ಭಕ್ತರ ಸಾವು

ಹಿಮಾಚಲದಲ್ಲಿ ಸರಳ ಸ್ವಾತಂತ್ರೋತ್ಸವ:

ರಾಜ್ಯದಲ್ಲಿ ಮಳೆಯಿಂದಾಗಿ ಭಾರೀ ವಿಪತ್ತು ಸಂಭವಿಸಿದ್ದರಿಂದ ಸ್ವಾತಂತ್ರೋತ್ಸವವನ್ನು ಸರಳವಾಗಿ ಆಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು ತಿಳಿಸಿದ್ದಾರೆ. ‘ರಾಜ್ಯದಲ್ಲಿ ದುರಂತ ಸಂಭವಿಸಿದ್ದರಿಂದ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿಲ್ಲ ಈಗಾಗಲೇ ಅವಘಡದಲ್ಲಿ 55 ಮಂದಿ ಸಾವನ್ನಪ್ಪಿದ್ದಾರೆ. ಜೀರ್ಣೋದ್ಧಾರ ಕಾರ್ಯಾಚರಣೆಯನ್ನು ಯುದ್ಧೋಪಾದಿಯಲ್ಲಿ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

ಕೊಡಗಿನಲ್ಲಿ ಮಳೆಗೆ ಮುರಿದು ಬಿದ್ದ 1638 ವಿದ್ಯುತ್ ಕಂಬಗಳು: 2 ಕೋಟಿ ನಷ್ಟ!

Follow Us:
Download App:
  • android
  • ios