ಕರ್ನಾಟಕ ಬಳಿಕ ಜಮ್ಮುಕಾಶ್ಮೀರದಲ್ಲೂ ಹಿಜಾಬ್ ವಿವಾದ, ವಿಶ್ವ ಭಾರತಿ ಶಾಲೆಯಲ್ಲಿ ಬಾಲಕಿಯರ ಪ್ರತಿಭಟನೆ!
ಕರ್ನಾಟಕದಲ್ಲಿ ಹಿಜಾಬ್ ಗಲಾಟೆ ಕಳೆದ ಬಿಜೆಪಿ ಸರ್ಕಾರಕ್ಕೆ ದೊಡ್ಡ ತಲೆನೋವು ತಂದಿಟ್ಟ ಬಳಿಕ, ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಹಿಜಾಬ್ ವಿವಾದ ಆರಂಭವಾಗಲಿದೆ. ಶಾಲೆಯಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಬೇಕು ಎಂದು ಬಾಲಕಿಯರು ಪ್ರತಿಭಟನೆ ನಡೆಸಿದ್ದಾರೆ.
ಶ್ರೀನಗರ (ಜೂ.8): ಕರ್ನಾಟಕದಲ್ಲಿ ಧರ್ಮದಂಗಲ್‌ಗೆ ಮೂಲ ಕಾರಣವಾಗಿದ್ದ ಹಿಜಾಬ್ ವಿವಾದ ಈಗ ಭಾರತದ ತುತ್ತತುದಿ ಜಮ್ಮು ಕಾಶ್ಮೀರದವರೆಗೂ ತಲುಪಿದೆ. ಶ್ರೀನಗರದ ರೈನಾವಾರಿ ಪ್ರದೇಶದಲ್ಲಿರುವ ವಿಶ್ವ ಭಾರತಿ ಮಹಿಳಾ ಶಾಲೆಯ ವಿದ್ಯಾರ್ಥಿನಿಯರು ತಮಗೆ ಶಾಲೆಯ ಅಡಳಿತ ಮಂಡಳಿ ಹಿಜಾಬ್ ಧರಿಸಿ ತರಗತಿಗೆ ಹೋಗಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಹಿಜಾಬ್ ನಮ್ಮ ಧರ್ಮದ ಭಾಗವಾಗಿದೆ ಮತ್ತು ನಾವು ಅದನ್ನು ತೆಗೆದುಹಾಕುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಬೇರೆ ಶಾಲೆಗಳಲ್ಲಿ ಹಿಜಾಬ್ ಧರಿಸಿ ಶಾಲೆಗೆ ಬರಲು ಅವಕಾಶ ನೀಡಿರುವಾಗ ನಮ್ಮ ಶಾಲೆಯಲ್ಲಿ ಅನುಮತಿಯನ್ನು ನಿರಾಕರಣೆ ಮಾಡಿರೋದೇಕೆ? ಶಾಲೆಯ ಆಡಳಿತ ಮಂಡಳಿಯ ಈ ಆದೇಶದ ವಿರುದ್ಧ ವಿದ್ಯಾರ್ಥಿನಿಯರು ರಸ್ತೆಗಿಳಿದು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುಸ್ಲಿಂ ವಿದ್ಯಾರ್ಥಿನಿಯರು, ಶಾಲೆಯ ಆಡಳಿತವು ಈ ವಿಷಯವನ್ನು ಧಾರ್ಮಿಕ ವಿಚಾರವನ್ನಾಗಿ ಮಾಡುತ್ತಿದೆ. ತಮ್ಮ ಧರ್ಮದ ವಿರುದ್ಧ ಶಾಲೆಯ ಆಡಳಿತ ಮಂಡಳಿ ಕೋಮುವಾದಿ ಹೇಳಿಕೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಒಂದೋ ಹಿಜಾಬ್ ಅನ್ನು ತೆಗೆಯಿರಿ ಇಲ್ಲವೇ ದರ್ಗಾಕ್ಕೆ ಹೋಗಿ ಎಂದು ಶಾಲಾ ಆಡಳಿತ ಮಮಡಳಿ ನಮಗೆ ಹೇಳಿದೆ ಎಂದು ಮುಸ್ಲಿ ಬಾಲಕಿ ಹೇಳಿದ್ದಾಳೆ. ಹಿಜಾಬ್ ಧರಿಸಿದ ಹೆಣ್ಣುಮಕ್ಕಳಿಗೆ ಶಿಕ್ಷಣ ಪಡೆಯುವ ಹಕ್ಕಿಲ್ಲವೇ ಎಂಬುದು ಹೆಣ್ಣುಮಕ್ಕಳ ಪ್ರಶ್ನೆ ಮಾಡಿದ್ದಾರೆ.
