ರಾಷ್ಟ್ರಮಟ್ಟದಲ್ಲಿ ಪ್ರತಿಧ್ವನಿಸಿದ ಕರ್ನಾಟಕ ಕರಾವಳಿಯ ಹಿಜಾಬ್ ವಿವಾದಮಾತೆ ಸರಸ್ವತಿ ಎಂದಿಗೂ ಭೇದ ತೋರಿಲ್ಲ ಎಂದು ಟ್ವೀಟ್ ಮಾಡಿದ ರಾಹುಲ್ ಗಾಂಧಿಶಿಕ್ಷಣದಲ್ಲಿ ನಿಮ್ಮ ಕೋಮುದ್ವೇಷ ತರಬೇಡಿ ಎಂದ ಬಿಜೆಪಿ

ಬೆಂಗಳೂರು (ಫೆ. 5): ಕಾಲೇಜು ತರಗತಿಗಳಲ್ಲಿ ಹಿಜಾಬ್ (Hijab) ಧರಿಸಿ ಪಾಠ ಕೇಳಲು ಅನುಮತಿ ನೀಡುವಂತೆ ಉಡುಪಿಯಲ್ಲಿ (Udupi) ಬಾಲಕಿಯರು ನಡೆಸುತ್ತಿದ್ದ ಪ್ರತಿಭಟನೆ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಶನಿವಾರ ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi), ಹಿಬಾಜ್ ಪರವಾಗಿ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳ ಪರವಾಗಿ ನಿಂತಿದ್ದಾರೆ. ಇದರ ಬೆನ್ನಲ್ಲಿಯೇ ಕರ್ನಾಟಕ ಬಿಜೆಪಿ (Karnataka BJP) ಕೂಡ ಇದರ ಬಗ್ಗೆ ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿ, ಶಿಕ್ಷಣದಲ್ಲಿ ಕೋಮುದ್ವೇಷ ತರುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

ಸರಸ್ವತಿ ಪೂಜೆಯ ಸಂದರ್ಭದಲ್ಲಿ, ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ಅನುಮತಿಸದ ಕಾಲೇಜು ಅಧಿಕಾರಿಗಳ ನಿರ್ಧಾರವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, "ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ. "ವಿದ್ಯಾರ್ಥಿಗಳ ಹಿಜಾಬ್ ಅವರ ಶಿಕ್ಷಣದ ಹಾದಿಯಲ್ಲಿ ಬರಲು ಬಿಡುವ ಮೂಲಕ, ನಾವು ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದೇವೆ. ಮಾ ಸರಸ್ವತಿ ಎಲ್ಲರಿಗೂ ಜ್ಞಾನವನ್ನು ನೀಡುತ್ತಾಳೆ, ಅವರು ಭೇದಭಾವವನ್ನು ಹೊಂದಿಲ್ಲ" ಎಂದು ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದು, ಸರಸ್ವತಿ ಪೂಜೆ ಎನ್ನುವ ಹ್ಯಾಶ್ ಟ್ಯಾಗ್ ಅನ್ನೂ ಬಳಸಿದ್ದಾರೆ.

ರಾಹುಲ್ ಗಾಂಧಿಯವರ ಟ್ವೀಟ್‌ಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಕರ್ನಾಟಕ ಬಿಜೆಪಿ, "ಶಿಕ್ಷಣವನ್ನು ಕೋಮುವಾದಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ" ಎನ್ನುವ ಮೂಲಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

Scroll to load tweet…


"ಶಿಕ್ಷಣವನ್ನು ಕೋಮುವಾದಗೊಳಿಸುವ ಮೂಲಕ, ಕಾಂಗ್ರೆಸ್ ಸಹ-ಮಾಲೀಕ ರಾಹುಲ್ ಗಾಂಧಿ ಅವರು ಭಾರತದ ಭವಿಷ್ಯಕ್ಕೆ ಅಪಾಯಕಾರಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಶಿಕ್ಷಣ ಪಡೆಯಲು ಹಿಜಾಬ್ ತುಂಬಾ ಅವಶ್ಯಕವಾಗಿದ್ದರೆ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ರಾಹುಲ್ ಗಾಂಧಿ ಅದನ್ನು ಏಕೆ ಕಡ್ಡಾಯಗೊಳಿಸುವುದಿಲ್ಲ? " ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.

