ಮಹಾರಾಷ್ಟ್ರದ್ದು ಅತಿ ವೇಗಿ ಕೊರೋನಾ ವೈರಸ್!| ಅದು ಹೊಸ ರೂಪಾಂತರಿ, ಹೆಚ್ಚು ಅಪಾಯಕಾರಿ ವೈರಸ್ ಆಗಿರಬಹುದು| ನಮ್ಮ ದೇಶದಲ್ಲಿ ವಿರುದ್ಧ ಹರ್ಡ್ ಇಮ್ಯನಿಟಿ ಅಸಾಧ್ಯ: ಏಮ್ಸ್ ಮುಖ್ಯಸ್ಥ
ನವದೆಹಲಿ(ಫೆ.22): ಮಹಾರಾಷ್ಟ್ರದಲ್ಲಿ ದಿನೇದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರ ನಡುವೆಯೇ ಇನ್ನೊಂದು ಆತಂಕಕಾರಿ ಸಂಗತಿ ಹೊರಬಿದ್ದಿದ್ದು, ಈ ಬಾರಿ ಆ ರಾಜ್ಯದಲ್ಲಿ ಸೋಂಕನ್ನು ಅತ್ಯಂತ ವೇಗವಾಗಿ ಹರಡಿಸುತ್ತಿರುವುದು ಹೊಸ ರೂಪಾಂತರಿ ಕೊರೋನಾ ವೈರಸ್ ಆಗಿರಬಹುದು ಎಂದು ಹೇಳಲಾಗುತ್ತಿದೆ.
ಮಹಾರಾಷ್ಟ್ರದ 5 ಜಿಲ್ಲೇಲಿ ಲಾಕ್ಡೌನ್, ಕರ್ನಾಟಕಕ್ಕೆ ಇದು ಎಚ್ಚರಿಕೆ ಗಂಟೆ!
‘ಮಹಾರಾಷ್ಟ್ರದಲ್ಲಿ ಸೋಂಕು ಹರಡುತ್ತಿರುವುದು ಹೊಸ ಮಾದರಿಯ ಕೊರೋನಾ ವೈರಸ್ ಆಗಿರಬಹುದು. ಅದು ಹಳೆಯ ವೈರಸ್‌ಗಿಂತ ಹೆಚ್ಚು ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುವುದರ ಜೊತೆಗೆ ಹೆಚ್ಚು ಅಪಾಯಕಾರಿಯೂ ಆಗಿರಬಹುದು. ಈಗಾಗಲೇ ಕೊರೋನಾ ವಿರುದ್ಧ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿರುವವರಿಗೂ ಈ ವೈರಸ್ ಸೋಂಕು ಅಂಟಿಸಬಹುದು. ಅಲ್ಲದೆ, ಹಳೆಯ ವೈರಸ್‌ಗಿಂತ ಹೆಚ್ಚು ವೇಗವಾಗಿ ಹರಡುತ್ತಾ, ಹೆಚ್ಚು ಅಪಾಯವನ್ನೂ ಉಂಟುಮಾಡುವ ಸಾಧ್ಯತೆಯಿದೆ’ ಎಂದು ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ| ರಣದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ಭಾರತದಲ್ಲಿ ಹರ್ಡ್ ಇಮ್ಯುನಿಟಿ (ಸಾಮೂಹಿಕ ರೋಗನಿರೋಧಕ ಶಕ್ತಿ) ಎಂಬುದು ಸಾಧ್ಯವಿಲ್ಲ. ಏಕೆಂದರೆ ಹರ್ಡ್ ಇಮ್ಯುನಿಟಿ ಉತ್ಪತ್ತಿಯಾಗಬೇಕೆಂದರೆ ಶೇ.80ರಷ್ಟುಜನರಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಬೇಕು. ಮಹಾರಾಷ್ಟ್ರದಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿ ವೈರಸ್‌ನ ಸನ್ನಿವೇಶವನ್ನು ಗಮನಿಸಿದರೆ ಇದು ಅಸಾಧ್ಯ ಎಂದೂ ಅವರು ಹೇಳಿದ್ದಾರೆ.