ಶಾಲೆಯ ಆಡಳಿತದಿಂದ ಸ್ಪಷ್ಟನೆ: ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯೆ ಆಗಿರುವ ಮೀಮ್ ರೋಸ್ ಶಾಫಿ ಸ್ಪಷ್ಟನೆ ನೀಡಿದ್ದು, ಶಾಲೆಯಲ್ಲಿ ಮುಖ ಮುಚ್ಚಿಕೊಂಡು ಕೂರುವಂತಿಲ್ಲ. ಮುಖವನ್ನು ತೋರಿಸಿ ಕುಳಿತುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಈ ವಿಚಾರದಲ್ಲಿ ಕೆಲವು ತಪ್ಪು ತಿಳುವಳಿಕೆ ಉಂಟಾಗಿದೆ ಎಂದು ಹೇಳಿದ್ದಾದೆ. ನಾವು ಹೇಳಿದ್ದು ಇಷ್ಟೇ, ನಮ್ಮ ಶಾಲೆಯಲ್ಲಿ ಸಾಕಷ್ಟು ಹೆಣ್ಣುಮಕ್ಕಳು ಸಂಪೂರ್ಣವಾಗಿ ಮುಖವನ್ನು ಹಿಜಾಬ್‌ನಿಂದ ಮುಚ್ಚಿಕೊಳ್ಳುತ್ತಿದ್ದಾರೆ. ಅದಾಗಬಾರದು. ಶಾಲೆಯ ಆವರಣದ ಒಳಗೆ ಅವರು ಮುಖವನ್ನು ಸಂಪೂರ್ಣವಾಗಿ ತೆರೆದುಕೊಂಡಿರಬೇಕು. ಎಲ್ಲರೂ ಹಿಜಾಬ್ ಧರಿಸಿಕೊಂಡು, ಮುಖವನ್ನು ಮುಚ್ಚಿಕೊಳ್ಳುವ ಕಾರಣ, ವಿದ್ಯಾರ್ಥಿಗಳನ್ನು ಗುರುತಿಸುವುದು ಸಾಧ್ಯವಾಗೋದಿಲ್ಲ. ಅದರಲ್ಲೂ ಕೆಲವು ತರಗತಿಗಳಲ್ಲಿ ಮಕ್ಕಳು ಹುಸಿ ಹಾಜರಾತಿಯನ್ನೂ ಮಾಡುತ್ತಿದ್ದಾರೆ. ಪರೀಕ್ಷ ಸಮಯದಲ್ಲೂ ಸಮಸ್ಯೆಗಳಾಗುತ್ತಿದೆ. ಬೇರೆಯವರ ಪರವಾಗಿ ಅಟೆಂಡೆನ್ಸ್ ಹೇಳುವುದನ್ನು ಗಮನಿಸೋದು ಸಾಧ್ಯವಾಗೋದಿಲ್ಲ. ಈ ಕಾರಣಕ್ಕಾಗಿ ಶಾಲೆಯ ಆವರಣದಲ್ಲಿ ಮುಖವನ್ನು ತೆರೆದುಕೊಂಡಿರಬೇಕು ಎಂದು ಸೂಚನೆ ನೀಡಿದ್ದೇವೆ ಎಂದಿದ್ದಾರೆ.
