ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ನನ್ನು ಫರ್ಲೋ ಮೇಲೆ ಬಿಡುಗಡೆ  21 ದಿನಗಳ ಅವಧಿಗೆ ಫರ್ಲೋ, ಕುತೂಹಲ ಮೂಡಿಸಿದ ನಡೆ ತಾಯಿ ಭೇಟಿಗೆ ರಹಸ್ಯ ಪರೋಲ್‌ ಪಡೆದಿದ್ದ ಗುರ್ಮಿತ್‌

ಚಂಡೀಗಢ(ಫೆ.08): ಕೊಲೆ ಮತ್ತು ಅತ್ಯಾಚಾರ ಅಪರಾಧದಡಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ನನ್ನು(gurmeet ram rahim singh) ಫರ್ಲೋ ಮೇಲೆ ಬಿಡುಗಡೆ ಮಾಡಲಾಗಿದೆ. ಗುರ್ಮೀತ್‌, ಪಂಜಾಬ್‌ನಲ್ಲಿ(Punjab) ಭಾರೀ ಹಿಂಬಾಲಕರನ್ನು ಹೊಂದಿರುವ ಹಿನ್ನೆಲೆಯಲ್ಲಿ ಚುನಾವಣೆ(Election 2022) ಸಮಯದಲ್ಲೇ ಅವರಿಗೆ ಫರ್ಲೋ ನೀಡಿರುವುದು ಕುತೂಹಲ ಮೂಡಿಸಿದೆ. 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಗುರ್ಮೀತ್‌ರನ್ನು 21 ದಿನಗಳ ಅವಧಿಗೆ ಫರ್ಲೋ(furlough) ಮೇಲೆ ಬಿಡುಗಡೆ ಮಾಡಲಾಗಿದೆ. ಕಡಿಮೆ ಸಮಯಕ್ಕೆ ಬಿಡುಗಡೆ ಮಾಡುವ ವೇಳೆ ಪರೋಲ್‌ ನೀಡಲಾಗುತ್ತದೆ, ದೀರ್ಘ ಅವಧಿಗೆ ಬಿಡುಗಡೆ ಮಾಡಲು ಫರ್ಲೋ ನೀಡಲಾಗುತ್ತದೆ.

ತಾಯಿ ಭೇಟಿಗೆ ರಹಸ್ಯ ಪರೋಲ್‌ ಪಡೆದಿದ್ದ ಗುರ್ಮಿತ್‌
 ಗುರ್ಮೀತ್‌ ರಾಮ್‌ ರಹೀಮ್‌ ಕಳೆದ ಅಕ್ಟೋಬರ್‌ನಲ್ಲಿ ಹರಾರ‍ಯಣ ಸರ್ಕಾರದಿಂದ ಒಂದು ದಿನದ ಮಟ್ಟಿಗೆ ಗೌಪ್ಯವಾಗಿ ಪರೋಲ್‌ ಪಡೆದಿದ್ದರು. ಅನಾರೋಗ್ಯ ಪೀಡಿತರಾಗಿ ಗುರುಗ್ರಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 85 ವರ್ಷದ ತಾಯಿ ನಸೀಬ್‌ ಕೌರ್‌ ನೋಡುವ ಸಲುವಾಗಿ ವಿವಾದಿತ ಬಾಬಾ ಹರಾರ‍ಯಣ(Haryana) ಸರ್ಕಾರದಿಂದ ಅ.24ರಂದು ಗೌಪ್ಯವಾಗಿ ಪರೋಲ್‌(parole) ಪಡೆದಿದ್ದ. ಸುನಾರಿಯಾ ಕಾರಾಗೃಹದಿಂದ ಭಾರೀ ಭದ್ರತೆಯಲ್ಲಿ ಆಸ್ಪತ್ರೆಗೆ ಬಂದು ಸಂಜೆವರೆಗೂ ತಾಯಿಯೊಂದಿಗಿದ್ದು ಬಳಿಕ ಪೊಲೀಸ್‌ ವಾಹನದಲ್ಲಿಯೇ ಜೈಲಿಗೆ ವಾಪಸ್ಸಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಭದ್ರತಾ(Security) ದೃಷ್ಟಿಯಿಂದ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಮತ್ತಿತರ ಅಧಿಕಾರಿಗಳ ಹೊರತಾಗಿ ಬೇರೆ ಯಾರಿಗೂ ಈ ಮಾಹಿತಿ ಲಭಿಸದಂತೆ ಗೌಪ್ಯತೆ ಕಾಪಾಡಲಾಗಿತ್ತು. ಈ ಹಿಂದೆ ಗುರ್ಮೀತ್‌ ಜುಲೈನಲ್ಲಿ 42 ದಿನ ಪರೋಲ್‌ ಕೇಳಿ ಬಳಿಕ ವಾಪಸ್‌ ಪಡೆದಿದ್ದ.