ಮಹಾ ಸಾರಿಗೆಯಿಂದ ರಾಜ್ಯ ಸಾರಿಗೆ ನಿಗಮಕ್ಕೆ ಧಮ್ಕಿ
ದೇಶದಲ್ಲೀಗ 240 ರೂಪಾಂತರಿ ಕೊರೋನಾ:
ಮಹಾರಾಷ್ಟ್ರವಲ್ಲದೆ ಕೇರಳ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಪಂಜಾಬ್‌ನಲ್ಲೂ ಕೊರೋನಾ ಹರಡುವ ವೇಗ ಜಾಸ್ತಿಯಾಗುತ್ತಿದೆ. ದೇಶಾದ್ಯಂತ 240 ಹೊಸ ರೂಪಾಂತರಿ ವೈರಸ್‌ಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಈ ಹೊಸ ಹೊಸ ರೂಪಾಂತರಿ ವೈರಸ್‌ಗಳಲ್ಲಿ ಮನುಷ್ಯನ ರೋಗನಿರೋಧಕ ಶಕ್ತಿಯನ್ನು ಭೇದಿಸಿ ಒಳನುಗ್ಗುವ ಗುಣಗಳಿರಬಹುದು. ಹೀಗಾಗಿ ಅವು ಲಸಿಕೆ ಪಡೆದಿರುವ ಅಥವಾ ಈ ಹಿಂದೆಯೇ ಕೊರೋನಾ ತಗಲಿ ಗುಣಮುಖರಾಗಿರುವವರಿಗೂ ಸೋಂಕು ಅಂಟಿಸಬಹುದು. ಆದ್ದರಿಂದ ನಾವು ಮತ್ತೆ ಕೊರೋನಾ ಪರೀಕ್ಷೆ, ಸಂಪರ್ಕಿತರ ಪತ್ತೆ, ಐಸೋಲೇಶನ್‌ನಂತಹ ಹಳೆಯ ಮಾರ್ಗಗಳಿಗೇ ಮರಳಬೇಕಿದೆ ಎಂದು ಡಾ| ಗುಲೇರಿಯಾ ಸಲಹೆ ನೀಡಿದ್ದಾರೆ.
ಪುಣೆಯಲ್ಲಿ ನೈಟ್ ಕರ್ಫ್ಯೂ, ಅಮರಾವತಿ ಲಾಕ್‌ಡೌನ್; ಕೊರೋನಾ 2ನೇ ಅಲೆಗೆ ತತ್ತರಿಸಿದ ಮಹಾರಾಷ್ಟ್ರ!
ಸದ್ಯ ದೇಶದಲ್ಲಿ ನೀಡಲಾಗುತ್ತಿರುವ ಲಸಿಕೆಗಳು ಹೊಸ ರೂಪಾಂತರಿ ವೈರಸ್‌ಗಳ ಮೇಲೂ ಪ್ರಭಾವ ಬೀರುತ್ತವೆ. ಆದರೆ, ಅವುಗಳ ದಕ್ಷತೆ ಕಡಿಮೆಯಾಗಬಹುದು. ಉದಾಹರಣೆಗೆ, ಲಸಿಕೆ ಪಡೆದವರಿಗೂ ಇನ್ನುಮುಂದೆ ಕೊರೋನಾ ಬರಬಹುದು, ಆದರೆ ಅವರಲ್ಲಿ ಸೋಂಕಿನ ಪ್ರಮಾಣ ಅಥವಾ ಅಪಾಯ ಕಡಿಮೆಯಾಗಬಹುದು. ಹೀಗಾಗಿ ಲಸಿಕೆಗಳಲ್ಲಿ ಬದಲಾವಣೆ ಮಾಡಬೇಕೇ ಎಂಬ ಬಗ್ಗೆ ಅಧ್ಯಯನ ನಡೆಯಬೇಕು. ಆದರೆ, ಆದಷ್ಟುಹೆಚ್ಚು ಜನರಿಗೆ ತ್ವರಿತವಾಗಿ ಲಸಿಕೆ ನೀಡಬೇಕು ಎಂದು ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 22, 2021, 9:44 AM IST