Scroll to load tweet…


ಉಡುಪಿ ಜಿಲ್ಲೆಯ ಕಾಲೇಜಿನಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿ(Hijab Row) ಬಂದಿದ್ದಕ್ಕೆ ತರಗತಿಯೊಳಗೆ ಬಿಡದ ಕಾರಣ ವಿವಾದ ಸೃಷ್ಟಿಯಾಗಿತ್ತು. ಬಳಿಕ ಈ ಹಿಜಾಬ್ ವಿವಾದದ ಕಿಚ್ಚು ರಾಜ್ಯದ ಇತರ ಕಡೆಗಳಿಗೂ ವ್ಯಾಪಿಸಿದ್ದು ಮಾತ್ರವಲ್ಲದೇ ಈಗ ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗೊದೆ. ಈ ಕುರಿತಾಗಿ ಪ್ರಮುಖ ರಾಜಕೀಯ ಮುಖಂಡರು ಪರ-ವಿರೋಧ ಹೇಳಿಕೆ ನೀಡುತ್ತಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಬಂದರೆ ಏನಾಗುತ್ತದೆ? ಹಿಜಾಬ್ ಧರಿಸಲು ಬಿಜೆಪಿಯವರು ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ? ಈ ವಿಚಾರದಲ್ಲಿ ಬಿಜೆಪಿ ಸಂಪೂರ್ಣವಾಗಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Hijab Controversy: ಹಿಜಾಬ್‌ಗೆ ಸರ್ಕಾರ ಅವಕಾಶ ಕೊಡಲ್ಲ: ನಳಿನ್ ಕುಮಾರ್
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ಹೆಣ್ಣು ಮಕ್ಕಳನ್ನು ತರಗತಿಗೆ ಹೋಗದಂತೆ ತಡೆಯುವುದು ಅಮಾನವೀಯ ಮತ್ತು ಮುಸ್ಲಿಂ ಹೆಣ್ಣು ಮಕ್ಕಳಿಗೆ(Muslim Girls) ಶಿಕ್ಷಣ ನಿರಾಕರಿಸುವ ಪ್ರಯತ್ನ ಇದಾಗಿದೆ. ಅವರು ಹಿಜಾಬ್ ಧರಿಸಿದರೆ ಏನು ಸಮಸ್ಯೆ?’ ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಪ್ರಶ್ನಿಸಿ ಬಿಜೆಪಿ(BJP Government) ಮತ್ತು ಆರ್ ಎಸ್ ಎಸ್ ವಿರುದ್ಧ ಟೀಕೆ ಮಾಡಿದ್ದರು. ಸಿದ್ದರಾಮಯ್ಯರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ‘ಶಿಕ್ಷಣ ವ್ಯವಸ್ಥೆಯಲ್ಲಿ ಕೋಮುವಾದವನ್ನು ತರಲು ಸಿದ್ದರಾಮಯ್ಯ(Siddaramaiah) ಪ್ರಯತ್ನಿಸುತ್ತಿದ್ದಾರೆ’ ಅಂತಾ ಆರೋಪಿಸಿದೆ. ಹಿಜಾಬ್ ವಿವಾದದ ಕಿಚ್ಚು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಉಡುಪಿ, ಕುಂದಾಪುರದಲ್ಲಿ ಕಾಲೇಜುಗಳಲ್ಲಿ ಇಂದು ರಜೆ ಘೋಷಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದು, ಕೆಲವೆಡೆ ಹಿಜಾಬ್ ಗೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿರುವುದು ವರದಿಯಾಗಿದೆ.