ಶಾಲೆಯ ಡ್ರೆಸ್‌ಕೋಡ್‌ನಲ್ಲಿ ಹಿಜಾಬ್ ಇದೆ: ಅದಲ್ಲದೆ, ಶಾಲೆಯ ಡ್ರೆಸ್‌ಕೋಡ್‌ನಲ್ಲೂ ಹಿಜಾಬ್ ಇದೆ. ಈ ಹಿಂದೆಯೇ ಇದನ್ನು ಅಳವಡಿಸಿಕೊಳ್ಳಲಾಗಿದೆ. ಬಣ್ಣದ ಹಿಜಾಬ್‌ಅನ್ನು ಧರಿಸಬೇಕು ಎಂದು ತಿಳಿಸಲಾಗಿದೆ. ಆದರೆ ಹೆಚ್ಚಿನ ಬಾಲಕಿಯರು ಕಪ್ಪು ಬಣ್ಣದ ಅಥವಾ ವಿಶೇಷ ವಿನ್ಯಾಸದ ಹಾಗೂ ಬಿಳಿ ಬಣ್ಣದ ಹಿಜಾಬ್ ಅನ್ನು ಧರಿಸಿ ಶಾಲೆಗೆ ಬರುತ್ತಿದ್ದಾರೆ. ಹಾಗಾಗಿ ನೀವು ಹಿಜಾಬ್ ಧರಿಸಿಯೇ ಶಾಲೆಗೆ ಬರಬೇಕಾಗಿದ್ದಲ್ಲಿ ಬಿಳಿ ಬಣ್ಣದ ಹಿಜಾಬ್ ಧರಿಸಿ ಬನ್ನಿ. ಇದು ಶಾಲೆಯ ಡ್ರೆಸ್ ಕೋಡ್ ಕೂಡ ಆಗಿದೆ ಎಂದು ಅವರು ತಿಳಿಸಿದ್ದಾರೆ.
ಹಿಜಾಬ್ ಬಗ್ಗೆ ಸಾಹಿತಿಗಳಿಂದ ಅನಗತ್ಯ ಗೊಂದಲ: ಶಾಸಕ ಯಶ್ಪಾಲ್ ಗರಂ
ಕರ್ನಾಟದಲ್ಲಿ 2021ರ ಡಿಸೆಂಬರ್‌ನಲ್ಲಿ 6 ಮುಸ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಶಾಲೆಯ ಆವರಣಕ್ಕೆ ಹೋಗಲು ಅವಕಾಶ ನೀಡಲಾಗಿರಲಿಲ್ಲ. ಇದಕ್ಕಾಗಿ ಅವರು ಧರಣಿಗೆ ಕುಳಿತಿದ್ದರು. ಇದು ರಾಜ್ಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇನ್ನೊಂದೆಡೆ, ಹಿಜಾಬ್‌ಗೆ ಅವಕಾಶ ನೀಡಿದರೆ, ಶಾಲೆಗೆ ಕೇಸರಿ ಶಾಲು ಧರಿಸಿ ಬರುವುದಾಗಿ ಹಿಂದು ವಿದ್ಯಾರ್ಥಿಗಳು ಹೇಳಿದ್ದರು. ಆ ಬಳಿಕ ಅಂದಿನ ಬಿಜೆಪಿ ಸರ್ಕಾರ ಶಾಲೆಯ ಆವರಣದಲ್ಲಿ ಹಿಜಾಬ್‌ಗೆ ಅವಕಾಶವಿಲ್ಲ ಎಂದು ಹೇಳಿತ್ತು. ಪ್ರಸ್ತುತ ಇದರ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ.
ಹಿಂದೂ ವಿದ್ಯಾರ್ಥಿಗಳಿಗೂ ಹಿಜಾಬ್ ಕಡ್ಡಾಯಗೊಳಿಸಿದ ಶಾಲೆ