ಸ್ವಯಂ ಘೋಷಿತ ದೇವಮಾನವನಿಗೆ ಮತ್ತೊಂದು ಪ್ರಕರಣದಲ್ಲಿ ಜೀವಾವಧಿ!

ರಂಜಿತ್‌ ಕೊಲೆ ಕೇಸಲ್ಲಿ ಡೇರಾ ಮುಖ್ಯಸ್ಥ ಗುರ್ಮೀತ್‌ ದೋಷಿ
2002ರಲ್ಲಿ ನಡೆದ ರಂಜಿತ್‌ ಸಿಂಗ್‌ ಕೊಲೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ಮತ್ತು ಇತರೆ ನಾಲ್ವರನ್ನು ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಮಾನಿಸಿದೆ. ಈ ಕುರಿತು ಶುಕ್ರವಾರ ತೀರ್ಪು ಪ್ರಕಟಿಸಿದ ಪಂಚಕುಲ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಅ.12ರಂದು ಪ್ರಕಟಿಸುವುದಾಗಿ ತಿಳಿಸಿತು.

ಅನುಯಾಯಿ ಮಹಿಳೆಯರೊಂದಿಗೆ ತಾನು ಲೈಂಗಿಕ ಸಂಪರ್ಕ ಹೊಂದಿರುವುದಾಗಿ ರಂಜೀತ್‌ ಸಿಂಗ್‌ ಅನಾಮಧೇಯ ಕರಪತ್ರಗಳನ್ನು ಹಂಚುತ್ತಿದ್ದಾನೆ ಎಂದು ಶಂಕಿಸಿದ್ದ ಗುರ್ಮೀತ್‌ 2002ರಲ್ಲಿ ತನ್ನ ಅನುಯಾಯಿಯಾಗಿದ್ದ ರಂಜಿತ್‌ನ ಹತ್ಯೆ ಮಾಡಿಸಿದ್ದ. 2003ರಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ತನಿಖೆ ನಡೆಸಿದ್ದ ಸಿಬಿಐ 2007ರಲ್ಲಿ ಆರೋಪಪಟ್ಟಿಸಲ್ಲಿಸಿತ್ತು. ಅದರ ವಿಚಾರಣೆ ಪೂರ್ಣಗೊಂಡು ಇದೀಗ ನ್ಯಾಯಾಲಯ ತೀರ್ಪು ನೀಡಿದೆ. ಗುರ್ಮಿತ್‌ ಸಿಂಗ್‌ ಈಗಾಗಲೇ ಅತ್ಯಾಚಾರ ಪ್ರಕರಣವೊಂದರಲ್ಲಿ 20 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದಾನೆ.

Fact Check| ಅತ್ಯಾಚಾರಿ ಗುರ್ಮಿತ್ ಬಳಸಿದ್ದ ಹೆಲಿಕಾಪ್ಟರ ಬಳಸಿದ ಮೋದಿ?

ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣ
2002ರಲ್ಲಿ ಪತ್ರಕರ್ತ ರಾಮ ಚಂದರ್‌ ಛತ್ರಪತಿ ಕೊಲೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಪಂಥದ ವಿವಾದಿತ ಧರ್ಮಗುರು ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ಹಾಗೂ ಇತರ ಮೂವರು ದೋಷಿ ಎಂದು ಸಿಬಿಐ ಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ.

ಕುಲ್ದೀಪ್‌ ಸಿಂಗ್‌, ನಿರ್ಮಲ್‌ ಸಿಂಗ್‌ ಮತ್ತು ಕೃಷ್ಣನ್‌ ಲಾಲ್‌ ಇತರ ಮೂವರು ದೋಷಿಗಳಾಗಿದ್ದಾರೆ. ಭಕ್ತೆಯರ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ಈಗಾಗಲೇ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

ಏನಿದು ಪ್ರಕರಣ?:
ರಾಮ್‌ ರಹೀಮ್‌ ಸಿಂಗ್‌ ಮಹಿಳೆಯರನ್ನು ಲೈಂಗಿಕವಾಗಿ ಷೋಷಣೆ ಮಾಡುತ್ತಿರುವ ಬಗ್ಗೆ ‘ಪೂರಾ ಸಚ್‌’ ಎಂಬ ಪತ್ರಿಕೆಯಲ್ಲಿ ಅನಾಮಧೇಯ ಪತ್ರವೊಂದನ್ನು ಪ್ರಕಟಿಸಿದ್ದಕ್ಕೆ ಪತ್ರಕರ್ತ ರಾಮಚಂದರ್‌ ಛತ್ರಪತಿ ಅವರನ್ನು 2002ರ ಅಕ್ಟೋಬರ್‌ನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.