Asianet Suvarna News Asianet Suvarna News

ಮೋದಿ ಹೇಳಿದಂತೆ ಮೇ.31ರ ವರೆಗೆ ಲಾಕ್‌ಡೌನ್ ವಿಸ್ತರಣೆ‌: ಏನಿರುತ್ತೆ? ಏನಿರಲ್ಲ?

ಇಂದು (ಭಾನುವಾರ) ಮುಕ್ತಾಯಗೊಳ್ಳಬೇಕಿದ್ದ ದೇಶವ್ಯಾಪಿ ಲಾಕ್ ಡೌನ್ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಮುಂದುವರಿಸಿ ಆದೇಶ ಹೊರಡಿಸಿದೆ. ಹಾಗಾದ್ರೆ ಈ ಹೊಸ ರೀತಿಯ ಲಾಕ್‌ಡೌನ್‌ ವೇಳೆ ಏನಿರುತ್ತೆ? ಏನಿರಲ್ಲ? ಎನ್ನುವ ವಿವರ ಈ ಕೆಳಗಿನಂತಿದೆ.

Here Is guidelines of 4th lockdown Till May 31
Author
Bengaluru, First Published May 17, 2020, 7:34 PM IST

ನವದೆಹಲಿ, (ಮೇ.17): ದೇಶದಲ್ಲಿ ಮತ್ತೆ ಲಾಕ್‌ಡೌನ್ ಮುಂದುವರಿಸಲಾಗಿದ್ದು, ಸೋಮವಾರದಿಂದ ಜನಜೀವನ ಸಹಜ ಸ್ಥಿತಿಗೆ ಬರಬಹುದೆಂಬ ನಿರೀಕ್ಷೆ  ಹುಸಿಯಾಗಿದೆ. ಸದ್ಯ ಇರುವ ಲಾಕ್​ಡೌನ್​ ಅವಧಿಯನ್ನು ಇನ್ನೂ ಎರಡುವಾರಗಳ ಕಾಲ ಅಂದರೆ ಮೇ 31ರವರೆಗೆ ವಿಸ್ತರಣೆ ಮಾಡಿ ಆದೇಶ ನೀಡಿದ್ದು, ಲಾಕ್​ಡೌನ್​ 4.0 ಹೊಸ ನಿಯಮಗಳೊಂದಿಗೆ ಜಾರಿಯಾಗಿದೆ.

"

ದೇಶಾದ್ಯಂತ ಲಾಕ್​ಡೌನ್ ವಿಸ್ತರಣೆ​, ಕೇಂದ್ರದಿಂದ ಅಧಿಕೃತ ಆದೇಶ

ಕೊರೋನಾ ಸೋಂಕು ಹರಡದಂತೆ ತಡೆಯಲು ಲಾಕ್ಡೌನ್ ವಿಸ್ತರಣೆ ಮಾಡಬೇಕು. ಇದರೊಂದಿಗೆ ಆರ್ಥಿಕ ಚಟುವಟಿಕೆಗಳು ದೇಶಾದ್ಯಂತ ನಡೆಯುವಂತೆ ನೋಡಿಕೊಳ್ಳಬೇಕು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್.ಡಿ.ಎಂ.ಎ.) ತಿಳಿಸಿದೆ.

ಹಾಗಾದ್ರೆ ಈ ಹಿಂದೆ ಮೋದಿ ಹೇಳಿದಂತೆ ನಾಲ್ಕನೇ ಹಂತದ ಲಾಕ್‌ಡೌನ್ ಹೊಸ ರೀತಿಯಲ್ಲಿರುತ್ತದೆ ಎಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ. ಹಾಗಾದ್ರೆ, ಹೊಸ ರೀತಿಯ ಲಾಕ್‌ಡೌನ್ 4.0ನಲ್ಲಿ ಏನಿರುತ್ತೆ? ಏನಿರಲ್ಲ? ಎನ್ನುವ ಮಾಹಿತಿ ಈ ಕೆಳಗಿನಂತಿದೆ

ನಾಲ್ಕನೇ ಹಂತದ ಲಾಕ್ ಡೌನ್ ಜಾರಿಗೊಳಿಸಿರುವ ಕೇಂದ್ರ ಸರ್ಕಾರ ಪಾಲಿಸಬೇಕಾದ ನಿಯಮಗಳು ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಉದ್ಯೋಗಿಗಳು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯವೆಂದು ಹೇಳಿದೆ.

4.0 ಲಾಕ್‌ಡೌನ್‌ ಗೈಡ್‌ಲೈನ್ಸ್

* ಉದ್ಯೋಗಿಗಳು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯ
* ಈ ಹಿಂದಿನಂತೆ ಅವಶ್ಯಕ ವಸ್ತುಗಳು ದೊರೆಯಲಿವೆ.
* ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್, ಜಿಮ್, ಚಿತ್ರಮಂದಿರ ಬಂದ್ ಮುಂದುವರಿಕೆ.
* ಅಂತರ್ ರಾಜ್ಯ ಬಸ್ ಸಂಚಾರದ ಕುರಿತು ಆಯಾ ರಾಜ್ಯ ಸರ್ಕಾರಗಳೇ ನಿರ್ಧರಿಸಬೇಕು.
* ಡೊಮೆಸ್ಟಿಕ್ ಮೆಡಿಕಲ್ ಸರ್ವಿಸ್ ಹೊರತುಪಡಿಸಿ ಯಾವುದೇ ರೀತಿಯ ಡೊಮೆಸ್ಟಿಕ್ ಹಾಗೂ ವಿದೇಶಿ ಪ್ರಯಾಣ ಇರುವುದಿಲ್ಲ.
* ದೇಶಾದ್ಯಂತ ಮೆಟ್ರೋ ರೈಲು ಸೇವೆ ಇರುವುದಿಲ್ಲ
* ಶಾಲೆ-ಕಾಲೇಜು, ತರಬೇತಿ ಕೇಂದ್ರ, ಕೋಚಿಂಗ್ ಇನ್ಸ್‌ಟ್ಯೂಟ್ಸ್ ಈ ಹಿಂದಿನಂತೆ ಬಂದ್ ಇರಲಿವೆ. (ಆನ್‌ಲೈನ್ ಟೀಚಿಂಗ್‌ಗೆ ಅನುಮತಿ.
* ಹೋಟೆಲ್, ರೆಸ್ಟೋರೆಂಟ್ ಮತ್ತೆ ಲಾಡ್ಜಿಂಗ್ ಎಲ್ಲವೂ ಬಂದ್( ಹೋಮ್ ಡೆಲಿವರಿಗೆ ಅನುಮತಿ ಇದೆ)
* ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಹಾಗೂ ಸ್ಟೇಡಿಯಂ, ಚಿತ್ರಮಂದಿರ, ಮಾಲ್, ಸ್ವಿಮ್ಮಿಂಗ್ ಪೂಲ್ಸ್, ಜಿಮ್ ಬಾರ್ ಮತ್ತು ಅಡಿಟೋರಿಯಂಗಳು, ಅಸೆಂಬ್ಲಿ ಹಾಲ್‌ಗಳು ಬಂದ,
* ಎಲ್ಲಾ ರೀತಿಯ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ, ಮನೋರಂಜನೆ ಕಾರ್ಯಕ್ರಮಗಉ ಸೇರಿದಂತೆ ಹೆಚ್ಚು ಜನರು ಸೇರುವ ಫಕ್ಷನ್‌ಗಳನ್ನು ಮಾಡುವಂತಿಲ್ಲ.
* ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಜನರು ಸೇರುವುದು ನಿಷೇಧಿಸಲಾಗಿದೆ.
* ಪ್ರಾರ್ಥನಾ ಮಂದಿರಗಳಲ್ಲಿ ಧಾರ್ಮಿಕ ಸಭೆ ಮಾಡುವಂತಿಲ್ಲ.

Follow Us:
Download App:
  • android
  • ios